ಕಾಂಗ್ರೆಸ್‍ನಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ: ಸಿದ್ದುಗೆ ಜಗದೀಶ್ ಶೆಟ್ಟರ್ ಟಾಂಗ್

Public TV
1 Min Read

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ ಎಂದು ಹೇಳುವ ಮೂಲಕ ಸಚಿವ ಜಗದೀಶ್ ಶೆಟ್ಟರ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೆಐಡಿಬಿಗೆ ಜಗದೀಶ್ ಶೆಟ್ಟರ್ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ಇಂದಿನ ರಾಜಕೀಯ ಸ್ಥಿತಿಗತಿ, ಪೌರತ್ವ ಕಾಯ್ದೆಯ ಪರಿಣಾಮಗಳನ್ನು ತಿಳಿಸುವ ಸಲುವಾಗಿ ಮಾತನಾಡಿದ್ದಾರೆ. ಚಿಕ್ಕ ಮಕ್ಕಳು ಇದೀಗ ಸಾಕಷ್ಟು ಬುದ್ಧಿವಂತರಿದ್ದಾರೆ. ದೇಶದ ವಾಸ್ತವ ಸ್ಥಿತಿ ಮಕ್ಕಳಿಗೆ ತಿಳಿಸುವ ಕೆಲಸ ಮೋದಿ ಜೀ ಮಾಡಿದ್ದಾರೆ. ಅದು ಮಕ್ಕಳ ಗಮನಕ್ಕೆ ತರುವುದು ಒಳ್ಳೆಯ ಕೆಲಸವೇ ಜೊತೆಗೆ ಗಿತೋಪದೇಶವನ್ನು ನೀಡಿದ್ದು, ಕಾಂಗ್ರೆಸ್‍ನವರು ಹೆಚ್ಚಾಗಿ ಅಪಪ್ರಚಾರವನ್ನೆ ಮಾಡ್ತಿದ್ದು, ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನ ಮೊದಲಿನಿಂದಲೂ ಮಾಡ್ತಿದ್ದಾರೆ ಎಂದರು.

ನೆರೆ ಪರಿಹಾರದ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಮೋದಿಜೀ ಗಮನಕ್ಕೆ ತಂದಿರುವುದರಿಂದ ಇಂದಲ್ಲ ನಾಳೆ ರಾಜ್ಯಕ್ಕೆ ನೆರವು ಸಿಕ್ಕೇ ಸಿಗುತ್ತೆ ಎಂದರು. ಧಿಡೀರ್ ಎಂದು ದೇವನಹಳ್ಳಿ ಬಳಿಯ ಕೆಐಡಿಬಿಗೆ ಆಗಮಿಸಿದ ಸಚಿವ ಜಗದೀಶ್ ಶೆಟ್ಟರ್ ಹರಳೂರು, ಪೋಲನಹಳ್ಳಿ, ಮುದ್ದೇನಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ನೂತನ ಕೈಗಾರಿಕಾ ಪ್ರದೇಶಕ್ಕೆ ಸ್ವಾಧೀನಪಡಿಸಿಕೊಂಡಿರುವ 1800 ಎಕರೆಗೆ ರೈತರಿಗೆ ಪರಿಹಾರ ಧನ ನೀಡಲು ರೈತರ ಬಳಿ ಲಂಚ ಕೇಳುವ ಅಧಿಕಾರಿಗಳ ಬಗ್ಗೆ ದೂರು ನೀಡಿದರೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *