ನನ್ನ ಮುಂದೆ ಬೆತ್ತಲಾದ್ರೆ ಚಿತ್ರದಲ್ಲಿ ಅವಕಾಶ- 17ನೇ ವಯಸ್ಸಿನಲ್ಲಿ ನಡೆದಿದ್ದ ಘಟನೆ ಬಿಚ್ಚಿಟ್ಟ ಮಾಡೆಲ್

Public TV
2 Min Read

– ಅಸಭ್ಯವಾಗಿ ನನ್ನನ್ನು ಮುಟ್ಟಲು ಪ್ರಯತ್ನಿಸಿದ್ರು

ಮುಂಬೈ: ಚಿತ್ರರಂಗದಲ್ಲಿ ಮೀಟೂ ಅಭಿಯಾನ ನಡೆಯುತ್ತಿದ್ದ ಸಂದರ್ಭದಲ್ಲಿ ಅನೇಕ ನಟಿಯರು ಚಿತ್ರರಂಗದಲ್ಲಿ ತಾವು ಅನುಭವಿಸಿದ್ದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು. ಇದೀಗ ಬಾಲಿವುಡ್‍ನ ಖ್ಯಾತ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಮಾಡೆಲ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಭಾರತೀಯ ಮಾಡೆಲ್ ಪೌಲಾ ತನಗೆ 17ನೇ ವಯಸ್ಸಿನಲ್ಲಿದ್ದಾಗಲೇ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ನಟಿ ಪೌಲಾ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಸಾಜಿದ್ ಖಾನ್ ನೀಡಿದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ.

“ಮೀಟೂ ಅಭಿಯಾನ ಶುರುವಾದ ಸಂದರ್ಭದಲ್ಲಿ ಸಾಜಿದ್ ಖಾನ್ ಮೇಲೆ ಅನೇಕರು ಮಾತನಾಡಿದ್ದರು. ಆದರೆ ನಾನು ಆಗ ಸಾಜಿದ್ ಖಾನ್ ವಿರುದ್ಧ ಮಾತನಾಡಲು ಧೈರ್ಯ ಮಾಡಲಿಲ್ಲ. ಯಾಕೆಂದರೆ ಚಿತ್ರರಂಗದಲ್ಲಿ ಗಾಡ್ ಫಾದರ್ ಇಲ್ಲದ ನಾನು ಕುಟುಂಬಕ್ಕಾಗಿ ಸಂಪಾದನೆ ಮಾಡುತ್ತಿದ್ದೆ. ಆದ್ದರಿಂದ ಮಾತನಾಡದೆ ಸುಮ್ಮನಿದ್ದೆ” ಎಂದು ಬರೆದುಕೊಂಡಿದ್ದಾರೆ.

“ಈಗ ನನ್ನೊಂದಿಗೆ ನನ್ನ ಪೋಷಕರು ಇಲ್ಲ. ನನಗಾಗಿ ಸಂಪಾದಿಸುತ್ತಿದ್ದೇನೆ. ಆದ್ದರಿಂದ ಈಗ ನಾನು 17ನೇ ವಯಸ್ಸಿನಲ್ಲಿ ಸಾಜಿದ್ ಖಾನ್‍ನಿಂದ ಕಿರುಕುಳಕ್ಕೊಳಗಾಗಿದ್ದೇನೆ ಎಂದು ಹೇಳಲು ನನಗೆ ಧೈರ್ಯವಿದೆ ಎಂದರು. ಅಷ್ಟೇ ಅಲ್ಲದೇ, ಅವರು ನನ್ನೊಂದಿಗೆ ಅಸಭ್ಯವಾಗಿ ಮಾತನಾಡಿದರು. ನನ್ನನ್ನು ಮುಟ್ಟಲು ಪ್ರಯತ್ನಿಸಿದರು. ಅವರ ಮುಂಬರುವ ‘ಹೌಸ್‍ಫುಲ್’ ಸಿನಿಮಾದಲ್ಲಿ ಅವಕಾಶ ಬೇಕು ಎಂದರೆ ನನ್ನ ಮುಂದೆ ಬೆತ್ತಲಾಗುವಂತೆ ಹೇಳಿದರು” ಎಂದು ಹೌಸ್‍ಫುಲ್ ಚಿತ್ರದ ವೇಳೆ ನಡೆದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಇದೇ ರೀತಿ ಎಷ್ಟು ಹುಡುಗಿಯರೊಂದಿಗೆ ಮಾಡಿದ್ದಾರೆಂದು ದೇವರಿಗೆ ತಿಳಿದಿದೆ. ನಾನು ಈಗ ಹೇಳುತ್ತಿರುವುದು ನನ್ನ ಮೇಲೆ ಕರುಣೆ ತೋರಲಿ ಅಂತಲ್ಲ. ನಾನು ಬಾಲ್ಯದಲ್ಲಿದ್ದಾಗ ಈ ಘಟನೆ ನನ್ನ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಿದೆ. ಹೀಗಾಗಿ ಈ ಬಗ್ಗೆ ಮಾತನಾಡಲು ನಿರ್ಧರಿಸಿದ್ದೇನೆ. ಇವರು ಕನಸುಗಳನ್ನು ನುಚ್ಚುನೂರು ಮಾಡುತ್ತಾರೆ. ಹೀಗಾಗಿ ಇಂತಹವರನ್ನು ಜೈಲಿಗೆ ಕಳುಹಿಸಬೇಕು. ಆದರೆ ನಾನು ಸುಮ್ಮನಿರಲ್ಲ. ಇದರ ಬಗ್ಗೆ ಮಾತನಾಡದೆ ಇರುವುದು ತಪ್ಪು ಎಂದು ಮಾಡೆಲ್ ಪೌಲಾ ಸುದೀರ್ಘವಾಗಿ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

2018ರಲ್ಲಿ ಸಾಜಿದ್ ಖಾನ್ ಮೇಲೆ ನಟಿ ರೇಚಲ್ ವೈಟ್, ಸಲೋನಿ ಚೋಪ್ರಾ ಮತ್ತು ಪತ್ರಕರ್ತೆ ಮೂವರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ನಂತರ ‘ಹೌಸ್‍ಫುಲ್ 4’ ಸಿನಿಮಾ ನಿರ್ದೇಶನದಿಂದ ಸಾಜಿದ್ ಖಾನ್‍ನನ್ನು ದೂರ ಇಡಲಾಗಿತ್ತು. ಇದೀಗ ಮಾಡೆಲ್ ಕೂಡ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದಾರೆ.

https://www.instagram.com/p/CE6l9OyD4SP/?utm_source=ig_embed

Share This Article
Leave a Comment

Leave a Reply

Your email address will not be published. Required fields are marked *