ಬೆಂಗ್ಳೂರಿನ ಅಪಾರ್ಟ್‌ಮೆಂಟ್‍ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ

Public TV
1 Min Read

ಬೆಂಗಳೂರು: ದಿನದಿಂದ ದಿನಕ್ಕೆ ಹೈಟೆಕ್ ವೇಶ್ಯಾವಾಟಿಕೆಗಳು ಹೆಚ್ಚಾಗುತ್ತಿದ್ದಾವೆ. ಒಂದು ದಿನ ಸ್ಪಾ, ಇನ್ನೊಂದು ದಿನ ಮಸಾಜ್ ಪಾರ್ಲರ್ ಮತ್ತೊಂದು ದಿನ ಅಪಾರ್ಟ್‌ಮೆಂಟ್‍ನಲ್ಲೂ ವೇಶ್ಯಾವಾಟಿಕೆ ನಡೆಯುತ್ತಿರುವುದು ಕಂಡು ಬಂದಿದೆ.

ಹೌದು. ಅಪಾರ್ಟ್‌ಮೆಂಟ್‍ಗಳಲ್ಲೂ ಕೂಡ ಯಾರಿಗೂ ಅನುಮಾನ ಬಾರದಂತೆ ಹೈಟೆಕ್ ವೇಶ್ಯಾವಾಟಿಕೆಗಳನ್ನು ನಡೆಸುತ್ತಿದ್ದಾರೆ. ಈ ಮಾಹಿತಿಯನ್ನು ಆಧರಿಸಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಗಳವಾರ ರಾತ್ರಿ ಬಾಣಸವಾಡಿಯ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.

ಮೂವರು ಕೂಡ ಹೊರ ರಾಜ್ಯದ ಯವತಿಯರು ಎಂದು ತಿಳಿದು ಬಂದಿದೆ. ಅಪಾರ್ಟ್‌ಮೆಂಟ್‌ನ ಮಾಲೀಕ ಕೂಡ ಈ ಹೈಟೆಕ್ ವೇಶ್ಯಾವಾಟಿಕೆಗೆ ಸಾಥ್ ನೀಡಿದ್ದನು. ಸದ್ಯಕ್ಕೆ ದಾಳಿ ನಡೆಸಿದಾಗ ಒಬ್ಬ ಆರೋಪಿ ಬಲೆಗೆ ಬಿದ್ದಿದ್ದು, ಮಾಲೀಕನ ಜೊತೆ ಸಾಕಷ್ಟು ಜನ ಪರಾರಿಯಾಗಿದ್ದಾರೆ. ಹೀಗಾಗಿ ಆರೋಪಿಗಳಿಗಾಗಿ ಸಿಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *