‘ಮಂಗಳವಾರ ರಜಾದಿನ’ ಯಶಸ್ವಿ ಪ್ರದರ್ಶನ – ಯುವಿನ್ ಚೊಚ್ಚಲ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಮಹಾಪೂರ

Public TV
1 Min Read

ಳೆದ ಸಿನಿ ಶುಕ್ರವಾರ ಬಿಡುಗಡೆಯಾದ ‘ಮಂಗಳವಾರ ರಜಾದಿನ’ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಾಜ್ಯಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಈ ಚಿತ್ರದ ಮೂಲಕ ಯುವ ನಿರ್ದೇಶಕ ಯುವಿನ್ ಮೊದಲ ಸಿನಿಮಾ ನಿರ್ದೇಶನದಲ್ಲೇ ಗೆಲುವಿನ ನಗೆ ಬೀರಿದ್ದಾರೆ.

ಬಿಗ್‍ಬಾಸ್ ಖ್ಯಾತಿಯ ಚಂದನ್ ಆಚಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಲಾಸ್ಯ ನಾಗರಾಜ್ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ರಜನಿಕಾಂತ್, ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ, ಜಹಂಗೀರ್, ಸೇರಿದಂತೆ ಹಲವು ಕಲಾವಿದರನ್ನೊಳಗೊಂಡ ‘ಮಂಗಳವಾರ ರಜಾದಿನ’ ಚಿತ್ರ ಎಲ್ಲರ ಗಮನ ಸೆಳೆದಿದೆ. ಯುವಿನ್ ನಿರ್ದೇಶನ ಮೆಚ್ಚುಗೆಗೆ ಪಾತ್ರವಾಗಿದೆ. ಕಾಮಿಡಿ ಹಾಗೂ ಭಾವನಾತ್ಮಕ ಅಂಶಗಳನ್ನೊಳಗೊಂಡ ಮಂಗಳವಾರ ರಜಾದಿನ ಕ್ಷೌರಿಕನ ಕುರಿತಾದ ಕಥಾಹಂದರವನ್ನು ಒಳಗೊಂಡಿದೆ.

ಕ್ಷೌರಿಕ ಹುಡುಗನಿಗೆ ಬಾಲ್ಯದಿಂದಲೂ ನಟ ಸುದೀಪ್ ಇಷ್ಟದ ನಟ. ಸುದೀಪ್ ಗೆ ಹೇರ್ ಕಟ್ ಮಾಡಬೇಕು ಎನ್ನುವುದು ಆ ಹುಡುಗನ ಕನಸು. ಆ ಕನಸಿನ ನನಸಿನ ಪಯಣದಲ್ಲಿ ಏನೆಲ್ಲ ಆಗುತ್ತೆ ಅನ್ನೋದರ ಸುತ್ತ ಹೆಣೆದ ಚಿತ್ರ ‘ಮಂಗಳವಾರ ರಜಾದಿನ’ ಸಿನಿಮಾ. ಕಾಮಿಡಿ ಜೊತೆಗೆ ಭಾವನಾತ್ಮಕ ಅಂಶಗಳು ಬೆರೆತಿರೋ ಮಂಗಳವಾರ ರಜಾದಿನ ಸಿನಿರಸಿಕರನ್ನು ನಗಿಸುವುದರ ಜೊತೆ ಭಾವನಾತ್ಮಕವಾಗಿಯೂ ಕಾಡುತ್ತದೆ. ಎಲ್ಲೂ ಕೂಡ ನಿರ್ದೇಶಕ ಯುವಿನ್ ಮೊದಲ ನಿರ್ದೇಶನದ ಸಿನಿಮಾ ಎನಿಸುವುದಿಲ್ಲ ಅಷ್ಟು ಅಚ್ಚುಕಟ್ಟಾಗಿ ಸಿನಿಮಾವನ್ನು ತೆರೆ ಮೇಲೆ ತಂದಿದ್ದಾರೆ.

ನಿರ್ದೇಶಕರ ಪ್ರಯತ್ನಕ್ಕೆ ಸಿನಿಮಾ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಭರವಸೆಯ ನಿರ್ದೇಶಕನಾಗಿ ಯುವಿನ್ ಹೊರ ಹೊಮ್ಮಿದ್ದಾರೆ. ಚೊಚ್ಚಲ ಸಿನಿಮಾಕ್ಕೆ ಪ್ರೇಕ್ಷಕರು ತೋರುತ್ತಿರುವ ಪ್ರೀತಿಗೆ ನಿರ್ದೇಶಕ ಯುವಿನ್ ಕೂಡ ಸಂತಸಗೊಂಡಿದ್ದಾರೆ. ‘ಮಂಗಳವಾರ ರಜಾದಿನ’ ತ್ರಿವರ್ಗ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿದ್ದು ಕೆ.ವಿ.ಎನ್ ಪ್ರೊಡಕ್ಷನ್ಸ್ ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *