ಕಾಣದಂತೆ ಮಾಯವಾದನು: ಪ್ರೋಮೋ ಮೂಲಕ ವಿಶಿಷ್ಟ ಪಾತ್ರಗಳ ದರ್ಶನ!

Public TV
1 Min Read

ಬೆಂಗಳೂರು: ರಾಜ್ ಪತ್ತಿಪಾಟಿ ನಿರ್ದೇಶನದ ಕಾಣದಂತೆ ಮಾಯವಾದನು ಎಂಬ ಚಿತ್ರವೀಗ ಮತ್ತೆ ಸುದ್ದಿ ಕೇಂದ್ರದಲ್ಲಿದೆ. ತನ್ನ ವಿಶಿಷ್ಟವಾದ ಟೈಟಲ್ ಮತ್ತು ಕಥೆಯ ಸುಳಿವಿನೊಂದಿಗೇ ಪ್ರೇಕ್ಷಕರ ಆಸಕ್ತಿಯನ್ನು ತನ್ನತ್ತ ಸೆಳೆದುಕೊಂಡಿತ್ತು. ಇದೀಗ ಚಿತ್ರತಂಡ ಒಂದು ಕ್ಯಾರೆಕ್ಟರ್ ಪ್ರೋಮೋವನ್ನು ಬಿಡುಗಡೆಗೊಳಿಸಿದೆ. ಈ ಮೂಲಕ ಕೊಂಚ ತಡವಾದರೂ ಕೂಡಾ ಕಾಣದಂತೆ ಮಾಯವಾದನು ಚಿತ್ರ ಮತ್ತಷ್ಟು ನಿರೀಕ್ಷೆ ಮೂಡಿಸಿಕೊಂಡಿದೆ.

ಸಿಂಧು ಲೋಕನಾಥ್ ಮತ್ತು ವಿಕಾಸ್ ಮುಖ್ಯಭೂಮಿಕೆಯಲ್ಲಿರೋ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ಸೀತಾ ಕೋಟಿ, ಭಜರಂಗಿ ಲೋಕಿ, ರಾಘವ್ ಉದಯ್, ಗೌತಮ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಎಲ್ಲ ಪಾತ್ರಗಳ ಝಲಕ್ ಪರಿಚಯ ಮಾಡಿಕೊಡುವಂತಿರುವ ಈ ಕ್ಯಾರೆಕ್ಟರ್ ಪ್ರೋಮೋಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿವೆ.

ರಾಜ್ ಪತ್ತಿಪಾಟಿ ನಿರ್ದೇಶನ ಮಾಡಿರೋ ಈ ಚಿತ್ರವನ್ನು ಸೋಮ್ ಸಿಂಗ್ ನಿರ್ಮಾಣ ಮಾಡಿದ್ದಾರೆ. ಪುಷ್ಪಾ ಸೋಮ್ ಸಿಂಗ್ ಕೂಡಾ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಈ ಚಿತ್ರದಲ್ಲಿ ಪ್ರತಿ ಪಾತ್ರಗಳೂ ಕೂಡಾ ಭಿನ್ನವಾಗಿದೆ ಎಂಬುದನ್ನೂ ಕೂಡಾ ಈ ಕ್ಯಾರೆಕ್ಟರ್ ಪ್ರೋಮೋ ಜಾಹೀರು ಮಾಡಿದೆ. ಜಯಮ್ಮನ ಮಗ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿಕಾಸ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಸಿಂಧೂ ಲೋಕನಾಥ್ ಇಲ್ಲಿ ಎನ್‍ಜಿಓನಲ್ಲಿ ಕೆಲಸ ಮಾಡುವ ಹುಡುಗಿ ವಂದನಾ ಆಗಿ ನಟಿಸಿದ್ದಾರೆ.

ಈ ಹಿಂದೆ ಮಫ್ತಿ ಚಿತ್ರದ ಪಾತ್ರದ ಮೂಲಕ ನಟರಾಗಿ ಬಹು ಬೇಡಿಕೆ ಪಡೆದುಕೊಂಡಿರೋ ಬಾಬು ಹಿರಣ್ಣಯ್ಯ ಕೂಡಾ ಕಾಣದಂತೆ ಮಾಯವಾದನು ಚಿತ್ರದಲ್ಲಿ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದಾರಂತೆ. ವಿಶೇಷವೆಂದರೆ ಈ ಚಿತ್ರ ಮಫ್ತಿಗಿಂತಲೂ ಮೊದಲೇ ಆರಂಭವಾಗಿತ್ತು. ಒಂದಷ್ಟು ಸುದೀರ್ಘ ಸಮಯ ಹಿಡಿದರೂ ಇದೀಗ ಈ ಚಿತ್ರ ಅಚ್ಚುಕಟ್ಟಾಗಿಯೇ ತಯಾರಾಗಿ ಬಿಡುಗಡೆಗೆ ರೆಡಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *