ನಿವೃತ್ತಿ ಬಗ್ಗೆ ಮೊದಲ ಬಾರಿಗೆ ಕೊಹ್ಲಿ ಮಾತು

Public TV
2 Min Read

ವೆಲ್ಲಿಂಗ್ಟನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಬಾರಿಗೆ ನಿವೃತ್ತಿ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಕ್ರಿಕೆಟ್‍ನ ಎಲ್ಲಾ ಮೂರು ಮಾದರಿ ಬಗ್ಗೆ (ಏಕದಿನ, ಟೆಸ್ಟ್ ಮತ್ತು ಟಿ 20) ಮೂರು ವರ್ಷಗಳ ಕಾಲ ಆಡಲಿದ್ದೇನೆ ಎಂದು ಭಾರತದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಗೂ ಮುನ್ನ ವೆಲ್ಲಿಂಗ್ಟನ್‍ನಲ್ಲಿ ಬುಧವಾರ ಮಾಧ್ಯಮಗಳ ಜೊತೆಗೆ ವಿರಾಟ್ ಕೊಹ್ಲಿ ಮಾತನಾಡಿದರು. ಈ ವೇಳೆ 31 ವರ್ಷದ ಕೊಹ್ಲಿ, ಮೂರು ಸ್ವರೂಪಗಳಲ್ಲಿ 3 ವರ್ಷ ಸಮರ್ಥವಾಗಿ ಆಡಲು ನನ್ನನ್ನು ನಾನು ಸಿದ್ಧಪಡಿಸಿಕೊಂಡಿದ್ದೇನೆ. ಜೊತೆಗೆ 3 ವರ್ಷದ ಬಳಿಕ ನನ್ನ ಮೇಲಿನ ಜವಾಬ್ದಾರಿಗಳಲ್ಲಿ ಒಂದನ್ನು ಕೈಬಿಡಲು ಯೋಚಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಈಗ ‘ಅತ್ಯುತ್ತಮ ಕಂಪನಿಯ ಜೊತೆಯಲ್ಲಿದ್ದೇನೆ’ ಎಂದ ರಾಹುಲ್

ಭಾರತದಲ್ಲಿ ನಡೆಯಲಿರುವ 2021ರ ಏಕದಿನ ವಿಶ್ವಕಪ್ ಬಳಿಕ ನಿವೃತ್ತಿ ಘೋಷಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ಮುಂದಿನ ಮೂರು ವರ್ಷಗಳಲ್ಲಿ ಎರಡು ಟಿ20 ಮತ್ತು ಒಂದು ಏಕದಿನ ವಿಶ್ವಕಪ್ ನಡೆಯಲಿದೆ. ಪ್ರಯಾಣ ಹಾಗೂ ಅಭ್ಯಾಸದ ಅವಧಿಗಳನ್ನು ಒಳಗೊಂಡಂತೆ ಕಳೆದ 8 ವರ್ಷಗಳಿಂದ 300 ದಿನವೂ ಕ್ರಿಕೆಟ್ ಆಡುತ್ತಿದ್ದೇನೆ. ಕೆಲಸದ ಹೊರೆ ಸಾರ್ವಕಾಲಿಕ ಒಂದೇ ಆಗಿರುತ್ತದೆ. ಎಲ್ಲ ಸನ್ನಿವೇಶದಲ್ಲಿಯೂ ಶೇ.100 ರಷ್ಟು ಫಲಿತಾಂಶ ನೀಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಕೆ.ಎಲ್.ರಾಹುಲ್ ‘360 ಡಿಗ್ರಿ’ ಬ್ಯಾಟ್ಸ್‌ಮನ್‌: ಮಂಜ್ರೇಕರ್

ಕೆಲಸದ ಹೊರೆಯಿಂದಾಗಿ ಆಟಗಾರರು ಹೆಚ್ಚಿನ ಬ್ರೇಕ್‍ಗಳನ್ನು ತೆಗೆದುಕೊಳ್ಳುತ್ತಾರೆ. ಎಲ್ಲ ಕಾಲಕ್ಕೂ ನಮ್ಮ ದೈಹಿಕ ಸಾಮಥ್ರ್ಯವು ಒಂದೇ ರೀತಿ ಇರುವುದಿಲ್ಲ. 34 ಅಥವಾ 35ನೇ ವಯಸ್ಸಿನಲ್ಲಿ ವಿಶ್ರಾಂತಿ ಬೇಕೆಂದು ಎನಿಸಬಹುದು. ಆದಾಗ್ಯೂ ಮುಂದಿನ 2 ಅಥವಾ 3 ವರ್ಷಗಳವರೆಗೆ ನಾನು ಈ ಬಗ್ಗೆ ಯೋಚಿಸುವ ಅಗತ್ಯವಿಲ್ಲ ಎಂದರು.

ಇದೇ ವೇಳೆ ಟೆಸ್ಟ್ ತಂಡದ ಬಗ್ಗೆ ಮಾತನಾಡಿದ ಕೊಹ್ಲಿ, ಪೃಥ್ವಿ ಶಾ ಬಹಳ ಪ್ರತಿಭಾವಂತ ಆಟಗಾರ. ಅವರು ತಮ್ಮದೇ ಆದ ಆಟದ ಶೈಲಿಯನ್ನು ಹೊಂದಿದ್ದಾರೆ. ಅದೇ ರೀತಿಯಲ್ಲೇ ಆಡಬೇಕೆಂದು ನಾವು ಬಯಸುತ್ತೇವೆ. ನನ್ನ ಪ್ರಕಾರ ಮಯಾಂಕ್ ಆಸ್ಟ್ರೇಲಿಯಾದಲ್ಲಿ ಉತ್ತಮವಾಗಿ ಆಡಿದ್ದಾರೆ ಎಂದು ಹೇಳಿದರು.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಫೆಬ್ರವರಿ 21ರಂದು ವೆಲ್ಲಿಂಗ್ಟನ್‍ನಲ್ಲಿ ನಡೆಯಲಿದೆ. ಇದನ್ನೂ ಓದಿ: ‘ಬೇಡ ಮಗಾ ಬೇಡ, ನಾರ್ಮಲ್ ಆಡು’- ಕಿವೀಸ್ ನೆಲದಲ್ಲಿ ಕನ್ನಡ ಡಿಂಡಿಮ

Share This Article
Leave a Comment

Leave a Reply

Your email address will not be published. Required fields are marked *