ವಿಮೆ ಹಣಕ್ಕಾಗಿ ಪತ್ನಿಯನ್ನು ಕೊಲೆಗೈದ ಪತಿ

Public TV
2 Min Read

ಟೆಹರಾನ್: ಹಣಕ್ಕಾಗಿ ತುಂಬು ಗರ್ಭಿಣಿ ಪತ್ನಿಯನ್ನು ಬೆಟ್ಟದ ತುದಿಗೆ ಕರೆದುಕೊಂಡು ಹೋದ ಪತಿ ಆಕೆಯನ್ನು ತಳ್ಳಿ ಕೊಂದಿರುವ ಘಟನೆ ಇರಾನ್‍ನಲ್ಲಿ ನಡೆದಿದೆ.

ಮ್ರಾ ಅಯ್ಸಲ್ (32)ಪತಿಯಿಂದ ಕೊಲೆಯಾದ ತುಂಬು ಗರ್ಭಿಣಿ. ಈಕೆಯನ್ನು ಪತಿ ಹಕನ್‍ಅಯ್ಸಲ್ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಟರ್ಕಿಯ ಮುಗ್ಲಾ ನಗರ ಬಟರ್‍ಫ್ಲೈ ವ್ಯಾಲಿಯಲ್ಲಿ ಈ ಘಟನೆ ನಡೆದಿದೆ.

ಬೆಟ್ಟದ ತುದಿಗೆ ಕರೆದುಕೊಂಡು ಹೋದ ಪತಿ ತುತ್ತ ತುದಿಯಲ್ಲಿ ನಿಂತು ರೋಮ್ಯಾಂಟಿಕ್ ಆಗಿ ಫೋಟೋಗೆ ಪೋಸ್ ಕೊಟ್ಟು ನಂತರ ಬೆಟ್ಟದ ತುದಿಯಿಂದ ತಳ್ಳಿಕೊಂದು ಹಾಕಿದ್ದಾನೆ. 2018ರಲ್ಲಿ ಈ ಘಟನೆ ನಡೆದಿದ್ದು, ವಿಮೆ ಹಣಕ್ಕಾಗಿ ಪತ್ನಿಯನ್ನು ಕೊಂದಿದ್ದಾನೆ ಎಂಬ ಶಂಕೆ ಮೇಲೆ ತನಿಖೆ ನಡೆಯುತ್ತಿತ್ತು.

2018ರಲ್ಲಿ ಈ ಘಟನೆ ನಡೆದಿದ್ದು, ಏಳು ತಿಂಗಳ ಗರ್ಭಿಣಿ ಸೆಮ್ರಾ ಸಾವನ್ನಪ್ಪಿದ್ದಾಳೆ. ಈ ಘಟನೆ ಕುರಿತು ವಾದ ಮಾಡಿರುವ ವಕೀಲರು, ಅಯ್ಸಲ್ ಅಪಘಾತದಿಂದ ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ವಿಮೆ ಹಣವನ್ನು ಗಂಡ ತೆಗೆದುಕೊಂಡಿದ್ದಾನೆ. ಇದೊಂದು ಉದ್ದೇಶ ಪೂರ್ವಕವಾದ ಕೊಲೆಯಾಗಿದೆ. ಇದಾದ ಬಳಿಕ 400,000 ಟರ್ಕಿಶ್ ಲಿರಾ ವಿಮೆ ಹಣವನ್ನು ಪಡೆಯಲು ಸಂಚು ರೂಪಿಸಿದ್ದಾನೆ ಎಂದು ಹೇಳಿದ್ದಾರೆ.

ಘಟನೆ ಕುರಿತು ವಿವರಿಸಿರುವ ಅಯ್ಸಲ್, ಫೋಟೋ ತೆಗೆದುಕೊಂಡ ಬಳಿಕ ನನ್ನ ಹೆಂಡತಿ ಮೊಬೈಲ್‍ನನ್ನು ಬ್ಯಾಗ್‍ನಲ್ಲಿ ಇಟ್ಟಿದ್ದಳು. ಇದಾದ ಬಳಿಕ ಮೊಬೈಲ್ ನೀಡುವಂತೆ ಆಕೆ ಕೇಳಿದಳು. ಮೊಬೈಲ್ ತರಲು ಒಂದೆರಡು ಹೆಜ್ಜೆ ಮುಂದಿದೆ. ನಾನು ಹೋದಾಗ ಆಕೆ ಕಿರುಚಿದ ಸದ್ದಾಯಿತು, ಅಷ್ಟರಲ್ಲಿ ಆಕೆ ಕೆಳಗೆ ಬಿದ್ದಿದ್ದಳು. ನಾನು ಆಕೆಯನ್ನು ತಳ್ಳಿಲ್ಲ ಎಂದಿದ್ದಾನೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಸೆಮ್ರಾ ಸಹೋದರ, ತನ್ನ ಸಹೋದರಿಗೆ ಎತ್ತರದ ಸ್ಥಳದ ಬಗ್ಗೆ ಭಯ ಇತ್ತು. ಅಲ್ಲದೇ ಘಟನೆ ನಡೆದ ಬಳಿಕ ಅಯ್ಸಲ್ ದುಃಖಿತನಂತೆ ಕಂಡು ಬಂದಿರಲಿಲ್ಲ ಎಂದಿದ್ದಾನೆ.

ಅಷ್ಟೇ ಅಲ್ಲದೇ ಆಕೆಯನ್ನು ಕೊಲ್ಲುವ ಉದ್ದೇಶಕ್ಕಾಗಿ ಮೂರು ಗಂಟೆಗಳ ಕಾಲ ಬೆಟ್ಟದ ತುತ್ತ ತುದಿಯಲ್ಲಿ ಕುಳಿತಿದ್ದಾರೆ. ನಂತರ ಯಾರು ಇಲ್ಲದ ಸಮಯ ನೋಡಿಕೊಂಡು ಈ ಕೃತ್ಯ ಎಸಗಿದ್ದಾನೆ. ಇದೊಂದು ಪೂರ್ವಭಾವಿ ಕೃತ್ಯವಾಗಿದ್ದು, ಕೊಲೆ ಮಾಡಿದ ಅಯ್ಸಲ್‍ನನ್ನು ಬಂಧಿಸಬೇಕು ಎಂದು   ಕ್ರಿಮಿನಲ್ ಕೋರ್ಟ್ ತೀರ್ಪು ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *