ವಿಚಾರಣೆಗೆ ಹಾಜರಾಗದಿರಲು ಪೊಲೀಸರಿಗೆ ರಾಗಿಣಿ ನೀಡಿದ ಕಾರಣ

Public TV
1 Min Read

ಬೆಂಗಳೂರು: ವಿಚಾರಣೆಗೆ ಹಾಜರಾಗದಿರಲು ನಟಿ ರಾಗಿಣಿ ದ್ವಿವೇದಿ ಪೊಲೀಸರ ಮುಂದೆ ಕೆಲ ಕಾರಣಗಳನ್ನ ನೀಡಿದ್ದಾರೆ.

ಕೊರೊನಾ ರೋಗಿಗಳಿಗೆ ಸಹಾಯ ಮಾಡುತ್ತಿದ್ದು, ಪ್ಲಾಸ್ಮಾ ಥೆರಪಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. ಈ ಕಾರ್ಯಕ್ರಮ ಮೊದಲೇ ನಿಗದಿಯಾಗಿದ್ದು, ಬಿಟ್ಟು ಬಂದ್ರೆ ತೊಂದರೆ ಆಗಲಿದೆ. ಸೋಮವಾರ ವಿಚಾರಣೆಗೆ ಹಾಜರಾಗುತ್ತೇನೆ ಎಂದು ವಕೀಲರ ಮೂಲಕ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದರು. ಆದ್ರೆ ಸೋಮವಾರ ಬೇಡ, ನಾಳೆಯ ಬನ್ನಿ ಅನ್ನೋ ಸಂದೇಶ ರವಾನಿಸಿದ್ದಾರೆ.

https://twitter.com/publictvnews/status/1301462415029067776

ವಿಚಾರಣೆಗೆ ತಪ್ಪಿಸಿಕೊಂಡಿದ್ಯಾಕೆ?: ಒಂದು ವೇಳೆ ವಿಚಾರಣೆಗೆ ಹಾಜರಾದ್ರೆ ರಕ್ತದ ಮಾದರಿ ಪಡೆದುಕೊಳ್ಳಬಹುದು. ನಿನ್ನೆ ಆಪ್ತ ರವಿಶಂಕರ್ ನನ್ನು ಪೊಲೀಸರು ವಶಕ್ಕೆ ಪಡೆದಿರುವ ವಿಷಯ ಕೇಳಿದ ಟೆನ್ಷನ್ ನಲ್ಲಿ ರಾಗಿಣಿ ಡ್ರಗ್ಸ್ ತೆಗೆದುಕೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಗೈರಾಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *