ದಿನ ಭವಿಷ್ಯ: 10-01-2020

Public TV
2 Min Read

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ಪೌರ್ಣಿಮೆ,
ಶುಕ್ರವಾರ, ಆರಿದ್ರಾ ನಕ್ಷತ್ರ
ಮಧ್ಯಾಹ್ನ 2:50 ನಂತರ ಪುನರ್ವಸು ನಕ್ಷತ್ರ

ರಾಹುಕಾಲ: ಬೆಳಗ್ಗೆ 11:04 ರಿಂದ 12:30
ಗುಳಿಕಕಾಲ: ಬೆಳಗ್ಗೆ 8:12 ರಿಂದ 9:38
ಯಮಗಂಡಕಾಲ: ಮಧ್ಯಾಹ್ನ 3:22 ರಿಂದ 4:48

ಮೇಷ: ಮನಸ್ಸಿನಲ್ಲಿ ಆತಂಕ-ಸಂಕಟ, ವಿಪರೀತ ಕೋಪ, ಬಂಧುಗಳೊಂದಿಗೆ ವಾಗ್ವಾದ, ಕುಟುಂಬದಲ್ಲಿ ವೈಮನಸ್ಸು, ತಾಯಿಯ ಆರೋಗ್ಯದಲ್ಲಿ ಏರುಪೇರು.

ವೃಷಭ: ಸ್ತ್ರೀಯರಿಂದ ಪಡೆದ ಸಾಲದಿಂದ ಅವಮಾನ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಹಣಕಾಸು ಬಿಕ್ಕಟ್ಟು, ಹೆಣ್ಣು ಮಕ್ಕಳಿಂದ ಮಾನಹಾನಿ.

ಮಿಥುನ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ವ್ಯವಹಾರದಲ್ಲಿ ಅನುಕೂಲ, ವ್ಯಾಪಾರಸ್ಥರಿಗೆ ಧನಾಗಮನ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವರ್ಗಾವಣೆಯಾಗುವ ಆತಂಕ.

ಕಟಕ: ಆತುರ ಸ್ವಭಾವದಿಂದ ನಷ್ಟ, ಅತಿಯಾದ ಆತ್ಮ ವಿಶ್ವಾಸ, ಮಕ್ಕಳ ಬಗ್ಗೆ ಚಿಂತೆ, ಚಿಂತೆಯಿಂದ ನಿದ್ರಾಭಂಗ, ಕೆಟ್ಟ ದೃಷ್ಠಿಯಿಂದ ತೊಂದರೆ.

ಸಿಂಹ: ಭೂಮಿಯಿಂದ ಲಾಭ, ಮಹಿಳಾ ಮಿತ್ರರಿಂದ ಮೋಸ, ಹಣಕಾಸು ನಷ್ಟ ಸಾಧ್ಯತೆ, ಉಷ್ಣ ಬಾಧೆ, ಬಾಯಿ ಹುಣ್ಣು, ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಕನ್ಯಾ: ಕೈಗಾರಿಕೋದ್ಯಮದಲ್ಲಿ ಲಾಭ, ಮಾರಾಟ ಕ್ಷೇತ್ರದವರಿಗೆ ಅನುಕೂಲ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಉದ್ಯೋಗ ಸ್ಥಳದಲ್ಲಿ ಮೊಂಡುವಾದ.

ತುಲಾ: ಉದ್ಯೋಗದಲ್ಲಿ ಒತ್ತಡ, ಆಲೋಚನೆಗಳಿಂದ ನಿದ್ರಾಭಂಗ, ಮಾನಸಿಕ ವ್ಯಥೆ, ಕೆಟ್ಟಾಲೋಚನೆ, ಪ್ರಯಾಣದಲ್ಲಿ ಅಡೆತಡೆ,
ತಂದೆಯಿಂದ ನಿಂದನೆ.

ವೃಶ್ಚಿಕ: ಆಕಸ್ಮಿಕ ಸಾಲಗಾರರಿಂದ ಮುಕ್ತಿ ಸಾಧ್ಯತೆ, ಮಿತ್ರರೊಂದಿಗೆ ಕೆಟ್ಟಾಲೋಚನೆ, ದುಷ್ಕøತ್ಯಗಳಿಗೆ ಮನಸ್ಸು, ಆಕಸ್ಮಿಕ ಪ್ರಯಾಣ ರದ್ದು, ವ್ಯವಹಾರಗಳಲ್ಲಿ ಎಚ್ಚರ.

ಧನಸ್ಸು: ಉದ್ಯೋಗ ಸ್ಥಳದಲ್ಲಿ ಪ್ರೇಮ ಪ್ರಸ್ತಾವನೆ, ದಾಂಪತ್ಯದಲ್ಲಿ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ನಿರುತ್ಸಾಹ, ಆಸೆ ಆಕಾಂಕ್ಷೆಗಳು, ಪ್ರೀತಿ-ಪ್ರೇಮ ವಿಚಾರದಲ್ಲಿ ನಿರಾಸಕ್ತಿ.

ಮಕರ: ಸ್ಥಿರಾಸ್ತಿಗಾಗಿ ಸಾಲ ಮಾಡುವಿರಿ, ಉದ್ಯಮ ಪ್ರಾರಂಭಕ್ಕೆ ಮನಸ್ಸು, ವ್ಯವಹಾರ ಆರಂಭಕ್ಕೆ ಹಿನ್ನಡೆ, ಮಿತ್ರರಿಗಾಗಿ ಮಾಡಿದ ಸಾಲಬಾಧೆ, ತಂದೆ ಮಾಡಿದ ಸಾಲದಿಂದ ತೊಂದರೆ.

ಕುಂಭ: ಆಕಸ್ಮಿಕ ಘಟನೆಗಳಿಂದ ಬೆಳವಣಿಗೆ ಕುಂಠಿತ, ಬಡ್ತಿ, ಗೌರವ ಸನ್ಮಾನ ಅನ್ಯರ ಪಾಲಾಗುವುದು, ಅತಿಯಾದ ಉಲ್ಲಾಸ, ಮೋಜು ಮಸ್ತಿಯಿಂದ ತೊಂದರೆ.

ಮೀನ: ಮಾತೃವಿಂದ ಆಲೋಚನೆಗಳಿಗೆ ಸಹಕಾರ, ಸಂಶಯಾತ್ಮಕ ಆಲೋಚನೆ, ಪ್ರೇಮಿಗಳ ನಡುವೆ ವೈಮನಸ್ಸು, ಹಳೇ ವಾಹನ ಖರೀದಿಗೆ ಯೋಚನೆ.

 

Share This Article
Leave a Comment

Leave a Reply

Your email address will not be published. Required fields are marked *