ಮೂವತ್ತನೇ ದಿನದತ್ತ ಲಾಕ್‍ಡೌನ್-30 ದಿನಗಳಲ್ಲಿ ಕೊರೊನಾ ಕಂಟ್ರೋಲ್ ಆಗಿದಿಯಾ?

Public TV
3 Min Read

ಬೆಂಗಳೂರು: ಲಾಕ್‍ಡೌನ್ ಆಗಿ ಇಂದಿಗೆ ಒಂದು ತಿಂಗಳಾಗಿದೆ. ಕಳೆದ ಮೂವತ್ತು ದಿನಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆ ಆಗುತ್ತಲೇ ಇದೆ. ಸದ್ಯ ಇಪ್ಪತ್ತು ಸಾವಿರ ಗಡಿ ದಾಟಿರುವ ಮಹಾಮಾರಿ ಲಾಕ್‍ಡೌನ್ ಮಾಡಿದಿದ್ದರೇ ದೊಡ್ಡ ಅನಾಹುತವನ್ನೇ ಸೃಷ್ಟಿಸುತ್ತಿತ್ತು. ಈ ನಡುವೆ ಕೊರೊನಾ ನಿರ್ವಹಣೆಯಲ್ಲಿ ಭಾರತ ಬೆಸ್ಟ್ ಎನಿಸಿಕೊಂಡ್ರೆ ಪ್ರಧಾನಿ ಮೋದಿ ನಂಬರ್ ಸ್ಥಾನದಲ್ಲಿ ಕೂತಿದ್ದಾರೆ. ಲಾಕ್‍ಡೌನ್ ಮೂವತ್ತು ದಿನಗಳಲ್ಲಿ ಕೊರೊನಾ ಕಂಟ್ರೋಲ್ ಆಗಿದಿಯಾ ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.

ಮಾರ್ಚ್ 24 ರಾತ್ರಿ ಎಂಟು ಗಂಟೆಗೆ ಇಡೀ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಡೀ ದೇಶದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದರು. 21 ದಿನಗಳ ಲಾಕ್‍ಡೌನ್ ಘೋಷಣೆ ಮಾಡಿದ್ದ ಪ್ರಧಾನಿ ಮೋದಿ ಎಪ್ರಿಲ್ ಹದಿನಾಲ್ಕರಂದು ಮೇ 3 ವರೆಗೂ ಲಾಕ್ ಡೌನ್ ವಿಸ್ತರಿಸಿ ಆದೇಶ ಹೊರಡಿಸಿದರು. ಹೀಗೆ ಎರಡು ಹಂತದಲ್ಲಿ ಲಾಕ್‍ಡೌನ್ ಜಾರಿಯಾಗಿ ಮೂವತ್ತು ದಿನಗಳು ಕಳೆದಿದೆ.

ಕಳೆದೊಂದು ತಿಂಗಳಿಂದ ಜನ ಮನೆಯಲ್ಲೇ ಕೂತಿದ್ದಾರೆ. ಆರ್ಥಿಕ ಸಂಕಷ್ಟ ಏನೇ ಬಂದರು ಇಡೀ ದೇಶ ಕೊರೊನಾ ವಿರುದ್ಧ ಒಟ್ಟಾಗಿ ಹೋರಾಟ ನಡೆಸುತ್ತಲೇ ಇದೆ. ವಿದೇಶಗಳಲ್ಲಿ ಕೊರೊನಾ ಅಬ್ಬರಿಸಿ ಪರಿ ನೋಡಿ ಪ್ರಧಾನಿ ಮೋದಿ ದೇಶದಲ್ಲಿ ಆರಂಭದಲ್ಲಿ ಲಾಕ್‍ಡೌನ್ ಗೆ ಕರೆ ನೀಡಿದ್ದರು. ಹಾಗಾದ್ರೆ ಕಳೆದ ಮೂವತ್ತು ದಿನಗಳಲ್ಲಿ ಕೊರೊನಾ ನಾಗಲೋಟಕ್ಕೆ ಬ್ರೇಕ್ ಬಿದ್ದಿದೆಯಾ, ದೇಶದಲ್ಲಿ ಸೋಂಕಿನ ಪ್ರಮಾಣ ಕಡಿಮೆ ಆಗಿದಿಯಾ ಪ್ರಶ್ನೆಗೆ ಉತ್ತರ ಕೆಳಗಿನಂತಿದೆ.

* ಲಾಕ್‍ಡೌನ್ ಘೋಷಣೆಯಾದ ದಿನ ಅಂದರೆ ಮಾರ್ಚ್ 24 ರಂದು ದೇಶದಲ್ಲಿ 519 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು, 10 ಮಂದಿ ಸಾವನ್ನಪ್ಪಿದ್ದರು.
* ಮಾರ್ಚ್ 30ರ ವೇಳೆಗೆ 1251 ಕ್ಕೆ ತಲುಪಿ 32 ಮಂದಿ ಕೊರೊನಾಗೆ ಬಲಿಯಾಗಿದ್ದರು.
* ಎಪ್ರಿಲ್ 6ಕ್ಕೆ ದೇಶದಲ್ಲಿ ಸೋಂಕು ಹರಡುವಿಕೆ ಪ್ರಮಾಣ 20% ಏರಿಕೆಯಾಗಿ 4,281 ಪ್ರಕರಣಗಳು ದಾಖಲಾಗಿ 111 ಮಂದಿ ಅಸುನೀಗಿದ್ದರು.
* ಎಪ್ರಿಲ್ 12 ರಂದು 8,447 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡು 273 ಮಂದಿ ಕೊರೊನಾ ಮಾರಿಗೆ ಉಸಿರು ಚೆಲ್ಲಿದ್ದರು.
* ಲಾಕ್‍ಡೌನ್ ವಿಸ್ತರಣೆಯಾದ ಬಳಿಕ ಎಪ್ರಿಲ್ 18ಕ್ಕೆ ದೇಶದಲ್ಲಿ 14,792 ಮಂದಿಯಲ್ಲಿ ಕೊರೊನಾ ಕಾಣಸಿಕೊಂಡಿದಲ್ಲದೇ 488 ಬಲಿ ಪಡೆದುಕೊಂಡಿತ್ತು.
* ಇನ್ನು ನಿನ್ನೆ ಅಂಕಿಅಂಶಗಳನ್ನು ನೋಡಿದ್ರೆ ಒಟ್ಟು 20,471 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 652 ಮಂದಿ ಸಾವನ್ನಪ್ಪಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಲಾಕ್‍ಡೌನ್ ಬಳಿಕ ಪ್ರತಿನಿತ್ಯ 8% ರಿಂದ 12% ಸೋಂಕು ಹೆಚ್ಚು ಕಂಡು ಬರ್ತಿದೆ ಮತ್ತು ಸಾವನ್ನಪ್ಪಿವವರ ಪ್ರಮಾಣ 8%- 20% ಎಂದು ಹೇಳಿದೆ. ಈ ನಡುವೆ ಲಾಕ್‍ಡೌನ್ ಗಿಂತ ಮುಂಚೆ ಪ್ರತಿ 3-5 ದಿನಕ್ಕೆ ದುಪ್ಪಟ್ಟಾಗುತ್ತಿದ್ದ ಸೋಂಕಿತರ ಸಂಖ್ಯೆ ಈಗ 8-10 ದಿನ ಏರಿಕೆಯಾಗಿದೆಯಂತೆ. ಹೀಗಾಗಿ ಲಾಕ್‍ಡೌನ್ ಭಾರತದಲ್ಲಿ ಉತ್ತಮವಾಗಿದ್ದು, ಸೋಂಕು ಹತೋಟಿಯಲ್ಲಿದೆ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ ಅಲ್ಲದೇ ಲಾಕ್‍ಡೌನ್ ಮುಂದುವರಿಸುವ ಸಲಹೆ ಕೂಡಾ ನೀಡಿದೆ. ಹೀಗಾಗಿ ಮೇ 3 ಬಳಿಕವೂ ಲಾಕ್ ಡೌನ್ ಮುಂದುವರಿಸುವ ಸಾಧ್ಯತೆ ಎನ್ನಲಾಗುತ್ತಿದೆ.

ಕೊರೊನಾ ನಿರ್ವಹಣೆಯಲ್ಲಿ ಮೋದಿ ನಂಬರ್ ಒನ್.!
ಕೊರೊನಾ ವೈರಸ್ ನಿಭಾಯಿಸುತ್ತಿರುವ ದೇಶಗಳ ಪೈಕಿ ಜಾಗತಿಕ ಮಟ್ಟದಲ್ಲಿ ಭಾರತ ಬೆಸ್ಟ್ ಎನಿಸಿಕೊಂಡಿದೆ. ಅಲ್ಲದೇ ಕೊರೊನಾ ಪರಿಸ್ಥಿತಿ ನಿರ್ವಹಣೆಯಲ್ಲಿ ಪ್ರಧಾನಿ ಅತ್ಯುತ್ತಮ ಎಸಿಕೊಂಡಿದ್ದಾರೆ. ಅಮೆರಿಕದ ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ, ವಿಶ್ವದ 10 ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ಕಳೆದ ಜನವರಿ 1ರಿಂದ ಏ.14 ವರೆಗಿನ ಜಾಗತಿಕ ವರದಿಗಳನ್ನಾಧರಿಸಿ ಈ ಸಮೀಕ್ಷೆ ನಡೆಸಲಾಗಿದ್ದು, ಕೊರೊನಾ ವೈರಸ್ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿದ ವಿಶ್ವದ 10 ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಮೊದಲನೇ ಸ್ಥಾನ ಲಭಿಸಿದೆ. ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಅವರಿಗೆ ಒಟ್ಟು 68 ಅಂಕಗಳು ಲಭಿಸಿದ್ದು, ಇದು ಇತರ 9 ನಾಯಕರಗಿಂತ ಅತೀ ಹೆಚ್ಚಾಗಿದೆ ಎಂದು ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆ ಸ್ಪಷ್ಟಪಡಿಸಿದೆ. ಈ ಅಂಶವನ್ನು ಹಣಕಾಸು ಸಚಿವ ನಿರ್ಮಲ ಸೀತರಾಮನ್ ಟ್ವೀಟ್ ಮಾಡಿದ್ದಾರೆ.

ಕೊರೊನಾ ವಿರುದ್ಧ ಹೋರಾಟ ನಿರಂತರವಾಗಿದ್ದು ಇದರ ಫಲ ಪಡೆಯಲು ದೇಶದ ಜನರು ಇನ್ನಷ್ಟು ದಿನ ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಮನೆಯಲ್ಲಿದ್ದು ಸರ್ಕಾರದ ಜೊತೆ ಕೊರೊನಾ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸಿ.

Share This Article
Leave a Comment

Leave a Reply

Your email address will not be published. Required fields are marked *