ಬುಡಕಟ್ಟು ಕುಟುಂಬಗಳಿಗಾಗಿ ಹೆಗಲ ಮೇಲೆ ಅಕ್ಕಿ ಹೊತ್ತು ಸಾಗಿದ ಶಾಸಕ

Public TV
1 Min Read

ತಿರುವಂತಪುರಂ: ಬುಡಕಟ್ಟು ಕುಟುಂಬಗಳಿಗೆ ದಿನನಿತ್ಯದ ಸಮಾಗ್ರಿಗಳನ್ನು ನೀಡಲು ಕೇರಳದ ಶಾಸಕ ಕೆ.ಯು ಜೆನೀಶ್ ಕುಮಾರ್ ಅವರು ಹೆಗಲ ಮೇಲೆ ಅಕ್ಕಿ ಹೊತ್ತುಕೊಂಡು ಹೋಗಿದ್ದಾರೆ.

ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳು ಜೊತೆ ಸೇರಿಕೊಂಡ ಕೇರಳದ ಕೊನ್ನಿ ವಿಧಾನ ಸಭಾ ಕ್ಷೇತ್ರದ ಎಂಎಲ್‍ಎ ಜೆನೀಸ್, ಗೋಣಿ ಚೀಲ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜೊತೆಗೆ ಕಮ್ಯೂನಿಸ್ಟ್ ಪಕ್ಷದ ಶಾಸಕನ ಕೆಲಸಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೊನ್ನಿ ವಿಧಾನಸಭಾ ಕ್ಷೇತ್ರದ ಅರುವಾಪುಲಂ ಪಂಚಾಯಿತಿಯ 5ನೇ ವಾರ್ಡ್‍ನ ಅರಣ್ಯದೊಳಗೆ 37 ಬುಡಕಟ್ಟು ಕುಟುಂಬಗಳಿವೆ. ಅಲ್ಲಿಗೆ ಹೋಗಬೇಕು ಎಂದರೆ ಅಚೆಂಕೋವಿಲ್ ನದಿಯನ್ನು ದಾಟಿ ಈ ಪ್ರದೇಶಕ್ಕೆ ಹೋಗಬೇಕು. ಸದ್ಯ ಕೊರೊನಾ ಭೀತಿಯಿಂದ ದೇಶ ಲಾಕ್‍ಡೌನ್ ಆದ ಕಾರಣ ನಿತ್ಯದ ದಿನ ಬಳಕೆಗೆ ಔಷಧ ಇತರ ಸಾಮಾಗ್ರಿಗಳು ನಗರಗಳಲ್ಲಿ ಸಿಗುತ್ತಿಲ್ಲ. ಇದರಿಂದ ಅಲ್ಲಿನ ಜನ ದಿನಬಳಕೆ ವಸ್ತಗಳಿಲ್ಲದೇ ಪರಾದಡುತ್ತಿದ್ದರು.

ಬುಡಕಟ್ಟು ಜನಾಂಗದ ಕಷ್ಟವನ್ನು ಕೇಳಿ ತಿಳುದುಕೊಂಡ ಶಾಸಕರು. ಅವರಿಗೆ ಬೇಕಾದ ಸಾಮಾಗ್ರಿಗಳನ್ನು ತಲುಪಿಸಲು ಮುಂದೆ ಬಂದಿದ್ದಾರೆ. ಅವರ ಜೊತೆ ಜಿಲ್ಲಾಧಿಕಾರಿಗಳ ಮತ್ತು ಕೆಲ ಸ್ವಯಂ ಸೇವಕರ ತಂಡವನ್ನು ಸೇರಿಸಿಕೊಂಡು ದಿನಸಿ ಸಾಮಾಗ್ರಿಗಳನ್ನು ಹೊತ್ತುಕೊಂಡು ಹೋಗಿ ಕುಟುಂಬಕ್ಕೆ ತಲುಪಿಸಿದ್ದಾರೆ. ಜೊತೆಗೆ ಅಲ್ಲಿಗೆ ವೈದ್ಯರನ್ನು ಕರೆದುಕೊಂಡು ಹೋಗಿ ಜನರ ಆರೋಗ್ಯ ತಪಾಸಣೆಯನ್ನು ಮಾಡಿಸಿದ್ದಾರೆ.

ಹತ್ತು ಕಿಲೋಗ್ರಾಂ ಅಕ್ಕಿ, ಒಂದು ಕಿಲೋ ತೆಂಗಿನ ಎಣ್ಣೆ, ಸಕ್ಕರೆ, ಕಾಫಿ ಪುಡಿ, ಚಹಾ, ಉಪ್ಪು, ಸಾಬೂನು ಮತ್ತು ತರಕಾರಿಗಳನ್ನು ಬುಡಕಟ್ಟು ಜನಾಂಗದ 37 ಕುಟುಂಬಗಳಿಗೆ ವಿತರಿಸಲಾಗಿದೆ. ಜೊತೆಗೆ ವೈದ್ಯಕೀಯ ತಂಡವನ್ನು ಸಂಪೂರ್ಣ ಜನರನ್ನು ತಪಾಸಣೆ ನಡೆಸುವವರೆಗೂ ಅಲ್ಲೇ ಇದ್ದು, ನಂತರ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ವಾಪಸ್ ಬಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *