ಮತ್ತೆ ಬಿಜೆಪಿ ಜೊತೆ ಹೋಗೋಣ: ಸಿಎಂ ಠಾಕ್ರೆಗೆ ಪತ್ರ ಬರೆದ ಶಿವಸೇನೆ ಎಂಎಲ್‍ಎ

Public TV
2 Min Read

– ಎನ್‍ಡಿಎ ಸೇರಿದ್ರೆ ಇಡಿ ಸಮಸ್ಯೆ ತಪ್ಪಲಿದೆ

ಮುಂಬೈ: ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸೇರಿದ್ರೆ ಲಾಭದಾಯಕ ಎಂದು ಸಿಎಂ ಉದ್ಧವ್ ಠಾಕ್ರೆ ಅವರಿಗೆ ಅವರದೇ ಪಕ್ಷದ ಶಾಸಕ ಪತ್ರ ಬರೆದಿದ್ದಾರೆ.

ಥಾಣೆಯ ಶಾಸಕ ಪ್ರತಾಪ್ ಸರ್ ನಾಯ್ಕ್ ಪತ್ರದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಮಹಾ ಅಘಾಡಿ ಮುಖ್ಯ ಉದ್ದೇಶ ಎನ್‍ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ವಿಸ್ತರಣೆಯ ಉದ್ದೇಶವಾಗಿದೆ. ಹಾಗಾಗಿ ಪಿಎಂ ಮೋದಿ ಅವರೊಂದಿಗೆ ಎನ್‍ಡಿಎ ಮೈತ್ರಿಕೂಟಕ್ಕೆ ಹಿಂದಿರುಗುವುದು ಲಾಭದಾಯಕವಾಗಿರಲಿದೆ. ಥಾಣೆ ನಗರಸಭೆ ಚುನಾವಣೆಯ ಬಗ್ಗೆಯೂ ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ ಬಿಜೆಪಿ ಚುನಾವಣೆ ಎದುರಿಸೋದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ಇಡಿ ಭಯದಲ್ಲಿ ಪ್ರತಾಪ್ ಸರ್ ನಾಯ್ಕ್: ಪ್ರತಾಪ್ ಸರ್ ನಾಯಕ್ ಮತ್ತು ಅವರ ಕುಟುಂಬದ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರಕರಣ ಸಂಬಂಧ ಬಿಜೆಪಿ ಶಾಸಕರ ವಿರುದ್ಧ ಪ್ರತಿಭಟನೆ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಆರಂಭಿಸಿದೆ. ಕಳೆದ ನೂರು ದಿನಗಳಿಂದ ಶಾಸಕರು ಅಜ್ಞಾತ ಸ್ಥಳದಲ್ಲಿದ್ದಾರೆ ಎನ್ನಲಾಗಿದೆ.

ಇಡಿ ಸಮಸ್ಯೆ ತಪ್ಪಲಿದೆ:
ಅಜ್ಞಾತಸ್ಥಳದಿಂದ ಪತ್ರ ಬರೆದಿರುವ ಶಾಸಕರು, ಮತ್ತೆ ಮೋದಿಯವರ ಎನ್‍ಡಿಎ ಒಕ್ಕೂಟ ಸೇರ್ಪಡೆಯಾಗೋದು ಉತ್ತಮ ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯ. ಎನ್‍ಡಿಎ ಒಕ್ಕೂಟ ಸೇರ್ಪಡೆಯಾಗೋದರಿಂದ ನನ್ನ ರೀತಿ ಹಲವು ಶಾಸಕರು ಕೇಂದ್ರದ ಏಜೆನ್ಸಿಗಳಿಂದಾಗುವ ಕಿರುಕುಳ ತಪ್ಪಲಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಯಾವುದೇ ಕಾರಣಗಳಿಲ್ಲದೇ ಕೇಂದ್ರದ ತನಿಖಾ ಸಂಸ್ಥೆಗಳು ತೊಂದರೆ ನೀಡುತ್ತಿವೆ. ಬಿಜೆಪಿ ಜೊತೆ ಶಿವಸೇನೆ ದೂರವಾಗಿರಬಹುದು. ಆದ್ರೆ ಕೆಲ ನಾಯಕರು ಇನ್ನೂ ಬಿಜೆಪಿ ಜೊತೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ಸರ್ ನಾಯ್ಕ್ ಆರೋಪಿಸಿದ್ದಾರೆ.

ನಮ್ಮ ಕೆಲಸಗಳು ಆಗ್ತಿಲ್ಲ:
ಎನ್‍ಸಿಪಿ ಮತ್ತು ಕಾಂಗ್ರೆಸ್ ಶಾಸಕರು ಅಭಿವೃದ್ಧಿ ಕೆಲಸಗಳು ಬೇಗ ಬೇಗ ಆಗುತ್ತಿವೆ. ನಮ್ಮ ಪಕ್ಷದ ಮುಖ್ಯಮಂತ್ರಿಗಳಿದ್ರೂ ನಮ್ಮ ಕೆಲಸಗಳನ್ನು ತಡೆ ಹಿಡಿಯಲಾಗುತ್ತಿದೆ. ಈ ಮೈತ್ರಿ ಕೇವಕ ಕಾಂಗ್ರೆಸ್ ಮತ್ತು ಎನ್‍ಸಿಪಿ ಅಭಿವೃದ್ಧಿಗಾಗಿ ಇದೆಯಾ? ಇದು ಮುಂದಿನ ದಿನಗಳಲ್ಲಿ ಶಿವಸೇನೆಯ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಪ್ರತಾಪ್ ಸರ್ ನಾಯಕ್ ಆತಂಕ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *