ದಿನ ಭವಿಷ್ಯ 7-9-2019

Public TV
1 Min Read

ಪಂಚಾಂಗ

ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಶನಿವಾರ, ಮೂಲ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:17 ರಿಂದ 10:49
ಗುಳಿಕಕಾಲ: ಬೆಳಗ್ಗೆ 6:12 ರಿಂದ 7:45
ಯಮಗಂಡಕಾಲ: ಮಧ್ಯಾಹ್ನ 1:53 ರಿಂದ 3:25

ಮೇಷ: ಸ್ವಂತ ವ್ಯಾಪಾರದಲ್ಲಿ ಅಧಿಕ ಲಾಭ, ತಾಯಿಯಿಂದ ಧನಾಗಮನ, ಸ್ಥಿರಾಸ್ತಿ-ವಾಹನದಿಂದ ಲಾಭ.

ವೃಷಭ: ಉದ್ಯೋಗದಲ್ಲಿ ನಷ್ಟ, ಉದ್ಯೋಗ ಸ್ಥಳದಲ್ಲಿ ಗೊಂದಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ,ಮಾಟ ಮಂತ್ರದ ಬಗ್ಗೆ ಎಚ್ಚರ.

ಮಿಥುನ: ಮುಖದ ಭಾಗಕ್ಕೆ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಬರವಣಿಗೆಯಲ್ಲಿ ಎಚ್ಚರ, ಸ್ವಯಂಕೃತ ಅಪರಾಧದಿಂದ ನಿಂದನೆ.

ಕಟಕ: ವಾಹನದಿಂದ ಅಪಾಯ, ವಿಕೃತ ಆಸೆಗಳಿಂದ ಕುಟುಂಬಕ್ಕೆ ಸಂಕಷ್ಟ, ಆರೋಗ್ಯದ ಬಗ್ಗೆ ಎಚ್ಚರ.

ಸಿಂಹ: ಮಕ್ಕಳಿಗಾಗಿ ಅಧಿಕ ಖರ್ಚು, ಮನೋಭಿಲಾಷೆಗಳಿಗೆ ಪೆಟ್ಟು, ಮಕ್ಕಳ ವರ್ತನೆಯ ಬಗ್ಗೆ ಎಚ್ಚರ.

ಕನ್ಯಾ: ಸ್ನೇಹಿತರಿಂದ ನಷ್ಟ, ಕಳ್ಳತನವಾಗುವ ಸಾಧ್ಯತೆ, ಉಲ್ಲಾಸಭರಿತ ಕನಸು ಕಾಣುವಿರಿ.

ತುಲಾ: ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಎಚ್ಚರ, ಮಕ್ಕಳಿಂದ ದುಃಖ, ಪ್ರಯಾಣದಲ್ಲಿ ಅಡೆತಡೆ.

ವೃಶ್ಚಿಕ: ಆಸ್ತಿ ವಿಷಯದಲ್ಲಿ ಮೋಸ, ರಹಸ್ಯಗಳು ಬಯಲಾಗುವ ಸಾಧ್ಯತೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ,

ಧನಸ್ಸು: ಆರ್ಥಿಕ ಮುಗ್ಗಟ್ಟು ಸಾಧ್ಯತೆ, ಸರ್ಕಾರಿ ಅಧಿಕಾರಿಗಳಿಂದ ಸಮಸ್ಯೆ, ಆಕಸ್ಮಿಕ ಪ್ರಯಾಣ.

ಮಕರ: ಪಾಲುದಾರಿಕೆಯಿಂದ ಸಂಕಷ್ಟ, ಸಂಗಾತಿಯಿಂದ ನಿದ್ರಾಭಂಗ, ಯಂತ್ರೋಪಕರಣಗಳಿಂದ ನಷ್ಟ.

ಕುಂಭ: ಆಸ್ತಿಯ ಮೇಲೆ ಸಾಲ, ಕಾರ್ಮಿಕರ ಕೊರತೆ ಬಗೆಹರಿಯುವುದು, ಬಾಡಿಗೆದಾರರ ಸಮಸ್ಯೆಗಳು ಬಗೆಹರಿಯುವವು.

ಮೀನ: ಮನೋಲ್ಲಾಸಕ್ಕಾಗಿ ಖರ್ಚು, ಉದ್ಯೋಗದಲ್ಲಿ ನಿರಾಸಕ್ತಿ, ಮಾಟ ಮಂತ್ರದ ಬಗ್ಗೆ ಭಯ.

Share This Article
Leave a Comment

Leave a Reply

Your email address will not be published. Required fields are marked *