ಮಾವ ಅಳಿಯನ ಜಗಳಕ್ಕೆ ಬಿಗ್‍ಬಾಸ್ ಮನೆ ಗಢಗಢ

Public TV
2 Min Read

ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ಪ್ರಶಾಂತ್ ಸಂಬರಗಿಗೆ ಮಾವ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಆದರೆ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಬಗ್ಗೆ ಮಾತನಾಡಿರೋದರಿಂದ ಮನೆಯಲ್ಲಿ ದೊಡ್ಡ ಜಗಳವೆ ಆಗಿದೆ.

ಬಿಗ್‍ಬಾಸ್ ಮನೆಯಲ್ಲಿ ಮೊದಲ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಮನೆಮಂದಿ ಮೊದಲ ಸ್ಥಾನಕ್ಕೆ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿತ್ತು. ಆದರೆ ಈ ವೇಳೆ ಮನೆಯಲ್ಲಿ ಸ್ಪರ್ಧಿಗಳು ಮಾತ್ರ ಕಿತ್ತಾಡಿಕೊಂಡಿದ್ದಾರೆ.

ಮಂಜು, ಅರವಿಂದ್ ಅವರು ನಂಬರ್ 1 ಸ್ಪರ್ಧೆಗೆ ನಿಂತಿದ್ದರು. ಆಗ ಉಳಿದವರ ಪ್ರಕಾರ ಯಾರು ನಂಬರ್ 1 ಎನ್ನೋದನ್ನು ಹೇಳಬೇಕಿತ್ತು. ಎಲ್ಲರೂ ಅವರವರ ಅಭಿಪ್ರಾಯ ಹೇಳಿಕೊಂಡರು. ಆದರೆ ಪ್ರಶಾಂತ್ ಸಂಬರಗಿ ಮಾತು ಮನೆಯಲ್ಲಿ ಜಗಳವನ್ನೇ ಮಾಡಿಸಿದೆ.

1ನೇ ಸ್ಥಾನಕ್ಕೆ ಯಾರೂ ಸ್ಪರ್ಧೆ ಮಾಡ್ತಿಲ್ಲ, ಸ್ಪರ್ಧೆ ಮಾಡಬೇಕು ಎನ್ನುವ ಛಲ, ಹಠ ಕಾಣಸ್ತಿಲ್ಲ. ಇದು ನಿರಾಶದಾಯಕವಾಗಿದೆ. ಹೀಗಾಗಿ 1ನೇ ಸ್ಥಾನವನ್ನು ಹಾಗೆ ಬಿಡಬೇಕು ಅಂತ ಅನಸ್ತಿದೆ, ಇನ್ನೂ 50 ದಿನಗಳ ಕಾಲ ಪ್ರಯಾಣವಿದೆ. ಮಂಜು ಪಾವಗಡ ಅವರ ವಿದೂಷಕ, ಜನರನ್ನು ನಗಿಸ್ತಾರೆ ಅನ್ನೋದು ತಪ್ಪು. ಇದಕ್ಕೆ 56 ಕ್ಯಾಮರಾಗಳು ಸಾಕ್ಷಿಯಿದೆ. ಅವರ ಬೆನ್ನನ್ನು ಅವರೇ ತಟ್ಟಿಕೊಳ್ಳುತ್ತಿರುವುದು ಹಾಸ್ಯಾಸ್ಪದ ದಿವ್ಯಾ ಸುರೇಶ್, ಮಂಜು ಪಾವಗಡ ಟ್ವಿನ್ಸ್ ಅನಿಸತ್ತೆ. ಮಂಜು ಅವರು ದಿವ್ಯಾ ಸುರೇಶ್ ಅವರ ಸೆಕ್ಯುರಿಟಿ, ಪರ್ಸನಲ್ ಅಸಿಸ್ಟಂಟ್ ಅನ್ನೋ ರೀತಿ ಕಾಣುತ್ತಿದೆ. ಹೆಚ್ಚು ಸಮಯ ದಿವ್ಯಾ ಸುರೇಶ್ ಜೊತೆ ಇರುತ್ತಾರೆ ಎಂದು   ಸಂಬರಗಿ ಹೇಳಿದ್ದಾರೆ.

ಒಲಂಪಿಕ್  ಆಟ ಇದಲ್ಲ. ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮುಖ್ಯ ಅಂತ ಅಂದರೆ ಓಲಂಪಿಕ್ ಆಟದವರನ್ನು ಕರೆಸುತ್ತಿದ್ದರು. ಆದರೆ ಇಲ್ಲಿ ಎಲ್ಲ ರಂಗದವರು ಇದ್ದಾರೆ. ಅರವಿಂದ್ ಕೂಡ ನಂಬರ್ 1 ಸ್ಥಾನದಲ್ಲಿ ಇರಲು ಅರ್ಹರಲ್ಲ. ಹೀಗಾಗಿ ನಂಬರ್ 1 ಸ್ಥಾನದಲ್ಲಿ ಇವರಿಬ್ಬರನ್ನು ತೆಗೆದು ಹಾಕಬೇಕು ಎಂದು ಹೇಳಿದರು.

ಸಂಬರಗಿ ಅವರ ಮಾತನ್ನು ಕೆಳಿದ ಮಂಜು ಕೋಪಗೊಂಡಿದ್ದಾರೆ. ಮಂಜು ಹಲವು ಬಾರಿ ಸಂಬರಗಿ ಅವರ ಮಾತನ್ನು ಕೇಳಿ ಬೇಸರಗೊಂಡಿದ್ದರು. ಆದರೆ ಈ ಬಾರಿ ಮಾತ್ರ ಮಾವನ ವಿರುದ್ಧವಾಗಿ ತಿರುಗಿ ಬಿದ್ದಿದ್ದಾರೆ. ವೈಯಕ್ತಿಕ ವಿಚಾರಗಳ ಕುರಿತಾಗಿ ನೀವು ಮಾತನಾಡಬೇಡಿ. ಅರವಿಂದ್ ಮತ್ತು ನನ್ನಲ್ಲಿ ಯಾರು ನಂಬರ್ ಒನ್ ಅಂತಾ ಮಾತ್ರ ಹೇಳಿ ಎಂದು ಮಂಜು ಸಿಟ್ಟಿನಿಂದ ಹೇಳಿದ್ದಾರೆ. ಮನೆಮಂದಿ ಈ ವಿಚಾರವನ್ನು ಅಲ್ಲೇ ತಣ್ಣಗೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *