– ನಾಲ್ವರಿಂದ ಅತ್ಯಾಚಾರಕ್ಕೊಳಗಾದ ಮಾಡೆಲ್
– ಅತ್ಯಾಚಾರ ದೃಶ್ಯ ಮೊಬೈಲ್ ನಲ್ಲಿ ಸೆರೆ
ಮುಂಬೈ: ಸ್ನೇಹಿತರನ್ನು ಪರಿಚಯ ಮಾಡಿಕೊಡುವುದಾಗಿ ಮಾಡೆಲ್‍ನನ್ನು ಕರೆದುಕೊಂಡು ಹೋಗಿ ಆಕೆಯ ಮೇಲೆ ನಾಲ್ವರು ಯುವಕರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಮುಂಬೈನಲ್ಲಿ ನಡೆದಿದೆ.
ಅತ್ಯಾಚಾರಕ್ಕೊಳಗಾದ 19 ವರ್ಷದ ಮಾಡೆಲ್ ಗುಜರಾತ್ ಮೂಲದವಳಾಗಿದ್ದಾಳೆ. ಮುಂಬೈಗೆ ಬಂದು ಕೆಲಸ ಹುಡುಕಲು ಸಂಬಂಧಿಕರ ಮನೆಯಲ್ಲಿ ಸಂತ್ರಸ್ತೆ ಉಳಿದುಕೊಂಡಿದ್ದಳು. ಈ ವೇಳೆ ಮುಂಬೈನಲ್ಲಿ ನಾಲ್ವರು ಪುರುಷರಿಂದ ಅತ್ಯಾಚರಕ್ಕೊಳಗಾಗಿದ್ದಾಳೆ. ಅರವಿಂದ ಪ್ರಜಾಪತಿ (23 ), ರವಿ ಜೈಸ್ವಾಲ್(34), ಪುನೀತ್ ಶುಕ್ಲಾ ಸೇರಿದಂತೆ ನಾಲ್ವರು ದುಷ್ಕರ್ಮಿಗಳಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮಾಡೆಲ್ ಮುಂಬೈನಲ್ಲಿ ವಾಸವಾಗಿರುವ ವೇಳೆ ಮಾಡೆಲ್ ಗೆ ಸೋಷಿಯಲ್ ಮೀಡಿಯಾ ಮೂಲಕವಾಗಿ ಪುನೀತ್ ಶುಕ್ಲಾ ಎನ್ನುವ ಯುವಕನ ಪರಿಚಯವಾಗಿದೆ. ಈ ವೇಳೆ ಇಬ್ಬರು ಪರಸ್ಪರ ಭೇಟಿಯಾಗಲು ನಿರ್ಧರಿಸಿದ್ದಾರೆ. ಅಂತೆಯೇ ಇಬ್ಬರು ಭೇಟಿಯಾಗಿದ್ದಾರೆ. ಆದರೆ ಯುವಕ ತನ್ನ ಸ್ನೇಹಿತರಿದ್ದಾರೆ ಅವರನ್ನು ಪರಿಚಯ ಮಾಡಿಕೊಡುತ್ತೇನೆ ಎಂದು ಕರೆದುಕೊಂಡು ಹೋಗಿದ್ದಾನೆ. ಆಗ ಸ್ನೆಹಿತರಿದ್ದ ಸ್ಥಳಕ್ಕೆ ಹೋಗಿ ಯುವತಿಯನ್ನು ತನ್ನ ಸ್ನೇಹಿತರಿಗೆ ಪರಿಚಯ ಮಾಡಿಕೊಟ್ಟಿದ್ದಾನೆ. ಎಲ್ಲರೂ ಸೇರಿ ಬೇರೆ ಕಡೆ ಹೋಗುವುದಾಗಿ ನಿರ್ಧರಿಸಿದ್ದಾರೆ.
ಆಕೆಯನ್ನು ಬಹುಮಹಡಿ ಕಟ್ಟಡಕ್ಕೆ ಕರೆದುಕೊಂಡು ಹೋಗಿದ್ದಾನೆ. ಆಗ ಕಟ್ಟಡದ ಟೆರೇಸ್‍ನಲ್ಲಿ ಪುನೀತ್ ಶುಕ್ಲಾನ ಇಬ್ಬರು ಸ್ನೇಹಿತರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಾಡೆಲ್ ಇವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ನಾಲ್ವರು ಸೇರಿ ಅತ್ಯಾಚಾರ ಮಾಡಿದ್ದಾರೆ. ಈ ವೇಳೆ ಆಕೆಯ ಸ್ನೇಹಿತ ಶುಕ್ಲಾ ಇಡೀ ಘಟನೆಯನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ.
ಆರೋಪಿಗಳು ಮಾಡೆಲ್‍ಗೆ ಈ ವಿಚಾರವಾಗಿ ಎಲ್ಲಾದರೂ ಹೇಳಿದರೆ ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತೇವೆ ಎಂದು ಬೆದರಿಸಿ ಯುವತಿಯನ್ನು ಬಿಟ್ಟು ಕಳಿಸಿದ್ದಾರೆ. ಮಾಡೆಲ್ ವಾಸವಾಗಿದ್ದ ಸಂಬಂಧಿಕರ ಮನೆಯವರಿಗೆ ಈ ವಿಚಾರವಾಗಿ ಹೇಳಿದ್ದಾಳೆ. ಆಗ ಪೊಲೀಸ್ ಠಾಣೆಯಲ್ಲಿ ಯುವತಿ ಕಡೆಯವರು ದೂರು ದಾಖಲಿಸಿದ್ದಾರೆ. ಎಫ್‍ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಸ್ನೇಹಿತನನ್ನು ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಅರವಿಂದ ಪ್ರಜಾಪತಿ, ರವಿ ಜೈಸ್ವಾಲ್ ಸೇರಿದಂತೆ ನಾಲ್ವರು ದುಷ್ಕರ್ಮಿಗಳಲ್ಲಿ ಮೂವರನ್ನು ಬಂಧಿಸಿದ್ದಾರೆ. ಹಾಗೂ ಆನ್‍ಲೈನ್ ಸ್ನೇಹಿತ ಪುನೀತ್ ಶುಕ್ಲಾ ಅವರನ್ನೂ ಬಂಧಿಸಲಾಗಿದೆ. ವಿಚಾರಣೆ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.