ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇಂದು ತಮ್ಮ 40ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಯಸ್ಸು 40 ಆದ್ರೂ ಧೋನಿ ಯಾವ ಯುವಕರಿಗೆ ತಾವೇನು ಕಡಿಮೆ ಇಲ್ಲ ಅನ್ನೋದನ್ನ ಕ್ರೀಡಾಂಗಣದಲ್ಲಿ ಪ್ರೂವ್ ಮಾಡುತ್ತಿರುತ್ತಾರೆ. ಒಮ್ಮೆ ಧೋನಿಯ ಚಿರತೆ ಓಟ ಕಂಡು ಸಹ ಆಟಗಾರರು ಶಾಕ್ ಆಗಿದ್ದರು.
ಧೋನಿ ತಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ. ದೇಹ ದಂಡನೆ, ನಿಯಮಿತ ಆಹಾರ ಹೀಗೆ ಹಲವು ವಿಧಾನಗಳನ್ನು ಧೋನಿ ಅಳವಡಿಸಿಕೊಂಡಿದ್ದಾರೆ. ಇಂದು ಧೋನಿ ಹುಟ್ಟುಹಬ್ಬದ ಹಿನ್ನೆಲೆ ಹೆಲ್ತ್ ಸೀಕ್ರೆಟ್ ಇಲ್ಲಿದೆ.
ಸದೃಢ ದೇಹಕ್ಕಾಗಿ ಧೋನಿ ತಮ್ಮ ಕೆಲ ಸಮಯವನ್ನು ಜಿಮ್ ನಲ್ಲಿ ಕಳೆಯುತ್ತಾರೆ. ಈ ಹಿಂದೆ ಒಂದು ಸಂದರ್ಶನದಲ್ಲಿ ತಾವು ಒನ್ ಲೆಗ್ ಡೆಡ್ ಲಿಫ್ಟ್, ರಿವರ್ಸ್ ಲಂಗ್ಸ್, ಲ್ಯಾಟರಲ್ ಪುಲ್ ಡೌನ್, ವಿ ಗ್ರೂಪ್ ಪುಲ್ ಡೌನ್, ಡಬಲ್ ಲಂಗ್ಸ್, ಡಬಲ್ ಚೆಸ್ಟ್ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಕೇವಲ ಜಿಮ್ ನಲ್ಲಿ ದೇಹ ದಂಡಿಸದೇ ಕ್ರೀಡಾಂಗಣದಲ್ಲಿಯೂ ಧೋನಿ ಕಾಣಿಸಿಕೊಳ್ಳುತ್ತಾರೆ. ಕ್ರಿಕೆಟ್ ಜೊತೆಗೆ ಫುಟ್ಬಾಲ್, ಟೆನ್ನಿಸ್, ಬ್ಯಾಡ್ಮಿಂಟನ್ ಆಟಗಳನ್ನು ಧೋನಿ ಆಡುತ್ತಾರೆ.
ಡಯಟ್ ಫುಡ್: ಪ್ರತಿದಿನ ಬೆಳಗ್ಗೆ ಬ್ರೆಡ್ ಅಥವಾ ಪರೋಟಾ ಜೊತೆ ಒಂದು ಗ್ಲಾಸ್ ಹಾಲು ಕುಡಿಯಲು ಧೋನಿ ಇಷ್ಟಪಡುತ್ತಾರೆ. ದೇಹ ದಂಡನೆ ಬಳಿಕ ಪ್ರೋಟಿನ್ನಿಂದ ಕೂಡಿದ ಜ್ಯೂಸ್ ಕುಡಿಯುತ್ತಾರೆ. ಇನ್ನೂ ಊಟಕ್ಕೆ ದಾಲ್, ಚಿಕನ್, ಹಸಿರು ತರಕಾರಿಯಿಂದ ಮಾಡಿದ ರೊಟ್ಟಿ ಮತ್ತು ಸಲಾಡ್ ಸೇವಿಸುತ್ತಾರೆ.
ದೇಹದಂಡನೆ ಮತ್ತು ಆಹಾರ ಶೈಲಿಯೊಂದಿಗೆ ನಿದ್ದೆಗೂ ಪ್ರಮುಖ ಆದ್ಯತೆ ನೀಡುತ್ತಾರೆ. ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ್ರೆ ವ್ಯಕ್ತಿ ಬೆಳಗ್ಗೆ ಆ್ಯಕ್ಟಿವ್ ಇರಲು ಸಾಧ್ಯ. ಹಾಗಾಗಿ ಧೋನಿ ರಾತ್ರಿ ನಿದ್ದೆ ಹೆಚ್ಚು ಮಹತ್ವ ಕೊಡುತ್ತಾರೆ. ಈ ಹಿಂದೆ ಹಲವು ಬಾರಿ ಫ್ಲೈಟ್ ತಡವಾಗಿದ್ದಕ್ಕೆ ವಿಮಾನ ನಿಲ್ದಾಣದ ಆವರಣದಲ್ಲಿಯೇ ಧೋನಿ ವಿಶ್ರಾಂತಿ ತೆಗೆದುಕೊಂಡಿದ್ದರು.