– ಇಟ್ಟಿಗೆಯಿಂದ ತಲೆಯನ್ನ ಚಚ್ಚಿ ಕೊಲೆ
– ಬೆತ್ತಲೆಯಾಗಿ ಬಾಲಕಿ ಮೃತದೇಹ ಪತ್ತೆ
ಲಕ್ನೋ: ತೆಲಂಗಾಣದಲ್ಲಿ 9 ತಿಂಗಳ ಮಗುವಿನ ಮೇಲೆ ರೇಪ್ ಮಾಡಲು ಯತ್ನಿಸಿ ಬಟ್ಟೆ ತೂರಿ ಕೊಲೆ ಮಾಡಿದ ಘಟನೆ ಮುನ್ನವೇ ಇಂತಹದ್ದೇ ಪೈಶಾಚಿಕ ಘಟನೆ ಲಕ್ನೋದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ 11 ವರ್ಷದ ಬಾಲಕಿಯ ಮೇಲೆ ರೇಪ್ ಮಾಡಲು ಯತ್ನಿಸಿ ಕೊಲೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಘಟನೆಯ ಬಗ್ಗೆ ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‍ಗಳ ಅಡಿ ದೂರು ದಾಖಲಾಗಿದೆ.
ರಾತ್ರಿ ವೇಳೆ ಪೋಕರ ಜೊತೆ ಮಲಗಿದ್ದ ಬಾಲಕಿ ಕಾಣೆಯಾಗಿದ್ದು, ಆದರೆ ಶೌಚಾಲಯಕ್ಕೆ ಹೋಗಿರಬಹುದೆಂದು ಕೆಲ ಸಮಯ ನೋಡುತ್ತಾರೆ. ಎಷ್ಟೇ ಸಮಯವಾದರು ಮಗಳು ಬಾರದೆ ಇರುವುದನ್ನು ಕಂಡು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯ ಸಮೀಪವೇ ಇದ್ದ ತೋಟದಲ್ಲಿ ಬಾಲಕಿಯ ಮೃತ ದೇಹ ಪತ್ತೆಯಾಗಿದ್ದು, ಬಾಲಕಿಯ ತಲೆಯನ್ನು ಇಟ್ಟಿಗೆಯಿಂದ ಜಜ್ಜಿ ಕೊಲೆ ಮಾಡಲಾಗಿತ್ತು.
ಬಾಲಕಿಯ ಮೃತ ದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಬಾಲಕಿಯ ಕುತ್ತಿಗೆ ಹಾಗೂ ಖಾಸಗಿ ಅಂಗಾಂಗಳ ಮೇಲೆ ಗಾಯವಾಗಿತ್ತು ಎಂದಿದ್ದಾರೆ.
ಘಟನೆಯ ಸಂಬಂಧ ಉನ್ನಾವ್ ಎಸ್‍ಪಿ ಎಂಪಿ ವರ್ಮಾ ಪ್ರತಿಕ್ರಿಯೆ ನೀಡಿದ್ದು, ಘಟನೆ ಕುರಿತು ತನಿಖೆ ನಡೆಸಲು ತಂಡವನ್ನು ರಚನೆ ಮಾಡಲಾಗಿದೆ. ಬಾಲಕಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಯ ಬಳಿಕ ಬಾಲಕಿಯ ಸಾವಿನ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]