ಕಲಬುರಗಿ: ಪ್ರೀತಿಸಿದವಳು ಬೇರೆಯವರ ಜೊತೆ ಮದುವೆಯಾಗಿದಕ್ಕೆ ಮನನೊಂದ ಅತಿಥಿ ಉಪನ್ಯಾಸಕ ಕಲಬುರಗಿಯ ಅಪ್ಪನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಅತಿಥಿ ಉಪನ್ಯಾಸಕನನ್ನು ನಗರದ ಲಾಳಗೇರಿ ಬಡಾವಣೆಯ ನಿವಾಸಿ ಅಂಬರೀಶ್ (35) ಎಂದು ಗುರುತಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ಉಪನ್ಯಾಸಕ ಹಾಗೂ ಅದೇ ಬಡಾವಣೆಯ ಯುವತಿ ಪರಸ್ಪಸ ಪ್ರೀತಿಮಾಡುತ್ತಿದ್ದರು. ಲೈಫ್ ಸೆಟ್ಲ್ ಆದ ತಕ್ಷಣ ಕುಟುಂಬಸ್ಥರನ್ನು ಒಪ್ಪಿಸಿ ಮದುವೆ ಆಗುವುದಕ್ಕೂ ನಿರ್ಧರಿಸಿದ್ದರು. ಆದರೆ ಈ ಮಧ್ಯೆ ತಾನು ಪ್ರೀತಿಸಿದ ಯುವತಿಗೆ ಕುಟುಂಬಸ್ಥರು ಬೇರೆ ಕಡೆ ಮದುವೆ ಮಾಡಿದ್ದಾರೆ.
ಇದರಿಂದ ನೊಂದ ಅಂಬರೀಶ್ ಮನೆಗೆ ಫೋನ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವದ್ದಾಗಿ ಹೇಳಿ ಕೆರೆಗೆ ಹಾರಿ ಸಾವನಪ್ಪಿದ್ದಾನೆ. ಇಂದು ಬೆಳಗ್ಗೆ ಮೃತ ಅಂಬರಿಶ್ ಶವ ನೀರಿನಲ್ಲಿ ತೇಲಿ ಬಂದಿದೆ. ಸದ್ಯ ಕಲಬುರಗಿಯ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.