ನ್ಯೂಯಾರ್ಕ್: ಸತತ 9 ವರ್ಷಗಳಿಂದ ಸೆಕ್ಸ್‌ನಿಂದ ದೂರವಿದ್ದ ಸನ್ಯಾಸಿನಿ ಈಗ ಪೋರ್ನ್ ಸ್ಟಾರ್ ಆಗಿ ಭಾರೀ ಸುದ್ದಿಯಾಗಿದ್ದಾಳೆ. ಎಲ್ಲವನ್ನೂ ತ್ಯಜಿಸಿ ಸನ್ಯಾಸಿನಿಯಾಗಿ ಚರ್ಚ್ ಸೇರಿದ್ದವಳು ತಾನು ಪೋರ್ನ್ ಸ್ಟಾರ್ ಆದ ಕಥೆಯನ್ನು ಬಿಚ್ಚಿಟ್ಟಿದ್ದಾಳೆ.
ಪೋರ್ನ್ ನಟಿ ಎಡ್ಡಿ ಆಡಮ್ಸ್ ತನ್ನ ಜೀವನ ಹೇಗೆ ಆಧ್ಯಾತ್ಮದಿಂದ ಪೋರ್ನ್ ಜಗತ್ತಿನತ್ತ ತಿರುಗಿತು ಎನ್ನುವುದನ್ನು ತೆರೆದಿಟ್ಟಿದ್ದಾಳೆ. ಸಂದರ್ಶನವೊಂದರಲ್ಲಿ ಎಡ್ಡಿ ಈ ಬಗ್ಗೆ ತಿಳಿಸಿದ್ದಾಳೆ. ಧಾರ್ಮಿಕ ಕುಟುಂಬದಿಂದ ಬಂದ ಎಡ್ಡಿ ಪೆಸಿಫಿಕ್ ವಾಯುವ್ಯ ಪ್ರದೇಶದಲ್ಲಿ ಬೆಳೆದವಳು. ತನ್ನ 17ನೇ ವಯಸ್ಸಿಗೆ ಆಕೆ ಸನ್ಯಾಸತ್ವ ಪಡೆದು ಚರ್ಚ್ ಸೇರಿದ್ದಳು. ಬಾಲ್ಯದಿಂದ ತನ್ನ ಕುಟುಂಬಸ್ಥರು ತನ್ನನ್ನು ಬೆಳೆಸಿದ ರೀತಿ, ಅನುಸರಿಸುತ್ತಿದ್ದ ಸಂಪ್ರದಾಯಗಳು ತನ್ನನ್ನು ಚಿಕ್ಕ ವಯಸ್ಸಿಗೆ ಸನ್ಯಾಸಿನಿಯಾಗಲು ಪ್ರೇರೇಪಿಸಿತು. ಆದರೆ ಸನ್ಯಾಸಿನಿ ಆದ ಬಳಿಕ ತನ್ನ ಗುರುತೇ ಬದಲಾಯ್ತು ಎಂದು ಎಡ್ಡಿ ತಿಳಿಸಿದಳು.
ಸನ್ಯಾಸಿನಿಯಾದ ಬಳಿಕ ಚರ್ಚಿನ ಕಟ್ಟುನಿಟ್ಟಿನ ನಿಯಮವನ್ನು ಅನುಸರಿಸಬೇಕಿತ್ತು. ಅಲ್ಲಿ ಮದುವೆಗೂ ಮುನ್ನ ಸೆಕ್ಸ್ ಮಾಡುವುದು ಅಪರಾಧ, ದೊಡ್ಡ ಪಾಪ, ಅದನ್ನು ದೇವರು ಮೆಚ್ಚಲ್ಲ ಎಂದು ಹೇಳಲಾಗುತ್ತಿತ್ತು. ಆದ್ದರಿಂದ ತನ್ನ ಆಸೆಗಳನ್ನು ಬದಿಗಿಟ್ಟು ತಾನು 9 ವರ್ಷಗಳ ಕಾಲ ಸನ್ಯಾಸಿನಿ ಆದೆ. ಆದರೆ ಬಳಿಕ ಎಲ್ಲೋ ತಾನು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದೇನೆ ಎನಿಸಲು ಶುರುವಾಯ್ತು. ಅಲ್ಲದೆ ಒಮ್ಮೆ ತನ್ನ ಸಹೋದರಿಯ ಮದುವೆಯಲ್ಲಿ ತನಗೆ ಮಧುಮಗಳ ಮೇಡ್ ಆಗಲು ಚರ್ಚ್ ಒಪ್ಪಿಗೆ ನೀಡಿರಲಿಲ್ಲ. ಇದು ನನಗೆ ಬೇಸರವಾಯ್ತು. ಹೀಗಾಗಿ 2017ರಲ್ಲಿ ಚರ್ಚ್ ಬಿಟ್ಟು ಸಿನಿಮಾ ನಟಿ ಆಗಬೇಕು ಎಂದು ಲಾಸ್ ಏಂಜಲೀಸ್‍ಗೆ ಬಂದೆ. ಆದರೆ ದುರಾದೃಷ್ಟವಶಾತ್ ತನಗೆ ಸಿನಿಮಾರಂಗದಲ್ಲಿ ಅವಕಾಶ ಸಿಗಲಿಲ್ಲ. ಬಳಿಕ ಪೋರ್ನ್ ಜಗತ್ತು ತನ್ನನ್ನು ಕೈಬೀಸಿ ಕರೆಯಿತು. ಹೀಗಾಗಿ ತಾನು ಪೋರ್ನ್ ಸ್ಟಾರ್ ಆದೆ ಎಂದು ಎಡ್ಡಿ ಹೇಳಿದಳು.
ಮೊದಲು ತನ್ನ ವೃತ್ತಿ ಬಗ್ಗೆ ಕುಟುಂಬಕ್ಕೆ ತಿಳಿಸಿದಾಗ ವಿರೋಧ ವ್ಯಕ್ತವಾಯ್ತು. ಆದರೆ ತನ್ನ ಕುಟುಂಬಕ್ಕೆ ತನಗೆ ಈ ವೃತ್ತಿ ಖುಷಿ ನೀಡಿದೆ ಎಂಬುದು ಅರ್ಥವಾಯ್ತು. ತಾನು ಖುಷಿಯಿಂದ ಬದುಕುವುದು ಅವರಿಗೆ ಮುಖ್ಯವಾಗಿತ್ತು. ಹೀಗಾಗಿ ಕುಟುಂಬವೂ ತನಗೆ ಬೆಂಬಲ ನೀಡಿದೆ ಎಂದು ಎಡ್ಡಿ ಮನಬಿಚ್ಚಿ ಮಾತನಾಡಿದಳು.
ಸದ್ಯ ಪೋರ್ನ್ ಸ್ಟಾರ್ ಆಗಿ ಮಿಂಚುತ್ತಿರುವ ಎಡ್ಡಿ ಫೋಟೋವನ್ನು ಇತ್ತೀಚೆಗೆ ಹೆಸರಾಂತ ಪೆಂಟ್‍ಹೌಸ್ ಮ್ಯಾಗಜೀನ್ ತನ್ನ ಮುಖಪುಟದಲ್ಲಿ ಪ್ರಕಟಿಸಿದೆ.