ಪೂರ್ಣ ಪ್ರಮಾಣದಲ್ಲಿ ಥಿಯೇಟರ್ ಓಪನ್, ಷರತ್ತುಗಳು ಅನ್ವಯ

Public TV
1 Min Read

ನವದೆಹಲಿ: ಸಿನಿಮಾ ಪ್ರಿಯರಿಗೆ ಭರ್ಜರಿ ಗುಡ್‍ನ್ಯೂಸ್ ಸಿಕ್ಕಿದ್ದು ಶೇ.100ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಸಮ್ಮತಿ ಸಿಕ್ಕಿದೆ. ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟವಾಗಿದ್ದು 10 ತಿಂಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ಥಿಯೇಟರ್ ಆಗಲಿದೆ.

ಕಂಟೈನ್ಮೆಂಟ್‌ ವಲಯದಲ್ಲಿ ಸಿನಿಮಾ ಥಿಯೇಟರ್‌ಗಳ ತೆರೆಯುವಂತಿಲ್ಲ. ಈಗ ನೀಡಿರುವ ಮಾರ್ಗಸೂಚಿ ಹೊರತಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಆಡವಡಿಸಿಕೊಳ್ಳಬಹುದು ಎಂದು ಹೇಳಿದೆ.

ಮಾರ್ಗಸೂಚಿಯಲ್ಲಿ ಏನಿದೆ?
– ಆನ್‍ಲೈನ್  ಟಿಕೆಟ್ ಮಾಡಬೇಕು
– ಸಭಾಂಗಣದಲ್ಲಿ 6 ಅಡಿ ಅಂತರ ಕಾಯ್ದುಕೊಳ್ಳಬೇಕು
– ಫೇಸ್ ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸ್ ಕಡ್ಡಾಯ
– ಪ್ರೇಕ್ಷಕರ ಫೋನ್ ನಂಬರ್ ಕೊಡುವುದು ಕಡ್ಡಾಯ
– ಬ್ರೇಕ್ ಟೈಂ, ಸಿನಿಮಾ ಮುಗಿದ ಬಳಿಕವೂ ಹೆಚ್ಚು ಸಮಯ ನೀಡಬೇಕು
– ಏರ್‌ ಕಂಡಿಷನ್‌ಗಳು 24-30 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇರಬೇಕು
– ಪಾರ್ಕಿಂಗ್‌, ಪ್ರವೇಶ, ನಿರ್ಗಮದ ವೇಳೆ ಗುಂಪುಗೂಡದಂತೆ ನೋಡಿಕೊಳ್ಳಬೇಕು

Share This Article
Leave a Comment

Leave a Reply

Your email address will not be published. Required fields are marked *