29 ಮಂದಿ ಲೋಕೋ ಪೈಲಟ್‍ಗಳಿಗೆ ಕೊರೊನಾ – ಹೊಸಪೇಟೆಯ ರನ್ನಿಂಗ್ ರೂಮ್ ಸೀಲ್ ಡೌನ್

Public TV
1 Min Read

ಬಳ್ಳಾರಿ: ರಾಜ್ಯದಲ್ಲಿ ಎರಡನೇ ಕೊರೊನಾ ಅಲೆ ಆರಂಭವಾಗಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ನೂತನ ವಿಜಯನಗರ ಜಿಲ್ಲೆಯಲ್ಲಿ ಸಹ ಕೊರೊನಾ ಸೋಂಕು ಹೆಚ್ವಳವಾಗಿದ್ದು, ಒಂದೇ ಕೊಠಡಿಯಲ್ಲಿ ವಾಸವಾಗಿದ್ದ, 29 ಜನ ಲೋಕೋ ಪೈಲಟ್ ಗಳಿಗೆ ಸೋಂಕು ಇರುವುದು ದೃಢವಾಗಿದೆ.

ಎರಡು ದಿನಗಳಲ್ಲಿ 29 ಲೋಕೋ ಪೈಲಟ್‍ಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ ಐವರು ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್‍ನಲ್ಲಿ, ಮೂವರು ಹುಬ್ಬಳ್ಳಿಯಲ್ಲಿ ಹಾಗೂ 21 ಸಿಬ್ಬಂದಿ ಹೋಂ ಐಸೋಲೇಶನ್‍ಗೆ ಒಳಗಾಗಿದ್ದಾರೆ. ಲೋಕೋ ಪೈಲಟ್‍ಗಳು ತಂಗಿದ್ದ ಹೊಸಪೇಟೆಯಲ್ಲಿನ ಕಟ್ಟಡವನ್ನು ಸೀಲ್ ಡೌನ್ ಮಾಡಲಾಗಿದ್ದು, ಈ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲಾಗಿದೆ.

ಲೋಕೋ ಪೈಲಟ್‍ಗಳು ಮಾ. 3ರಂದು ನಗರಕ್ಕೆ ಆಗಮಿಸಿದ್ದು ಬಳಿಕ ಅವರನ್ನು ಬೇರೆ ಬೇರೆ ಕೆಲಸಗಳಿಗೆ ನಿಯೋಜಿಸಲಾಗಿತ್ತು. ಎರಡು ದಿನದ ಬಳಿಕ ಒಬ್ಬರಲ್ಲಿ ಕೊರೊನಾ ಗುಣಲಕ್ಷಣ ಕಂಡುಬಂದಿದ್ದು, ಅವರನ್ನು ಪರೀಕ್ಷೆಗೊಳಪಡಿಸಿದಾಗ ಕೊರೊನಾ ಸೋಂಕು ಪತ್ತೆಯಾಗಿದೆ. ಬಳಿಕ ಅವರ ಪ್ರಾಥಮಿಕ ಸಂಪರ್ಕದಲ್ಲಿವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಒಟ್ಟು 29 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನೂ 50 ಜನರ ಪರೀಕ್ಷೆಯ ವರದಿ ಬರಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *