ಕಲಬುರಗಿ: ದೇಶದಲ್ಲೇ ಕಿಲ್ಲರ್ ಕೊರೊನಾಗೆ ಮೊದಲು ಬಲಿ ಪಡೆದಿದ್ದೇ ಕಲಬುರಗಿ ಜಿಲ್ಲೆಯಲ್ಲಿ. ಆದರೆ ಇಲ್ಲಿವರಗೆ ಜಿಲ್ಲೆಯಲ್ಲಿ ಇರುವುದು ಒಂದೇ ಪರೀಕ್ಷಾ ಕೇಂದ್ರ. ಸರ್ಕಾರದ ನಿರ್ಲಕ್ಷ್ಯದಿಂದ ಜಿಲ್ಲೆಯ ಜನರು ಕಂಗಾಲಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಕೊರೊನಾ ಟೆಸ್ಟ್ ಲ್ಯಾಬ್ ಇದೆ. ಇಲ್ಲಿ ಪ್ರತಿನಿತ್ಯ ಸಾವಿರ ಸ್ಯಾಂಪಲ್ಸ್ ಗಳನ್ನು ಮಾತ್ರ ಟೆಸ್ಟ್ ಮಾಡಲಾಗುತ್ತಿದೆ. ಇನ್ನೂ ಕೂಡ ಕಲಬುರಗಿ ಜಿಲ್ಲೆಯ ಐದು ಸಾವಿರ ಸ್ಯಾಂಪಲ್ಸ್ ವರದಿ ಬಾಕಿಯಿದೆ. ಕಲಬುರಗಿ ಜಿಲ್ಲೆಗೆ ಅತಿ ಹೆಚ್ಚು ವಲಸೆ ಕಾರ್ಮಿಕರು ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ಕೊರೊನಾ ಸೋಂಕಿತರು ಇರೋದು ಕಲಬುರಗಿ ಜಿಲ್ಲೆಯಲ್ಲಿ. ಆದರೂ ಕೂಡ ಸರ್ಕಾರ ಮತ್ತೊಂದು ಕೊರೊನಾ ಟೆಸ್ಟ್ ಲ್ಯಾಬ್ ಪ್ರಾರಂಭಿಸಿಲ್ಲ. ಕೊರೊನಾ ಲ್ಯಾಬ್ ರಿಪೋರ್ಟ್ ಗಾಗಿ ನಾಲ್ಕೈದು ದಿನ ಕಾಯಬೇಕಾದ ಸ್ಥಿತಿ ಎದುರಾಗಿದೆ.
ಅನೇಕ ಸ್ಯಾಂಪಲ್ಸ್ ಗಳನ್ನು ಇನ್ನು ಕೂಡ ಬೆಂಗಳೂರು ಲ್ಯಾಬ್ ಗೆ ಜಿಲ್ಲಾಡಳಿತ ಕಳಿಸ್ತಿದೆ. ನದರದ ಇಎಸ್‍ಐ ಆಸ್ಪತ್ರೆಯಲ್ಲಿ ಈ ಹಿಂದೆ ಲ್ಯಾಬ್ ಪ್ರಾರಂಭ ಮಾಡೋದಾಗಿ ಹೇಳಿತ್ತು. ಕಲಬುರಗಿ ನಗರದಲ್ಲಿ ಎರಡು ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ಆದರೆ ಲ್ಯಾಬ್ ಪ್ರಾರಂಭಕ್ಕೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.
ಕಲಬುರಗಿಯಲ್ಲಿ ಮೂಲಭೂತ ಸೌಕರ್ಯದ ಕೊರತೆಯಿಲ್ಲಾ, ರಾಜಕೀಯ ಇಚ್ಚಾಶಕ್ತಿಯ ಕೊರತೆ ಇದೆ.
ಜಿಲ್ಲೆಯ ESICಯಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸಲು ಸರ್ಕಾರ ವಿಫಲವಾಗಿದೆ. ಕೂಡಲೇ ಪರೀಕ್ಷಾ ಕೇಂದ್ರ ಸ್ಥಾಪಿಸಲು @CMofKarnataka ಗೆ ಮನವಿ ಮಾಡಿದ್ದೇನೆ.
ಕೊರೋನಾ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ಅನುದಾನವನ್ನೇ ನೀಡಿಲ್ಲಾ
ಯಾಕೆ? #AtmaNirbhar pic.twitter.com/J6XqzMuljv— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) July 6, 2020