ಕೊರೊನಾ ಹರಡದಂತೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿ ಗಂಗಾ ಪೂಜೆ

Public TV
1 Min Read

ಬೆಳಗಾವಿ/ಚಿಕ್ಕೋಡಿ: ಕೊರೊನಾ ವೈರಸ್ ಹರಡದಂತೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿ ಗಂಗಾ ಪೂಜೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಳ್ಯಾಳ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ನಡೆದಿದೆ.

ವಿಶ್ವಕ್ಕೆ ಶಾಂತಿ ಸಿಗಲಿ, ಕೊರೊನಾ ಭೀತಿ ದೂರವಾಗಲಿ ಎಂದು ಹಳ್ಯಾಳ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಪೂಜೆ ನಡೆಸಿ ಬಾಗಿನ ಅರ್ಪಿಸಲಾಗಿದೆ. ಹಳ್ಯಾಳದ ವಿರಕ್ತಮಠದ ಗುರುಸಿದ್ಧ ಸ್ವಾಮೀಜಿ, ಹೊನವಾಡ ಬಾಬು ಮಹಾರಾಜರ ನೇತೃತ್ವದಲ್ಲಿ ಹಾಗೂ ಗ್ರಾಮದ ಮುಖಂಡರು ಪೂಜೆಯಲ್ಲಿ ಭಾಗಿಯಾಗಿ ವಿಶ್ವದ ಶಾಂತಿ ಹಾಗೂ ಕೊರೊನಾ ರೋಗಕ್ಕೆ ಔಷಧಿ ಸಿಗಲಿ ಎಂದು ಪ್ರಾರ್ಥಿಸಿದರು.

ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಹಳ್ಯಾಳ ವಿರಕ್ತಮಠದ, ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಕೊರೊನಾ ಎಂಬ ಭಯಂಕರ ವೈರಸ್ ರೋಗದಿಂದ ವಿಶ್ವದೆಲ್ಲೆಡೆ ಜನರು ತತ್ತರಿಸಿ ಹೋಗಿದ್ದಾರೆ. ಅಲ್ಲದೆ ಭಯಬೀತರಾಗಿದ್ದಾರೆ. ಆದಷ್ಟು ಇಂತಹದೊಂದು ರೋಗಕ್ಕೆ ಬೇಗನೆ ಔಷದಿ ಸಿಗಲಿ, ಜನರು ನೆಮ್ಮದಿಯಿಂದ ಇರುವಂತಾಗಲಿ ಎಂದರು.

ಮಹಾದೇವ ಬಿರಾದಾರ, ಅಥಣಿ ತಾಲೂಕಾ ರೈತ ಅಧ್ಯಕ್ಷ ಮಹಾದೇವ ಮಡಿವಾಳ, ಡಿಎಸ್‍ಎಸ್ ಮುಖಂಡ ಸಂಜೀವ ಕಾಂಬಳೆ, ದರೂರ ಗ್ರಾ.ಪಂ ಅಧ್ಯಕ್ಷ ಮಾರುತಿ ಮಾಯನ್ನವರ ತಾಪಂ ಸದಸ್ಯ ಪರೀದ ಅವಟಿ, ನೇಮಣ್ಣ ಅಸ್ಕಿ, ಸಲಿಂ ಮುಲ್ಲಾ, ಅನೀಲ ಕಾಂಬಳೆ, ನಾಗರಾಜ ಕಾಂಬಳೆ, ಶ್ರೀಶೈಲ ತಂಶಿ, ಪರಶುರಾಮ ಸಿಂಧೂರ, ಶ್ರೀಮತಿ ಅನಸುಯಾ ಕಾಂಬಳೆ ಸೇರಿದಂತೆ ಇತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *