ಟ್ರಾಫಿಕ್ ದಂಡಕ್ಕೆ ಹೊಸ ಮಂತ್ರದಂಡ ಸಿದ್ಧಪಡಿಸಿಕೊಂಡ ನೆಟ್ಟಿಗರು- ವೈರಲಾಯ್ತು ವಿಡಿಯೋ

Public TV
1 Min Read

ಬೆಂಗಳೂರು: ಹೊಸ ಮೋಟಾರು ವಾಹನ ಕಾಯ್ದೆ ವಾಹನ ಸವಾರರ ಜೇಬನ್ನು ಸುಡುತ್ತಿದೆ. ಸರ್ಕಾರ ದಂಡದ ಮೊತ್ತ ಹೆಚ್ಚಳ ಮಾಡುವದರಿಂದ ಸಾರ್ವಜನಿಕರು ಸಂಚಾರಿ ನಿಯಮ ಪಾಲನೆ ಮಾಡುತ್ತಾರೆ ಎಂಬ ಉದ್ದೇಶವನ್ನು ಹೊಂದಿತ್ತು. ಆದ್ರೆ ಸರ್ಕಾರದ ಮಂತ್ರಕ್ಕೆ ಜನರು ತಿರುಮಂತ್ರವನ್ನು ಸಿದ್ಧಪಡಿಸಿಕೊಂಡು ತಿರುಗೇಟು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಏನದು ವಿಡಿಯೋ ವೈರಲ್?
ಹರ್ಯಾಣದ ಐಪಿಎಸ್ ಅಧಿಕಾರಿ ಪಂಕಜ್ ನಾಯನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಸವಾರರು ಪೊಲೀಸರನ್ನು ಕಂಡಕೂಡಲೇ ತಮ್ಮ ವಾಹನವನ್ನು ತಳ್ಳಿಕೊಂಡು ಹೋಗಿದ್ದಾರೆ. ಪೊಲೀಸರು ಮುಂದೆಯೇ ಬಹುತೇಕರು ತಮ್ಮ ದ್ವಿಚಕ್ರ ವಾಹನಗಳನ್ನು ತಳ್ಳಿಕೊಂಡು ಹೋಗುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದು.

https://twitter.com/bijendra125/status/1169143385095114753

ಈ ವಿಡಿಯೋವನ್ನು ಹಲವರು ರೀಟ್ವೀಟ್ ಮಾಡಿಕೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ದೊಡ್ಡ ಮೊತ್ತದ ದಂಡ ಪಾವತಿಸಬೇಕಾಗುತ್ತದೆ ಎಂದು ಎಲ್ಲರೂ ಬೈಕ್ ತಳ್ಳಿಕೊಂಡು ಹೋಗುತ್ತಿದ್ದಾರೆ. ಪ್ರತಿಯೊಂದಕ್ಕೂ ಒಂದೊಂದು ಕಳ್ಳ ಮಾರ್ಗಗಳನ್ನು ಭಾರತೀಯರು ಹುಡುಕಿಕೊಳ್ಳುತ್ತಾರೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಹಲವರು ಹಂಚಿಕೊಳ್ಳುತ್ತಿದ್ದು, ಟ್ರೋಲ್ ಮೂಲಕ ದೊಡ್ಡ ಮೊತ್ತದ ದಂಡಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಿಂದ ಸಾವಿರಾರು ರೂ. ದಂಡವನ್ನು ಹಲವರು ಕಟ್ಟಿದ್ದಾರೆ. ಸಾರ್ವಜನಿಕ ವಲಯದಲ್ಲಿ ಹೊಸ ನಿಯಮಕ್ಕೆ ವ್ಯಾಪಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಲವರು ತಮ್ಮ ಹಳೆಯ ವಾಹನದ ಮೌಲ್ಯಕ್ಕಿಂತ ದಂಡವೇ ಹೆಚ್ಚಾಯ್ತು ಎಂದು ಕಿಡಿಕಾರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ರಾಫಿಕ್ ದಂಡಕ್ಕೆ ಸಂಬಂಧಿಸಿದ ಮೀಮ್ಸ್, ಜೋಕ್ ಗಳು ಮಿಂಚಿನಂತೆ ಹರಿದಾಡುತ್ತಿವೆ.

ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನದವರೆಗೆ ಒಂದೇ ದಿನದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ 2,978 ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಗಳಿಂದ ಟ್ರಾಫಿಕ್ ಪೊಲೀಸರು ವಾಹನ ಸವಾರರಿಂದ ಭರ್ತಿ 30 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ನಿಯಮ ಉಲ್ಲಂಘಿಸಿದವರ ಬಳಿ ಭಾರೀ ದಂಡ ಕಟ್ಟಿಸಿಕೊಂಡು ಪೊಲೀಸರು ವಾಹನ ಸವಾರರ ಬೆವರಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *