ಜೀವನದಲ್ಲೇ ಇದು ನನ್ನ ಮೊದಲ ಮೆಡಲ್ : ಲ್ಯಾಗ್ ಮಂಜು

Public TV
2 Min Read

ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ಇನ್ನೇನು 2 ವಾರ ಪೂರ್ಣಗೊಳ್ಳುತ್ತಿದೆ. ಈ ವಾರದ ಅತ್ಯುತ್ತಮ ಮತ್ತು ಕಳಪೆ ಪ್ರದರ್ಶನ ತೋರಿಸಿದ ಸ್ಪರ್ಧಿಗಳನ್ನು ಸ್ವತಃ ಮನೆಯ ಸದಸ್ಯರು ಆಯ್ಕೆ ಮಾಡಿದರು.

ಬಿಗ್‍ಬಾಸ್, ಮನೆಯ ಸದಸ್ಯರ ಪೈಕಿ ಈ ವಾರ ಉತ್ತಮ ಪ್ರದರ್ಶನ ನೀಡಿದ ಒಬ್ಬ ಸದಸ್ಯನ ಹೆಸರನ್ನು ಮನೆಯ ಎಲ್ಲ ಸದಸ್ಯರು ಚರ್ಚಿಸಿ ಒಮ್ಮತದಿಂದ ನಿರ್ಧರಿಸಬೇಕು ಹಾಗೂ ಮನೆಯವರ ತೀರ್ಮಾನವನ್ನು ಕ್ಯಾಪ್ಟನ್ ರಾಜೀವ್ ಸೂಕ್ತ ಕಾರಣಗಳೊಂದಿಗೆ ಬಿಗ್‍ಬಾಸ್‍ಗೆ ತಿಳಿಸಬೇಕು ಎಂದು ಸೂಚಿಸಿದರು.

ಅದರಂತೆ ಮೊದಲನೆಯದಾಗಿ ಮಾತನಾಡಿದ ಗೀತಾ, ನಾನು ಲ್ಯಾಗ್ ಮಂಜುರವರ ಹೆಸರನ್ನು ಹೇಳಲು ಇಷ್ಟಪಡುತ್ತೇನೆ. ಎಂಟರ್‍ಟೈನ್‍ಮೆಂಟ್ ವಿಷಯಕ್ಕೆ ಬಂದರೆ ನಮ್ಮೆಲ್ಲರನ್ನು ಬಹಳ ನಗಿಸುತ್ತಾರೆ ಎಂದರು. ದಿವ್ಯಾ ಉರುಡುಗ ಮಂಜುರವರು ಕ್ಯಾಪ್ಟನ್ ಸ್ಥಾನವನ್ನು ಬಹಳ ಚೆನ್ನಾಗಿ ನಿಭಾಯಿಸಿದರು ಹಾಗಾಗಿ ನಾನು ಕೂಡ ಮಂಜುರವರ ಹೆಸರನ್ನು ಸೂಚಿಸುತ್ತೇನೆ ಎಂದರೆ, ವಿಶ್ವನಾಥ್ ಸಹ ಮಂಜು ಹೆಸರನ್ನು ಸೂಚಿಸುತ್ತಾರೆ. ಎಂಟರ್ಟೈನ್ಮೆಂಟ್ ಬಿಗ್‍ಬಾಸ್ ಮನೆಯಲ್ಲಿ ನಾವೆಲ್ಲ ಒಂದು ಕುಟುಂಬದವರ ರೀತಿಯಲ್ಲಿ ಇದ್ದೇವೆ ಎಂದರೆ ಅದಕ್ಕೆ ಕಾರಣ ಮಂಜು ಎಂದು ಚಂದ್ರಕಲಾ ತಿಳಿಸುತ್ತಾರೆ. ಟಾಸ್ಕ್‍ನಲ್ಲಿಯೇ ಆಗಲಿ, ಕೆಲಸದಲ್ಲಿಯೇ ಆಗಲಿ ಒಂದು ಒಳ್ಳೆಯ ಸಪೋರ್ಟಿವ್ ರೋಲ್ ಮಂಜು ಎಂದು ಅರವಿಂದ್ ಕೂಡ ಮಂಜು ಹೆಸರನ್ನು ತೆಗೆದುಕೊಳ್ಳುತ್ತಾರೆ. ದಿವ್ಯಾ ಸುರೇಶ್ ಎಲ್ಲರೊಂದಿಗೆ ಮಾತನಾಡುವ ರೀತಿ, ಟಾಸ್ಕ್ ನನ್ನು ಹಾಗೂ ನಮ್ಮನ್ನೆಲ್ಲ ನಿಭಾಯಿಸುವ ರೀತಿ ಎಲ್ಲವೂ ಒಂದು ಮಟ್ಟಕ್ಕೆ ಮಂಜು ನಿಭಾಯಿಸುತ್ತಾರೆ ಹಾಗಾಗಿ ನಾನು ಕೂಡ ಮಂಜುರವರನ್ನು ಆಯ್ಕೆ ಮಾಡುತ್ತೇನೆ ಎಂದು ನುಡಿದರು.

ಶುಭ ಪೂಂಜಾ, ಮಂಜು ಅರಂವಿಂದ್‍ರವರ ಹೆಸರನ್ನು ಆಯ್ಕೆ ಮಾಡಿದರೆ, ನಿಧಿ ಸುಬ್ಬಯ್ಯ, ವೈಷ್ಣವಿ ಗೌಡ, ಶಂಕರ್, ಪ್ರಶಾಂತ್ ಸಂಬರಗಿ, ರಘು, ರಾಜೀವ್ ಹೆಸರನ್ನು ಸೂಚಿಸುತ್ತಾರೆ. ಜೊತೆಗೆ ಬ್ರೋ ಗೌಡ ಹಾಗೂ ನಿರ್ಮಲ ಪ್ರಶಾಂತ್ ಸಂಬರಗಿಯವರ ಹೆಸರನ್ನು ಸೂಚಿಸುತ್ತಾರೆ.

ಒಟ್ಟಾರೆ ಮನೆಯ ಸದಸ್ಯರ ಅಭಿಪ್ರಾಯವನ್ನೆಲ್ಲಾ ಪರಿಶೀಲಿಸಿದ ರಾಜೀವ್ ನಾನು ಕ್ಯಾಪ್ಟನ್ ಆಗಿದ್ದೇನೆ. ನಾನು ನನ್ನ ಕರ್ತವ್ಯವನ್ನು ನಿಭಾಯಿಸುತ್ತಿದ್ದೇನೆ. ಹಾಗಾಗಿ ಮನೆಯನ್ನು ಇನ್ನಷ್ಟು ಖುಷಿಯಾಗಿಡುತ್ತಿರುವ ಮಂಜುರವರಿಗೆ ಈ ವಾರದ ಉತ್ತಮ ಆಟಗಾರರೆಂದು ಆಯ್ಕೆ ಮಾಡುತ್ತೇನೆ ಎಂದು ಹೇಳುತ್ತಾ ಶುಭಾಶಯ ತಿಳಿಸಿ ಮೆಡಲ್ ನೀಡಿದರು.

ಬಳಿಕ ಮೆಡಲ್ ಸ್ವೀಕರಿಸಿದ ಮಂಜು ನನಗೆ ಬಹಳ ಸಂತಸವಾಗುತ್ತಿದೆ. ಇದು ನನ್ನ ಜೀವನದಲ್ಲಿ ಸಿಗುತ್ತಿರುವ ಮೊದಲ ಮೆಡಲ್. ಎಲ್ಲರಿಗೂ ಧನ್ಯವಾದ ಎಂದು ಹೇಳುತ್ತಾರೆ. ಈ ವೇಳೆ ಮನೆ ಮಧಿ ಜೋರಾಗಿ ಶಿಳ್ಳೆ ಮತ್ತು ಚಪ್ಪಾಳೆಯನ್ನು ಹೊಡೆಯುತ್ತಾರೆ ಎಂದು ಮಂಜುರವರ ಹೆಸರನ್ನು ಘೋಷಿಸುತ್ತಾರೆ.

ಈ ವಾರ ಕಳಪೆ ಪ್ರದರ್ಶನ ತೋರಿದ ಬ್ರೋ ಗೌಡರನ್ನು ಬಿಗ್‍ಬಾಸ್ ಸೆರೆವಾಸ ಮಾಡಲು ಸೂಚಿಸಿದರು.

Share This Article
Leave a Comment

Leave a Reply

Your email address will not be published. Required fields are marked *