ಸರ್ಕಾರಿ ಕಾರಿನಲ್ಲಿ ಯುವತಿ ಫೋಟೋಶೂಟ್- ಸಾರ್ವಜನಿಕರಿಂದ ಟೀಕೆ

Public TV
1 Min Read

ಕಾರವಾರ: ಸರ್ಕಾರಿ ಕಾರಿನಲ್ಲಿ ಯುವತಿಯೊಬ್ಬಳು ವಿವಿಧ ಭಂಗಿಯಲ್ಲಿ ಕುಳಿತು, ಮಲಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾಳೆ. ಸದ್ಯ ಯುವತಿ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿರಸಿ ಅರಣ್ಯ ವಿಭಾಗದ ವಾಹನದ ಮೇಲೆ ಯುವತಿ ವಿವಿಧ ಭಂಗಿಯಲ್ಲಿ ಕುಳಿತು ಫೋಟೋ ಶೂಟ್ ಮಾಡಿದ್ದಾಳೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಯಲ್ಲಾಪುರ ಎಸಿಎಫ್‍ಗೆ ಸೇರಿದ ವಾಹನ ಇದಾಗಿದ್ದು, ಯುವತಿ ಕುಳಿತು ಫೋಟೋ ತೆಗೆಸಿಕೊಂಡು ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಸದ್ಯ ಈ ಫೋಟೋ ವೈರಲ್ ಆಗಿದ್ದು, ಸರ್ಕಾರಿ ವಾಹನವನ್ನು ಫೋಟೋ ಶೂಟ್‍ಗೆ ಬಳಸಿಕೊಂಡ ಬಗ್ಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.

ಸಾರ್ವಜನಿಕರ ಆಕ್ರೋಶದ ಬಳಿಕ ಫೋಟೋ ಶೂಟ್ ಮಾಡಿಸಿಕೊಂಡವರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *