ಗಾರ್ಡನ್ ಪಾಟ್ ಕಳ್ಳತನ – ವಿಡಿಯೋ ಮಾಡುತ್ತಿದ್ದಂತೆ ಕಳ್ಳ ಪರಾರಿ

Public TV
1 Min Read

– ವಿಡಿಯೋ ಫುಲ್ ವೈರಲ್
– ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ

ನವದೆಹಲಿ: ಕಂಬಗಳು ಸುಂದರವಾಗಿ ಕಾಣಲೆಂದು ಹಾಕಲಾಗಿದ್ದ ವರ್ಟಿಕಲ್ ಗಾರ್ಡನ್ ಪಾಟ್‍ಗಳನ್ನು ವ್ಯಕ್ತಿಯೊಬ್ಬ ಕದ್ದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ದೆಹಲಿಯ ನಗರ ಸುಂದರವಾಗಿ ಕಾಣಲೆಂದು ಸಿಮೆಂಟ್ ಕಂಬದಲ್ಲಿ ವರ್ಟಿಕಲ್ ಗಾರ್ಡನ್ ಮಾಡಲಾಗಿತ್ತು. ವ್ಯಕ್ತಿಯೊಬ್ಬ ಗಾರ್ಡನ್ ಬಳಿ ಹೋಗಿ ಪಾಟ್ ಎಳೆದುಕೊಂಡು ಸರಸರನೇ ಅದರಲ್ಲಿದ್ದ ಮಣ್ಣು ಹಾಗೂ ಗಿಡವನ್ನು ಕೆಳಕ್ಕೆ ಚೆಲ್ಲಿ ಪ್ಲಾಸ್ಟಿಕ್ ಪಾಟ್ ಮಾತ್ರ ತನ್ನ ಚೀಲಕ್ಕೆ ತುಂಬಿಸಿದ್ದಾನೆ.

ಅಷ್ಟರಲ್ಲಾಗಲೇ ಹಿಂದಿರುವವರು ವಿಡಿಯೋ ಮಾಡಿದ್ದಾರೆ. ಪಾಟ್ ಕಿತ್ತ ನಂತರ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ವ್ಯಕ್ತಿ ಓಡಲು ಆರಂಭಿಸಿದ್ದಾನೆ. ಹನ್ನೆರಡು ಸೆಕೆಂಡ್‍ಗಳ ಈ ವಿಡಿಯೋ ಕ್ಲಿಪ್ ಅಲ್ವೇಜ್ ದಿಲ್ ಸೆ ಎಂಬ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://www.facebook.com/nishantdilse/videos/866538697074705/?v=866538697074705

ಬಹುತೇಕರು ಇದೇ ರೀತಿ ಕದ್ದಿದ್ದರಿಂದ ವರ್ಟಿಕಲ್ ಗಾರ್ಡನ್‍ನಲ್ಲಿನ ಅರ್ಧಕ್ಕೂ ಹೆಚ್ಚು ಪಾಟ್‍ಗಳು ಖಾಲಿಯಾಗಿವೆ. ಮೇಲ್ಸೇತುವೆಯ ಕಂಬಗಳು ಸುಂದರವಾಗಿ ಕಾಣಲೆಂದು ವರ್ಟಿಕಲ್ ಗಾರ್ಡನ್ ಮಾಡಿದರೆ, ಗಿಡಗಳನ್ನು ಕಿತ್ತಿದ್ದರಿಂದ ಖಾಲಿ ಖಾಲಿಯಾಗಿ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ಫೇಸ್‍ಬುಕ್ ಪೇಜ್‍ಗೆ ಟ್ಯಾಗ್ ಮಾಡಲಾಗಿದೆ. ನಾವು ಯಾವುದೇ ಸರ್ಕಾರಿ ಇಲಾಖೆಯನ್ನು ದೂಷಿಸುವುದಿಲ್ಲ. ಜನರ ಈ ರೀತಿಯ ವರ್ತನೆಯನ್ನು ತಡೆಯದಿದ್ದರೆ, ಇಂತಹವರನ್ನು ಹಿಡಿದು ಸ್ಥಳಿಯ ಪೊಲೀಸರಿಗೆ ಒಪ್ಪಿಸಲಾಗುವುದು. ಈ ಬಾರಿ ನಾನು ಈತನನ್ನು ತಪ್ಪಿಸಿಕೊಳ್ಳಲು ಬಿಟ್ಟಿದ್ದೇನೆ, ಇನ್ನು ಮುಂದೆ ಬಿಡುವುದಿಲ್ಲ ಎಂಬ ಸಾಲುಗಳನ್ನು ಬರೆಯಲಾಗಿದೆ.

ಪೊಲೀಸರು ಈ ರೀತಿ ಕದಿಯುವ ವ್ಯಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜನ ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *