ಮಡಿಕೇರಿ: ವಾರಾಂತ್ಯದ ಲಾಕ್‍ಡೌನ್ ಗೆ ಕೊಡಗು ಜಿಲ್ಲೆಯಲ್ಲಿ ಉತ್ತಮ ರೀತಿಯ ಸ್ಪಂದನೆ ಸಿಕ್ಕಿದೆ. ಆದರೆ ಲಾಕ್‍ಡೌನ್ ಮಾಡಿದ ಪರಿಣಾಮ ತಿಂಡಿ ಹಾಗೂ ಊಟ ಇಲ್ಲದೆ ಕಂಗಾಲಾಗಿದ್ದ ನಿರ್ಗತಿಕರಿಗೆ ಮಡಿಕೇರಿ ನಗರದ ಪೊಲೀಸರು ಆಹಾರ ಪೂರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ವಾರಾಂತ್ಯದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೊಡಗು ಸ್ತಬ್ಧವಾಗಿದೆ. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಕೆಲಸವಿಲ್ಲದೆ ದಿನಗೂಲಿ ನೌಕರರು ಪರದಾಡುತ್ತಿದ್ದಾರೆ. ಕೊರೊನಾ ಎರಡನೇ ಅಲೆಯ ಪ್ರಭಾವ ಮತ್ತೆ ಬಡವರ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ನಡುವೆ ಜಿಲ್ಲಾ ಕೇಂದ್ರ ಮಡಿಕೇರಿಯ ಬೀದಿಬದಿಯ ಜನರು ಊಟ ಇಲ್ಲದೆ ಪರಿತಪ್ಪಿಸುತ್ತಿದನ್ನು ಕಂಡ ನಗರ ಪೊಲೀಸರು, 10ಕ್ಕೂ ಹೆಚ್ಚು ಜನರಿಗೆ ಊಟ ಪೂರೈಕೆ ಮಾಡಿದ್ದಾರೆ.
ಕರ್ಫ್ಯೂ ಜಾರಿ ಆಗಿರುವ ಹಿನ್ನೆಲೆ ಎಲ್ಲ ಹೋಟೆಲ್ ಗಳು ಬಂದ್ ಆಗಿದ್ದರಿಂದ ನಿರ್ಗತಿಕರು ಊಟಕ್ಕೆ ಪರದಾಡುತ್ತ, ಬೀದಿಯಲ್ಲಿ ಅಲೆಯುತ್ತಿದ್ದರು. ಇದನ್ನು ಕಂಡ ಪೊಲೀಸರು, ಅವರಿಗೆ ಊಟ ಪೂರೈಕೆ ಮಾಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.