ನೇತ್ರದಾನ ಮಾಡಿ: ಪವರ್ ಸ್ಟಾರ್ ಮನವಿ

Public TV
1 Min Read

ಬೆಂಗಳೂರು: ನೇತ್ರದಾನ ಮಾಡಿ ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ವರನಟ ಡಾ.ರಾಜ್‍ಕುಮಾರ್ ಅವರು ನೇತ್ರದಾನ ಮಾಡುವ ಮೂಲಕ ಲಕ್ಷಾಂತರ ಅಭಿಮಾನಿಗಳಿಗೆ ಸ್ಫೂರ್ತಿ ಆಗಿದ್ದರು. ಅವರ ಹೆಸರಿನಲ್ಲಿ ಆರಂಭವಾದ ಡಾ.ರಾಜ್‍ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರವು ವಿವಿಧ ಕಡೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ನೇತ್ರದಾನದ ಬಗ್ಗೆ ಜಾಗೃತಿ ಹಾಗೂ ಉಚಿತ ಕಣ್ಣಿನ ತಪಾಸಣೆ ನಡೆಸುತ್ತಾ ಸಾಗುತ್ತಿದೆ.

ಡಾ.ರಾಜ್‍ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರವು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಮಂಗಳವಾರ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮ ತಮ್ಮಿಕೊಂಡಿತ್ತು. ಈ ವಿಚಾರವನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮ ಟ್ವಿಟ್ಟರ್, ಫೇಸ್‍ಬುಕ್ ಖಾತೆ ಮೂಲಕ ಹಂಚಿಕೊಂಡಿದ್ದಾರೆ.

ನೇತ್ರ ದಾನ ಮಹಾ ದಾನ. ಡಾ.ರಾಜ್‍ಕುಮಾರ್ ಟ್ರಸ್ಟ್, ಬೆಂಗಳೂರು ಮತ್ತು ಡಾ.ರಾಜ್‍ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರ ಬಿಡದಿ ಸಂಸ್ಥೆಗಳು ಮಂಗಳವಾರ ಸಿದ್ಧಗಂಗಾ ಮಠದ ಸುಮಾರು 10,000 ಶಾಲಾ ಮಕ್ಕಳಿಗೆ ಶಂಕರ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕಗಳ ವಿತರಣೆ ಕಾರ್ಯಕ್ರಮ ನೆರವೇರಿತು. ಶಾಲೆಯ 10,000 ಮಕ್ಕಳು ಒಟ್ಟಾಗಿ ನೇತ್ರಗಳ ರಕ್ಷಣೆ ನಮ್ಮ ಗುರಿ, ಪ್ರಾಕೃತಿಕ ಜೀವನ ನಮ್ಮ ದಾರಿ ಎಂಬ ಫಲಕವನ್ನು ಪ್ರದರ್ಶಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಿಸಲಾಯಿತು ಎಂದು ಪುನೀತ್ ರಾಜ್‍ಕುಮಾರ್ ತಿಳಿಸಿದ್ದಾರೆ.

https://www.instagram.com/p/B5XWmuPJmIV/

ಪುನೀತ್ ರಾಜ್‍ಕುಮಾರ್ ಅವರ ಟ್ವೀಟ್‍ಗೆ ಅನೇಕ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿರಾಜ್ ಬೆಳಗಾವಿ ರಿಟ್ವೀಟ್ ಮಾಡಿ, ಅಪ್ಪಾಜಿ ಹಾದಿಯಲ್ಲಿ ನಿಮ್ಮ ಪಯಣ ಹೀಗೆ ಸಾಗಲಿ. ಆ ಭಗವಂತನ ಕೃಪೆ ನಿಮ್ಮ ಮೇಲೆ ಸದಾಕಾಲವೂ ಇರುತ್ತ. ಹೀಗೆ ಅಪ್ಪು ಅಣ್ಣಾ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *