ಕೊರೊನಾ ಕಂಟ್ರೋಲ್ – ರಾಜ್ಯಕ್ಕೆ ಮಾದರಿಯಾದ ಬೀದರ್ ಜಿಲ್ಲಾಡಳಿತ

Public TV
2 Min Read

– ಮಾಹಾಮಾರಿ ನಿಯಂತ್ರಣಕ್ಕೆ ಆರು ಸೂತ್ರ

ಬೀದರ್: ಕೊರೊನಾ ಎರಡನೇಯ ಅಲೆಯ ಪ್ರಾರಂಭದಲ್ಲಿ ಬೆಂಗಳೂರು ನಂತರ ಬೀದರ್ ರೆಡ್ ಝೋನ್ ಆಗಿತ್ತು. ಇದೀಗ ತನ್ನ ಕಠಿಣ ಕ್ರಮಗಳ ಮೂಲಕ ಕೊರೊನಾ ನಿಯಂತ್ರಿಸಿ ಬೀದರ್ ಜಿಲ್ಲಾಡಳಿತ ರಾಜ್ಯಕ್ಕೆ ಮಾದರಿಯಾಗಿದೆ.

ಪ್ರತಿದಿನ 500 ರಿಂದ 600 ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿರೋದನ್ನ ಕಂಡ ಕೇಂದ್ರ ಸರ್ಕಾರ ಕೂಡ ಬೀದರ್ ಇನ್ ಡೆಂಜರ್ ಎಂದು ಹೇಳಿತ್ತು. ಇದನ್ನು ಅರಿತುಕೊಂಡ ಜಿಲ್ಲಾಡಳಿತ ಜಿಲ್ಲೆಯಲ್ಲಿ ಹಲವಾರು ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿತ್ತು. ಮಹಾಮಾರಿಯ ನಿಯಂತ್ರಣಕ್ಕಾಗಿ ಬೀದರ್ ಜಿಲ್ಲಾಡಳಿತ ಆರು ಸೂತ್ರಗಳನ್ನು ಪಾಲನೆ ಮಾಡಿಕೊಂಡಿತು.

ಆರು ಸೂತ್ರಗಳು:
1. ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಒಗ್ಗಟ್ಟಿನ ಮಂತ್ರ ಜಪಿಸಿ ಕೊರೊನಾ ಸ್ಫೋಟಕ್ಕೆ ಕಡಿವಾಣ ಹಾಕಲಾಯಿತು.
2 .ಸ್ಥಳೀಯ ಅಧಿಕಾರಿಗಳಿಗೆ ಕೊರೊನಾ ನಿಯಮಗಳನ್ನು ಕಠಿಣವಾಗಿ ಅನುಷ್ಠಾನಗೊಳಿಸುವಂತೆ ಡಿಸಿ ಖಡಕ್ ಸೂಚನೆ ನೀಡಿದ್ದರು.
3 .ಜಿಲ್ಲಾಧಿಕಾರಿ ಕಚೇರಿಯಲ್ಲಿ ವಾರ್ ರೂಂ ಮಾಡಿ ಕೊರೊನಾ ಸ್ಥಿತಿಗತಿಗಳ ಬಗ್ಗೆ ಮಾಹಿತಿ.
4. ಪ್ರತಿದಿನ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸತತ ಸಭೆಯ ಎಫೆಕ್ಟ್.
5. ಸೆಮಿ ಲಾಕ್‍ಡೌನ್ ಪಾಲನೆಗೆ ಕಠಿಣ ಕ್ರಮ ತೆಗೆದುಕೊಂಡ ಜಿಲ್ಲಾಡಳಿತ
6. ಸಕಾಲದಲ್ಲಿ ಸೋಂಕು ಪತ್ತೆ ಹಚ್ಚಿ, ಚಿಕಿತ್ಸೆ ಹಾಗೂ ಔಷಧಿ ನೀಡಿ ಸೋಂಕಿಗೆ ಕಡಿವಾಣ.

ಈ ರೀತಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾದ ಪರಿಣಾಮ ಕಳೆದ 20 ದಿನಗಳಿಂದ ಕೊರೊನಾ ಪಸರಿಸುವಿಕೆ ಪ್ರಮಾಣ ಶೇ.3ರ ಆಸುಪಾಸಿಗೆ ಬಂದಿದೆ. ಹೀಗಾಗಿ ಬೀದರ್ ಜಿಲ್ಲಾಡಳಿತ ಕೊರೊನಾ ಕಟ್ಟಿ ಹಾಕುವುದರಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ.

ಚುನಾವಣಾ ನೀತಿ ಸಂಹಿತೆ ಹಾಗೂ ಲಾಕ್‍ಡೌನ್ ಜಾರಿಯಿಂದಾಗಿ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗಿದೆ. ಜೊತೆಗೆ ಪೊಲೀಸರ ಕಠಿಣ ಕ್ರಮಗಳು, ಆರೋಗ್ಯ ಇಲಾಖೆಯ ಪರಿಶ್ರಮ ಹಾಗೂ ಜನರ ಸಹಕಾರದಿಂದಾಗಿ ಇಂದು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಕಡಿಮೆಯಾಗಿದೆ. ಸರ್ಕಾರದ ಗುರಿಯಂತೆ 2 ಸಾವಿರದಿಂದ 3 ಸಾವಿರ ಪ್ರತಿದಿನ ಕೊರೊನಾ ಟೆಸ್ಟ್ ಮಾಡುತ್ತಿದ್ರೂ ಸೋಂಕಿನ ಪ್ರಮಾಣ ಇಳಿಕೆಯಾಗಿದೆ.

ಲಾಕ್‍ಡೌನ್ ಮುಗಿದ ಬಳಿಕ ಮತ್ತೆ ಪಾಸಿಟಿವಿಟಿ ರೇಟ್ ಹೆಚ್ಚಾಗುವ ಸಾಧ್ಯತೆಗಳಿವೆ. ಹಾಗಾಗಿ ಯಾರು ಕೋವಿಡ್ ನಿಯಮಗಳನ್ನು ನಿರ್ಲಕ್ಷ್ಯ ಮಾಡಬಾರದು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಜಿಲ್ಲೆಯ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *