ಸೇತುವೆ ಮೇಲೆ ನಡೆಯಿತು ವಿಶೇಷ ಮದುವೆ

Public TV
1 Min Read

ತಿರುವನಂತಪುರಂ: ಕೊರೊನ ಲಾಕ್‍ಡೌನ್ ಇರುವುದರಿಂದ ಕೇರಳ, ತಮಿಳುನಾಡು ನಡುವೆ ಇರೋ ಈ ಸೇತುವೆಯೊಂದು ಈಗ ಮದುವೆಗಳಿಗೆ ಹಾಟ್‍ಸ್ಪಾಟ್ ಆಗಿದೆ. ಕಳೆದ ಲಾಕ್‍ಡೌನ್ ಸಂದರ್ಭದಲ್ಲೇ 11 ಮದುವೆಗಳು ನೆರೆವೇರಿವೆ.

ಕೇರಳ, ತಮಿಳುನಾಡು ಪ್ರತ್ಯೆಕಿಸೋ ಚಿನಾರ್ ನದಿಯ ಸೇತುವೆ ಈಗ ಮದುವೆ ಆಗೋ ಜೋಡಿಗಳಿಗೆ ಫೇವರಿಟ್ ಸ್ಟಾಟ್ ಆಗಿದೆ. ಕಳೆದ ಸೋಮವಾರ ಇಲ್ಲಿ ಮತ್ತೊಂದು ಮದುವೆ ನೆರವೇರಿದೆ. ಕೇರಳದ ಇಡುಕ್ಕಿಯ ಮರಯೂರು ಮೂಲದ ವರ ಉನ್ನಿಕೃಷ್ಣ, ತಮಿಳುನಾಡಿನ ದಿಂಡಿಗುಲ್ ಬತ್ಲಗುಂಡು ಮೂಲದ ವಧು ತಂಗಮಾಯಿಲ್ ಮದುವೆಯಾಗಿದ್ದಾರೆ.

 ಕೇರಳಕ್ಕೆ ಬರುವವರು ಕೊರೊನಾ ನೆಗೆಟಿವ್ ವರದಿ ಸಲ್ಲಿಸೋದು ಕಡ್ಡಾಯ ಆದರೆ ಅದಕ್ಕೆ ಹೆಚ್ಚಿನ ಸಮಯ ಬೇಕು ಹಾಗೂ ಖರ್ಚು ಕೂಡ ಜಾಸ್ತಿಯಗುತ್ತದೆ. ತಮಿಳುನಾಡಿನ ಉಡುಮಾಲ್ ಪೆಟ್ಟಿಯಲ್ಲಿ ಹೆಣ್ಣಿನ ಕಡೆಯವರಿಗೆ ಕೊರೊನಾ ಟೆಸ್ಟ್ ಮಾಡಿಸಲು ತಲಾ 2,600 ರೂಪಾಯಿ ಕೋಡಬೇಕಿತ್ತು. ಆದರೆ ಕುಟುಂಬದ 10 ಜನರಿಗೆ ಟೆಸ್ಟ್ ಮಾಡಿಸಬೇಕೆಂದ್ರೆ ಬರೋಬ್ಬರಿ 26 ಸಾವಿರ ರೂಪಾಯಿ ಖರ್ಚು ಮಾಡಬೇಕಿತ್ತು. ಹಾಗೇ ಆ ಕಡೆ ಕೇರಳದಲ್ಲಿ ವರನ ಮನೆಯವರು ಕೊರೊನಾ ಟೇಸ್ಟ್ ಮಾಡಿಸಲು ಖಾಸಗಿ ಲ್ಯಾಬ್‍ಗಳಿಗೆ ಹೋಗಬೇಕಿತ್ತು. ಇದಕ್ಕೆ ಹೆಚ್ಚಿನ ಸಮಯ ಹಿಡಿಯುತ್ತಿತ್ತು. ಹೀಗಾಗಿ ಉನ್ನಿ ಕೃಷ್ಣ ಬ್ರಿಡ್ಜ್ ಮೇಲೆ ಮದುವೆಯಾಗಲು ನಿರ್ಧರಿಸಿದ್ದರಂತೆ. ಇದನ್ನು ಓದಿ: ಇನ್ನೇನು ತಾಳಿ ಕಟ್ಟುವಷ್ಟರಲ್ಲಿ ಮದುವೆ ಕ್ಯಾನಲ್..!

ಮೊದಲಿಗೆ ವಧು ತನ್ನ ಕೋವಿಡ್ ನೆಗೆಟಿವ್ ವರದಿಯನ್ನು ಸಲ್ಲಿಸಿ ಸೇತುವೆಯ ಮೇಲೆ ನಡೆದುಕೊಂಡು ಹೋಗಿದ್ದಾಳೆ. ನಂತರ ವರ ಕೂಡ ರಿಪೋರ್ಟ್ ಕೊಟ್ಟು ಬಂದಿದ್ದಾನೆ. ಇಬ್ಬರು ಸೇತುವೇಯ ಮೇಲೆ ನಿಂತು ಹಾರವನ್ನು ಬದಲಿಸಿಕೊಂಡಿದ್ದಾರೆ. ತಾಳಿ ಕಟ್ಟುವಾಗ ವಧು-ವರರಿಬ್ಬರ ಕುಟುಂಬಗಳು ಸೇತುವೆಯ ಎರಡೂ ಬದಿಯಲ್ಲಿ ನಿಂತುಕೊಂಡು ಶುಭ ಸಂದರ್ಭವನ್ನು ವೀಕ್ಷಿಸಿ, ಆಶೀರ್ವದಿಸಿದ್ದಾರೆ. ಯಾವುದೇ ಪುರೋಹಿತರಿಲ್ಲದೇ ಸರಳವಾಗಿ ಮದುವೆಯಾಗಿದ್ದಾರೆ. 2 ರಾಜ್ಯಗಳ ಪೊಲೀಸ್, ಆರೋಗ್ಯ ಇಲಾಖೆ. ಅರಣ್ಯ ಇಲಾಖೆ ಅಧಿಕಾರಿಗಳು ಮದುವೆಗೆ ಸಾಕ್ಷಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *