ಅಭಿನಂದನ್‍ಗೆ ಮಾರ್ಗದರ್ಶನ ನೀಡಿದ್ದ ಐಎಎಫ್ ಮಹಿಳಾ ನಿಯಂತ್ರಕಿಗೆ ಯುಧ್ ಸೇವಾ ಪದಕ

Public TV
2 Min Read

ನವದೆಹಲಿ: ಫೆಬ್ರವರಿ 27ರಂದು ಪಾಕಿಸ್ತಾನದ ಮತ್ತು ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳ ನಡುವೆ ನಡೆದ ಡಾಗ್‍ಫೈಟ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಆ ವೇಳೆ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್‍ರಿಗೆ ಮಾರ್ಗದರ್ಶನ ನೀಡಿದ ಐಎಎಫ್ ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್ವಾಲ್‍ಗೆ ‘ಯುದ್ಧ ಸೇವಾ ಪದಕ’ ನೀಡಿ ಗೌರವಿಸಲಾಗಿದೆ.

ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್ವಾಲ್ ಅವರು ಫೆಬ್ರವರಿ 27ರಂದು ನಡೆದ ಡಾಗ್‍ಫೈಟ್‍ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತೀಯ ಗಡಿ ನಿಯಂತ್ರಣ ರೇಖೆ ದಾಟಿ ಬಂದ ಪಾಕ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲು ಅಭಿನಂದನ್ ಅವರಿಗೆ ಮಿಂಟಿ ಅಗರ್ವಾಲ್ ಅವರು ಮಾರ್ಗದರ್ಶನ ನೀಡಿ ಸಹಕರಿಸಿದ್ದರು. ಆದ್ದರಿಂದ ಮಿಂಟಿ ಅಗರ್ವಾಲ್ ಅವರಿಗೆ ಭಾರತ ಸರ್ಕಾರ ಯುಧ್ ಸೇವಾ ಪದಕ ನೀಡಿ ಗೌರವಿಸಿದೆ.

ಫೆ.27ರಂದು ಕರ್ತವ್ಯದಲ್ಲಿದ್ದ 7 ಮಂದಿ ಫೈಟರ್ ವಿಮಾನ ನಿಯಂತ್ರಕರಲ್ಲಿ ಮಿಂಟಿ ಅರ್ಗವಾಲ್ ಅವರು ಕೂಡ ಒಬ್ಬರಾಗಿದ್ದರು. ಆಗ ಪಾಕಿಸ್ತಾನ ಜೆಟ್‍ಗಳನ್ನು ತಡೆಯಲು ಭಾರತೀಯ ವಾಯು ಸೇನೆ ಆರಂಭಿಸಿದ್ದ ಪ್ರತಿಬಂಧ ಪ್ಯಾಕೆಜ್‍ಗಳನ್ನು ಮಿಂಟಿ ಅವರು ನಿಯಂತ್ರಿಸುತ್ತಿದ್ದರು.

ಈ ಬಗ್ಗೆ ಮಾತನಾಡಿದ ಮಿಂಟಿ ಅಗರ್ವಾಲ್ ಅವರು, ಫೆ.26 ಮತ್ತು 27ರಂದು ನಡೆದಿದ್ದ ಎರಡು ಕಾರ್ಯಾಚರಣೆಯಲ್ಲೂ ನಾನು ಭಾಗಿಯಾಗಿದ್ದೆನು. ಅಭಿನಂದನ್ ಅವರು ವಿಮಾನ ಹಾರಾಟ ನಡೆಸುತ್ತಿದ್ದಾಗ ಎರಡು ಕಡೆಯಿಂದಲೂ ಅವರು ನನ್ನ ಜೊತೆ ಸಂಪರ್ಕದಲ್ಲಿದ್ದರು. ಅಭಿನಂದನ್ ಅವರಿಗೆ ನಾನು ಪಾಕ್ ಗಡಿ ದಾಟುವ ಮುನ್ನ ವಾಪಸ್ ಬರಲು ಹೇಳಿದ್ದೆ. ಆದರೆ ಪಾಕಿಸ್ತಾನ ವಾಯು ಸೇನೆ ನಮ್ಮ ಕಮ್ಯೂನಿಕೇಶನ್ ಸಿಸ್ಟಮ್ ಅನ್ನು ಜ್ಯಾಮ್ ಮಾಡಿತ್ತು. ಆದ್ದರಿಂದ ನಾನು ನೀಡಿದ್ದ ಮಾರ್ಗದರ್ಶನ ಅವರಿಗೆ ಸಂವಹನ ಆಗಿರಲಿಲ್ಲ ಎಂದು ತಿಳಿಸಿದರು.

ಅಭಿನಂದನ್ ಅವರು ಕಾರ್ಯಾಚರಣೆಯಲ್ಲಿ ಇದ್ದಾಗ ನಾನು ಅವರಿಗೆ ವೈರಿ ಜೆಟ್‍ಗಳ ಬಗ್ಗೆ ಮಾಹಿತಿ ತಿಳಿಸುತ್ತಿದ್ದೆ. ವೈರಿಗಳ ವಿಮಾನ ಚಟುವಟಿಕೆಗಳ ಬಗ್ಗೆ ನಾನು ನಮ್ಮ ಪೈಲಟ್ ಗಳಿಗೆ ಹೇಳುತ್ತಿದ್ದೆ. ಅಲ್ಲದೆ ಎಫ್-16 ವಿಮಾನವನ್ನು ಹೊಡೆದುರುಳಿಸಿದಾಗ ಆದ ಖುಷಿ ವ್ಯಕ್ತಪಡಿಸಲು ಆಗಲ್ಲ. ಹಾಗೆಯೇ ಏರ್‌ಸ್ಟ್ರೈಕ್ ನಲ್ಲಿ ನಮ್ಮವರನ್ನು ಕಳೆದುಕೊಳ್ಳದೆ ಸುರಕ್ಷಿತವಾಗಿ ಕಾರ್ಯಾಚರಣೆ ನಡೆಸಿದ್ದು ಹೆಮ್ಮೆಯ ವಿಷಯವಾಗಿದೆ. ಒಟ್ಟಿಗೆ ಎಲ್ಲಾ ವಿಮಾನಗಳನ್ನು ನಿಯಂತ್ರಣ ಮಾಡುವುದು ಕಷ್ಟದ ವಿಚಾರ, ಆದರೆ ನಮ್ಮ ತಂಡ ಅದನ್ನು ಮಾಡಿ ತೋರಿಸಿದೆ ಎಂದು ಅನುಭವವನ್ನು ಹಂಚಿಕೊಂಡರು.

ವಾಯು ಪಡೆಗೆ ಸೇರಬೇಕು ಎಂದು ಚಿಕ್ಕ ವಯಸ್ಸಿನಿಂದಲೂ ನಾನು ಕನಸು ಕಂಡಿದ್ದೆನು ಅದು ನಿಜವಾಯಿತು. ವಾಸ್ತವ್ಯವಾಗಿ ನಡೆಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಬೇಕು ಎಂದು ಐಎಎಫ್ ಯೋಧರು ಆಸೆ ಪಡುತ್ತಾರೆ. ವಾಯು ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವುದು ತೃಪ್ತಿ ನೀಡಿದೆ. ಇದು ಕೇವಲ ಒಬ್ಬರ ಪರಿಶ್ರಮವಲ್ಲ. ಇದು ನಮ್ಮ ತಂಡದ ಪರಿಶ್ರಮ. ತಂಡದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿ ಇರುತ್ತದೆ. ಅದನ್ನು ನಾವು ಶ್ರದ್ಧೆಯಿಂದ ನಿರ್ವಹಿಸಿದೆವು ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *