ಡಿಕೆಶಿ ಅಡ್ಡ ಕನಕಪುರ ಬೆನ್ನಲ್ಲೇ ಎಚ್‍ಡಿಕೆ ಕೋಟೆ ರಾಮನಗದಲ್ಲಿ ಕೇಸರಿ ಕಹಳೆ

Public TV
2 Min Read

ರಾಮನಗರ: ಕಪಾಲ ಬೆಟ್ಟದ ಯೇಸು ಪ್ರತಿಮೆ ವಿವಾದವನ್ನು ದಾಳವಾಗಿ ಬಳಸಿಕೊಂಡು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಅಡ್ಡ ಕನಕಪುರದಲ್ಲಿ ಕೇಸರಿ ಭಾವುಟಗಳನ್ನು ಹಾರಿಸಿ ಕೇಸರಿ ಮಯವನ್ನಾಗಿ ಮಾಡಲಾಗಿತ್ತು. ಇದೀಗ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಭದ್ರಕೋಟೆ ರಾಮನಗರದಲ್ಲಿ ಕೇಸರಿ ಕಹಳೆ ಮೊಳಗಿಸಲು ಸಿದ್ಧತೆ ನಡೆಸಲಾಗಿದೆ.

ಆರ್‌ಎಸ್‌ಎಸ್ ಪಥಸಂಚಲನದ ಹೆಸರಿನಲ್ಲಿ ರಾಮನಗರದಲ್ಲಿ ಕೇಸರಿ ಭಾವುಟಗಳನ್ನು ಹಾರಿಸಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಸಾವಿರಾರರು ಮಂದಿ ಪಥಸಂಚಲನದಲ್ಲಿ ಭಾಗಿಯಾಗುತ್ತಿರುವುದು ಇಂತಹದೊಂದು ಚರ್ಚೆಗೆ ಕಾರಣವಾಗಿದೆ. ಪ್ರಮುಖವಾಗಿ ಆರ್‌ಎಸ್‌ಎಸ್ ದಕ್ಷಿಣ ಮಧ್ಯಕೇಂದ್ರಿಯ ಕಾರ್ಯಕಾರಣಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಿಜೆಪಿ ಪ್ರಾಬಲ್ಯ ಇಲ್ಲದಿರುವ ರಾಮನಗರಕ್ಕೆ ಕರೆಸಲಾಗುತ್ತಿದೆ. ಕನಕಪುರದಲ್ಲಿ ಡಿ.ಕೆ.ಶಿವಕುಮರ್ ಅವರ ವಿರುದ್ಧ ನಡೆದ ಪ್ರತಿಭಟನೆಯಲ್ಲಿಯು ಇವರಿಗೆ ನೇತೃತ್ವ ನೀಡಲಾಗಿತ್ತು.

ಕಳೆದ ಜನವರಿ 13ರಂದು ಕನಕಪುರದಲ್ಲಿ ಕೇಸರಿ ಕಹಳೆ ಮೊಳಗಿಸಿ ತಿಂಗಳು ಕಳೆಯುವ ಮುನ್ನವೇ ಇದೀಗ ರಾಮನಗರದಲ್ಲಿ ಕೇಸರಿ ಕಹಳೆ ಮೊಳಗಿಸಲು ಎರಡನೇ ಬಾರಿಗೆ ಆರ್‌ಎಸ್‌ಎಸ್ ನ ಕಲ್ಲಡ್ಕ ಪ್ರಭಾಕರ್ ಭಟ್ ಜಿಲ್ಲೆಗೆ ಆಗಮಿಸ್ತಿದ್ದಾರೆ. ಅದರಲ್ಲೂ ಬಿಜೆಪಿಗೆ ಅಧಿಕಾರ ಸಿಗದಂತೆ ಮಾಡಿ ಮೈತ್ರಿ ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಚ್‍ಡಿಕೆ-ಡಿಕೆಶಿ ಇಬ್ಬರನ್ನು ಇದೀಗ ಬಿಜೆಪಿ ಸರ್ಕಾರ ಬಂದ ಬಳಿಕ ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರು ಟಾರ್ಗೆಟ್ ಮಾಡುತ್ತಿದ್ದರಾ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಭಾನುವಾರ ನಡೆಯಲಿರುವ ಪಥಸಂಚಲನದಲ್ಲಿ ಬಿಜೆಪಿಯ ನಾಯಕರಾದ ಸಿಪಿ ಯೋಗೇಶ್ವರ್, ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ, ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಭಾಗವಹಿಸಲಿದ್ದಾರೆ. ಅದಕ್ಕೆ ಪೂರಕವೆಂಬಂತೆ ಈಗಾಗಲೇ ಸಿಪಿವೈ ಗಣವೇಷಧಾರಿಯಾಗಿ ಮಕ್ಕಳ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಡಿಸಿಎಂ ಅಶ್ವಥ್ ನಾರಾಯಣ್ ಸಹ ಭಾಗವಹಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದನ್ನು ಓದಿ: ಮಂತ್ರಿಗಿರಿಗಾಗಿ ಹೊಸ ವೇಷ ಹಾಕಿದ್ರಾ ಸಿ.ಪಿ.ಯೋಗೇಶ್ವರ್?

ಮೊದಲ ಬಾರಿಗೆ ನಗರದ 2 ಮಾರ್ಗಗಳಲ್ಲಿ ಪಥಸಂಚಲನ ಸಾಗಲಿದೆ. ಸುಮಾರು 5 ಸಾವಿರ ಮಂದಿ ಬಾಗವಹಿಸುವ ನಿರೀಕ್ಷೆಯಿದ್ದು, ಕಲ್ಲಡ್ಕ ಪ್ರಭಾಕರ್ ಭಟ್ ಅವರಿಂದ ಜೂನಿಯರ್ ಕಾಲೇಜು ಮೈದಾನದಲ್ಲಿ ದಿಕ್ಸೂಚಿ ಭಾಷಣ ನಡೆಯಲಿದೆ. ಆರ್.ಎಸ್.ಎಸ್ ಪಥಸಂಚಲನಕ್ಕೆ 5 ಸರ್ಕಲ್ ಇನ್ಸೆ ಪೆಕ್ಟರ್, 7 ಸಬ್ ಇನ್ ಸ್ಪೆಕ್ಟರ್, 22 ಎಎಸ್‍ಐ, 162 ಪೊಲೀಸ್ ಪೇದೆಗಳು, 5 ಡಿಆರ್ ತುಕಡಿಗಳು, 40 ಮಂದಿ ಹೋಂ ಗಾರ್ಡ್ ಗಳು ಪಥಸಂಚಲನದಲ್ಲಿ ನಿಯೋಜನೆಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *