– ಸೋಂಕಿತರ ಸಂಖ್ಯೆ 8,697ಕ್ಕೆ ಏರಿಕೆ, 9 ಮಂದಿ ಸಾವು
– ಬೆಂಗಳೂರಿನಲ್ಲಿ 59 ವರ್ಷದ ಮಹಿಳೆ ಮಾತ್ರ ಬಿಡುಗಡೆ
ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 416 ಮಂದಿಗೆ ಸೋಂಕು ಬಂದಿದ್ದು ಒಟ್ಟು ಸೋಂಕಿತರ ಸಂಖ್ಯೆ 8,697ಕ್ಕೆ ಏರಿಕೆಯಾಗಿದೆ.
ಒಟ್ಟು 9 ಮಂದಿ ಮೃತಪಟ್ಟಿದ್ದು, ಒಟ್ಟು ಇಲ್ಲಿಯವರೆಗೆ 132 ಮಂದಿ ಸಾವನ್ನಪ್ಪಿದ್ದಾರೆ. ಹೊಸ ಪ್ರಕರಣಗಳ ಪೈಕಿ 116 ಅಂತರಾಜ್ಯ ಪ್ರಯಾಣಿಕರಿದ್ದರೆ 22 ಮಂದಿ ಅಂತರಾಷ್ಟ್ರೀಯ ಪ್ರಯಾಣಿಕರಿದ್ದಾರೆ.
ಇಂದು ಬೆಂಗಳೂರಿನಲ್ಲಿ 94 ಮಂದಿಗೆ ಸೋಂಕು ಬಂದಿದ್ದರೆ, ಬೀದರ್‌ನಲ್ಲಿ 73 ಮಂದಿಗೆ ಸೋಂಕು ಬಂದಿದೆ. ಬೆಂಗಳೂರಿನ ಪೈಕಿ 23 ಮಂದಿಗೆ ವಿಷಮಶೀತ ಜ್ವರ ಇದ್ದರೆ 16 ಮಂದಿ ಉಸಿರಾಟ ಸಮಸ್ಯೆಯಿದೆ.
ಬೆಂಗಳೂರು ನಗರದಲ್ಲಿ ಇಂದು ಮೂವರು ಸಾವನ್ನಪ್ಪಿದ್ದಾರೆ. 46 ವರ್ಷ, 56 ವರ್ಷದ ವ್ಯಕ್ತಿಯ ಜೊತೆ 39 ವರ್ಷ ವ್ಯಕ್ತಿಯೂ ಸಾವನ್ನಪ್ಪಿದ್ದಾರೆ. ಬೀದರ್‌ನಲ್ಲಿ 2( 51 ವರ್ಷದ ಮಹಿಳೆ, 65 ವರ್ಷದ ಪುರುಷ), ದಾವಣಗೆರೆಯಲ್ಲಿ 90 ವರ್ಷದ ವೃದ್ಧ ಚಿಕ್ಕಮಗಳೂರಿನಲ್ಲಿ 72 ವರ್ಷದ ವೃದ್ಧೆ, ಉಡುಪಿಯಲ್ಲಿ 54 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ಇಂದು ಒಟ್ಟು 181 ಮಂದಿ ಬಿಡುಗಡೆಯಾಗಿದ್ದು ಒಟ್ಟು 5,391 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 8,697 ಸೋಂಕಿತರರ ಪೈಕಿ 3170 ಸಕ್ರಿಯ ಪ್ರಕರಣಗಳಿವೆ.
ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಂಗಳೂರು ನಗರ 94, ಬೀದರ್ 73, ಬಳ್ಳಾರಿ 38, ರಾಮನಗರ 38, ಕಲಬುರಗಿ 34, ಮೈಸೂರು 22, ಹಾಸನ 16, ರಾಯಚೂರು 15, ಉಡುಪಿ 13, ಹಾವೇರಿ 12, ವಿಜಯಪುರ 9, ಚಿಕ್ಕಮಗಳೂರು 8, ಧಾರವಾಡ 5, ದಕ್ಷಿಣ ಕನ್ನಡ 5, ಮಂಡ್ಯ, ಉತ್ತರ ಕನ್ನಡ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ 4, ದಾವಣಗೆರೆ 3, ಬಾಗಲಕೋಟೆ, ಶಿವಮೊಗ್ಗ, ಗದಗ, ತುಮಕೂರಿನಲ್ಲಿ ತಲಾ 2, ಬೆಳಗಾವಿ, ಚಾಮರಾಜನಗರ 1 ಪ್ರಕರಣ ವರದಿಯಾಗಿದೆ.
ಎಲ್ಲಿ ಎಷ್ಟು ಮಂದಿ ಬಿಡುಗಡೆ?
ಇಂದು ಒಟ್ಟು 181 ಮಂದಿ ಬಿಡುಗಡೆಯಾಗಿದ್ದಾರೆ. ಕಲಬುರಗಿ 42, ರಾಯಚೂರು 39, ಯಾದಗಿರಿ 39, ಶಿವಮೊಗ್ಗ 17, ಬೀದರ್ 12, ಧಾರವಾಡ 10, ಉಡುಪಿ 9, ಬಳ್ಳಾರಿ 8, ವಿಜಯಪುರ 6, ದಾವಣಗೆರೆ 5, ದಕ್ಷಿಣ ಕನ್ನಡ 4, ಕೋಲಾರ 3, ಮಂಡ್ಯ 3, ಬೆಂಗಳೂರು ನಗರ, ಚಾಮರಾಜನಗರ, ಬಾಗಲಕೋಟೆಯಲ್ಲಿ ತಲಾ ಒಬ್ಬರು ಬಿಡುಗಡೆಯಾಗಿದ್ದಾರೆ.
ಐಸಿಯುನಲ್ಲಿ ಎಷ್ಟು?
ರಾಜ್ಯದಲ್ಲಿ ಒಟ್ಟು 74 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರ 36, ಕಲಬುರಗಿ 11, ಬೀದರ್, ಧಾರವಾಡ, ಬಳ್ಳಾರಿಯಲ್ಲಿ ತಲಾ 5, ದಾವಣಗೆರೆ 3, ದಕ್ಷಿಣ ಕನ್ನಡ 2, ಉಡುಪಿ, ವಿಜಯಪುರ, ಬೆಳಗಾವಿ, ಹಾವೇರಿ, ರಾಯಚೂರಿನಲ್ಲಿ ತಲಾ ಒಬ್ಬರು ಐಸಿಯುನಲ್ಲಿದ್ದಾರೆ.