ಹೈದರಾಬಾದ್: ಪೊಲೀಸರು ಹವಾಲಾ ದಂಧೆಯನ್ನು ಬೇಧಿಸಿದ್ದಾರೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಬರೋಬ್ಬರಿ 3.75 ಕೋಟಿ ರೂ. ನಗದು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ಈಶ್ವರ್ ದಿಲೀಪ್ ಸೋಲಂಕಿ(29), ಹರೀಶ್ ಭಾಯ್ ಪಟೇಲ್(35), ಅಜಿತ್ ಸಿಂಗ್ (34) ಹಾಗೂ ರಾಥೋಡ್ ನಾನಕ್ ಸಿಂಗ್ ನಾತುಬಾ(42) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ಹೈದರಾಬಾದ್ ಪೊಲೀಸರು ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ನಾಲ್ವರನ್ನು ಬಂಧಿಸಿ, ಹಣ ವಶಪಡಿಸಿಕೊಂಡಿದ್ದಾರೆ.
Hyderabad: Four persons held in possession of Rs 3.75 crores of unaccounted cash, today. Further investigation underway. #Telangana pic.twitter.com/NJnVmeg2UX
— ANI (@ANI) September 15, 2020
ಆರೋಪಿಗಳನ್ನು ತನಿಖೆ ನಡೆಸಿದಾಗ ಮುಂಬೈ ಮೂಲಕ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಕಂಪನಿಯ ಮಾಲೀಕನನ್ನು ಅಹಮ್ಮದಾಬಾದ್ ಮೂಲದವರು ಎಂದು ಗುರುತಿಸಲಾಗಿದೆ. ಅವರು ಹೈದರಾಬಾದ್ ನಲ್ಲಿ ಬ್ರ್ಯಾಂಚ್ ಆಫೀಸ್ ಹೊಂದಿದ್ದು, ಹಣವನ್ನು ಮಹಾರಾಷ್ಟ್ರದ ಸೋಲ್ಹಾಪುರಕ್ಕೆ ಸಾಗಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಸದ್ಯ ವಶಕ್ಕೆ ಪಡೆದುಕೊಂಡ 3,75,30,000 ರೂ. ಹಣವನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ತನಿಖೆ ನಡೆಯುತ್ತಿದೆ.