12ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಲಾಂಛನ ಬಿಡುಗಡೆ

Public TV
1 Min Read

ಬೆಂಗಳೂರು: 12 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಫೆಬ್ರವರಿ 26 ರಿಂದ ಮಾರ್ಚ್ 4 ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಚಲನಚಿತ್ರೋತ್ಸವದ ಲಾಂಛನವನ್ನ ಸಿಎಂ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣದಲ್ಲಿ ಬಿಡುಗಡೆ ಮಾಡಿದರು. ಸಚಿವರಾದ ಬಸವರಾಜ್ ಬೊಮ್ಮಾಯಿ, ಸಿಸಿ ಪಾಟೀಲ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಸೇರಿ ಹಲವರು ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಫೆಬ್ರವರಿ 26 ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸಿಎಂ ಯಡಿಯೂರಪ್ಪ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ ಇಲಾಖೆ, ಚಲನಚಿತ್ರ ವಾಣಿಜ್ಯ ಮಂಡಳಿಗಳು ಈ ಬಾರಿಯ ಚಲನಚಿತ್ರೋತ್ಸವಕ್ಕೆ ಕೈಜೋಡಿಸಿವೆ. ರಾಜಾಜಿನಗರದ ಓರಿಯನ್ ಮಾಲ್ ನ 11 ಪರದೆಯಲ್ಲಿ ಚಿತ್ರ ಪ್ರದರ್ಶನವಾಗಲಿದೆ. ಏಳು ದಿನಗಳ ಚಿತ್ರೋತ್ಸವದಲ್ಲಿ ಒಟ್ಟು 14 ವಿಭಾಗಗಳಿದ್ದು, ಚಿತ್ರೋದ್ಯಮದ ಎಲ್ಲಾ ವಿಭಾಗಗಳನ್ನು ಪ್ರತಿನಿಧಿಸಲಿದೆ. ವಿಶ್ವ ಸಿನಿಮಾ, ಚಿತ್ರಭಾರತಿ, ಕಣ್ಮರೆಯಾದ ನಟ-ನಟಿಯರು, ನಿರ್ದೇಶಕರ ಸ್ಮರಣೆ, ಸಾಕ್ಷ್ಯಚಿತ್ರಗಳು ಇಲ್ಲಿ ಚಿತ್ರಲೋಕದ ವೈವಿಧ್ಯವನ್ನು ತೆರೆದಿಡಲಿದೆ. ಸಂವಾದ, ಉಪನ್ಯಾಸ, ಕಾರ್ಯಾಗಾರ ಕಾರ್ಯಕ್ರಮಗಳು ನಡೆಯಲಿವೆ.

ವಿಶ್ವದ 50 ದೇಶಗಳ 200 ಚಿತ್ರಗಳು ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಚಿತ್ರೋತ್ಸವಕ್ಕೆ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಸಾಮಾನ್ಯ ಜನರಿಗೆ 800 ರೂ ಮತ್ತು ಚಿತ್ರತಂಡದವರಿಗೆ, ಸಿನಿಮಾ ವಿದ್ಯಾರ್ಥಿಗಳಿಗೆ 400 ಶುಲ್ಕ ನಿಗದಿ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *