ಇಂದು ದಾಖಲೆಯ 61,766 ಮಂದಿ ಡಿಸ್ಚಾರ್ಜ್- 31,183 ಪಾಸಿಟಿವ್, 451 ಬಲಿ

Public TV
1 Min Read

ಬೆಂಗಳೂರು: ಇಂದು ಕರ್ನಾಟಕದಲ್ಲಿ ಒಟ್ಟು 31,183 ಮಂದಿಗೆ ಕೊರೊನಾ ಬಂದಿದ್ದು, ದಾಖಲೆಯ 61,766 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯಾದ್ಯಂತ ಒಟ್ಟು 451 ಜನ ಕೊರೊನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ 8,214 ಮಂದಿಗೆ ಕೊರೊನಾ ದೃಢಪಟ್ಟಿದ್ದು, 200 ಜನ ಬಲಿಯಾಗಿದ್ದಾರೆ.

ಇಂದು 17,526 ಆಂಟಿಜನ್ ಟೆಸ್ಟ್ 1,11,235 ಆರ್ ಟಿ ಪಿಸಿಆರ್ ಸೇರಿದಂತೆ ಒಟ್ಟು 1,28,761 ಸ್ಯಾಂಪಲ್‍ಗಳನ್ನು ಕೊರೊನಾ ಪರೀಕ್ಷೆ ಮಾಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,83,204ಕ್ಕೆ ಏರಿಕೆ ಕಂಡಿದೆ.

ರಾಜ್ಯದಲ್ಲಿ ಶೇ.24.21 ಖಚಿತ ಪ್ರಮಾಣವಿದ್ದರೆ ಶೇ.1.44 ಮರಣ ಪ್ರಮಾಣವಿದೆ. ಇಂದು ರಾಜ್ಯದಲ್ಲಿ ಒಟ್ಟು 1,04,251 ಮಂದಿಗೆ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 23,98,925 ಕ್ಕೆ ಏರಿಕೆ ಕಂಡಿದೆ. ಈ ಪೈಕಿ 18,91,042 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಇಲ್ಲಿಯವರೆಗೆ 24,658 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಮೈಸೂರು 2,526, ಬಳ್ಳಾರಿ 2,157, ಹಾಸನ 1,641, ತುಮಕೂರು 1,545, ಉತ್ತರ ಕನ್ನಡ 1,357, ಮತ್ತು ಬೆಳಗಾವಿ 1,026 ಮಂದಿಗೆ ಕೊರೊನಾ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *