ವಿಡಿಯೋ ಮಾಡ್ಕೊಂಡು ಮಾನ ಕಳೆದ್ಕೊಂಡ ಪಾಕ್ ಸೈನಿಕರು

Public TV
1 Min Read

ಇಸ್ಲಾಮಾಬಾದ್: ಸಾಮಾಜಿಕ ಜಾಲತಾಣದಲ್ಲಿ ಮಿಂಚಬೇಕೆಂಬ ಉದ್ದೇಶದಿಂದ ಕೆಲ ಪಾಕಿಸ್ತಾನ ಸೈನಿಕರು ಮಾಡಿಕೊಂಡ ವಿಡಿಯೋ ಅಸಲಿಯತ್ತು ಬಯಲಾಗಿದೆ.

ಭಾರತೀಯ ಸೇನೆಯ ಸೈನಿಕರ ಸಾಮಾಜಿಕ ಪರ ಕೆಲಸಗಳು ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ಹರಿದಾಡುತ್ತಿರುತ್ತವೆ. ವಿಶ್ವಮಟ್ಟದಲ್ಲಿಯೂ ಭಾರತದ ಸೈನಿಕರ ಬಗ್ಗೆ ಮೆಚ್ಚುಗೆಗಳು ವ್ಯಕ್ತ ಆಗುತ್ತಿರುತ್ತವೆ. ನಾವು ಸೋಶಿಯಲ್ ಮೀಡಿಯಾದಲ್ಲಿ ಮಿಂಚಬೇಕೆಂಬ ಪಾಕಿಸ್ತಾನದ ಕೆಲ ಸೈನಿಕರ ವಿಡಿಯೋ ನಗೆಪಾಟಲಿಗೆ ಗುರಿಯಾಗಿದೆ.

ಏನದು ವಿಡಿಯೋ?
ಕೆಲ ಸೈನಿಕರು ವಾಹನವನ್ನು ತಳ್ಳುತ್ತಿರುವ ವಿಡಿಯೋ ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದೀಗ ವಿಡಿಯೋ ಅಸಲಿ ಕಹಾನಿಯನ್ನು ಹೇಳುವ ದೃಶ್ಯಗಳ ಮತ್ತೊಂದು ವಿಡಿಯೋವನ್ನು ಸ್ಥಳೀಯರು ಬಿಡುಗಡೆಗೊಳಿಸಿದ್ದಾರೆ. ರಸ್ತೆಯಲ್ಲಿ ಬಂದ ವಾಹನವನ್ನು ತಡೆದ ಸೈನಿಕರು, ಚಾಲಕನನ್ನು ಹೊರ ಕರೆದಿದ್ದಾರೆ. ಚಾಲಕ ಜೊತೆಗೆ ಕೆಲ ಸೈನಿಕರು ಕೆಟ್ಟಿರುವ ವಾಹನ ತಳ್ಳುವಂತೆ ನಟಿಸುತ್ತಿದ್ರೆ, ಮತ್ತೋರ್ವ ಎಲ್ಲ ದೃಶ್ಯಗಳನ್ನು ಮತ್ತೋರ್ವ ಸೆರೆ ಹಿಡಿದಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಸಮೀಪದ ಕಟ್ಟಡದಲ್ಲಿಯ ಕೆಲವರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.

ಈ ವಿಡಿಯೋವನ್ನು ಪತ್ರಕರ್ತರೊಬನ್ಬರು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡು, ಚಾಲನೆಯಲ್ಲಿದ್ದ ವಾಹನವನ್ನು ನಿಲ್ಲಿಸಿ, ಸೈನಿಕರು ಕ್ಯಾಮೆರಾಗೆ ಪೋಸ್ ನೀಡಿದ್ದನ್ನು ತೋರಿಸಿದ್ದಾರೆ. ಈ ವಿಡಿಯೋ 46 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, 651 ಬಾರಿ ರಿಟ್ವೀಟ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *