– ಮೆಜೆಸ್ಟಿಕ್ನಲ್ಲಿ ಬೆಳಗ್ಗೆಯಿಂದಲೇ ಜನವೋ ಜನ
ಬೆಂಗಳೂರು: ಇಂದಿನಿಂದ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಕರಿಗೆ ಟಿಕೆಟ್ ಕೊಡಲು ತೀರ್ಮಾನಿಸಲಾಗಿದೆ. ಅಲ್ಲದೇ ಹೆಚ್ಚುವರಿಯಾಗಿ ನಾಲ್ಕು ಸಾವಿರ ಬಸ್ಗಳು ಸಂಚಾರ ಆರಂಭವಾಗಲಿವೆ ಎಂದು ಬಿಎಂಟಿಸಿ ತಿಳಿಸಿತ್ತು. ಆದರೆ ಬಸ್ಸುಗಳಿಲ್ಲದೇ ಪ್ರಯಾಣಿಕರು ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ.
ಸೋಮವಾರದವರೆಗೂ 1,500 ಬಿಎಂಟಿಸಿ ಬಸ್ಗಳು ನಗರದಲ್ಲಿ ಸಂಚರಿಸುತ್ತಿದ್ದವು. ಆದರೆ ಇಂದಿನಿಂದ ಹೆಚ್ಚುವರಿಯಾಗಿ 2,262 ಬಿಎಂಟಿಸಿ ಬಸ್ಗಳ ಸಂಚಾರ ಮಾಡಲಿವೆ. ಈ ಮೂಲಕ ಇಂದಿನಿಂದ ಇಂದಿನಿಂದ 4 ಸಾವಿರ ಬಿಎಂಟಿಸಿ ಬಸ್ಗಳು ರಸ್ತೆಗಿಳಿಯಲಿವೆ ಎಂದು ಬಿಎಂಟಿಸಿ ತಿಳಿಸಿತ್ತು. ಆದರೆ ಇದೀಗ ಬಿಎಂಟಿಸಿ ಆಡಳಿತ ಮಂಡಳಿ ಪ್ರಯಾಣಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದಿಯಾ ಎಂಬ ಅನುಮಾನ ಶುರುವಾಗಿದೆ.
ಬೆಳಗ್ಗೆ 9 ಗಂಟೆಯಾದರೂ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬೆರಳಣಿಕೆ ಬಸ್ಗಳು ಮಾತ್ರ ಬಂದಿವೆ. ಬರುವ ಒಂದೊಂದು ಬಸ್ಸಿಗಾಗಿ ಪ್ರಯಾಣಿಕರು ಮುಗಿಬೀಳುತ್ತಿದ್ದಾರೆ. ಅಲ್ಲದೇ ಬಸ್ ಇಲ್ಲ, ಒಂದು ತಾಸು ಕಾದರೂ ಒಂದು ಬಸ್ ಇಲ್ಲ. ಬಿಎಂಟಿಸಿ ಆಡಳಿತ ಮಂಡಳಿ ಇಂದಿನಿಂದ ಬಸ್ ವ್ಯವಸ್ಥೆ ಮಾಡುತ್ತೀವಿ ಎಂದಿತ್ತು. ಈಗ ಕಡಿಮೆ ಬಸ್ ಇರುವುದರಿಂದ ಪ್ರಯಾಣಿಕರು ಮುಗಿಬೀಳುತ್ತಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಡಿಮೆ ಬಿಎಂಟಿಸಿ ಬಸ್ ಇರುವುದರಿಂದ ಪ್ರಯಾಣಿಕರು ಬಸ್ಗಾಗಿ ಮುಗಿಬೀಳುತ್ತಿದ್ದಾರೆ. ಯಾವುದೇ ಸಾಮಾಜಿಕ ಅಂತರವಿಲ್ಲದೇ ಬಸ್ ಹತ್ತಲು ನೂಕು-ನುಗ್ಗಲು ಉಂಟಾಗಿದೆ. ಅಲ್ಲದೇ ಒಂದು ಬಸ್ಸಿನಲ್ಲಿ 30 ಜನರಿಗಷ್ಟೇ ಅವಕಾಶ ಎಂದು ಸರ್ಕಾರ ಆದೇಶಿಸಿತ್ತು. ಆದರೆ ಈಗ ಬಸ್ ಫುಲ್ ರಶ್ ಆಗುತ್ತಿದೆ. ಜೊತೆಗೆ ಬಸ್ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಕೂಡ ಮಾಡುತ್ತಿಲ್ಲ. ಹೀಗಾಗಿ ಬಸ್ ಸಿಗದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.