ನೆಲಕ್ಕೆ ಬಡಿದು, ತೋಳನ್ನು ಮುರಿದು ತಂದೆಯಿಂದಲೇ ಮೂರೂವರೆ ತಿಂಗಳ ಹೆಣ್ಣು ಮಗು ಹತ್ಯೆ

Public TV
1 Min Read

ಕೊಲ್ಕತ್ತಾ: ಹೆಣ್ಣುಮಗು ಎನ್ನುವ ಒಂದೇ ಕಾರಣಕ್ಕೆ ಮೂರೂವರೆ ತಿಂಗಳ ಎಳೆಯ ಮಗುವನ್ನು ತಂದೆಯೇ ಕೊಂದಿರುವ ಆಘಾತಕಾರಿ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

ಮಗುವನ್ನು ನೆಲಕ್ಕೆ ಬಡಿದು, ತೋಳನ್ನು ಮುರಿದು ಮುಖವನ್ನು ವಿರೂಪಗೊಳಿಸಿ ಕ್ರೂರವಾಗಿ ಕೊಂದಿದ್ದಾನೆ ಎಂದು ಪೋಲೀಸರು ಹೇಳಿದ್ದಾರೆ

ಈ ಘಟನೆ ಬುಧವಾರ ನಡೆದಿದ್ದು, ಕೊಲ್ಕತ್ತಾದ ಕೋಲ್‍ಬರ್ತ್ ರಸ್ತೆಯ ನಿವಾಸಿಯಾದ ಸೈಕ್ ರಾಜು (25) ಕೃತ್ಯ ಎಸಗಿದ ಪಾಪಿ ತಂದೆ. ಆರೋಪಿ ಪತ್ನಿ ಅಫ್ಸಾರಿ ಬೇಗಂ ಈ ಸಂಬಂಧ ಪೋಲೀಸರಿಗೆ ದೂರನ್ನು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು ಸೈಕ್ ರಾಜುವನ್ನು ಬಂಧಿಸಲಾಗಿದೆ.

ತನ್ನ ಹೆಂಡತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕಾಗಿ ರಾಜು ಅಸಮಾಧಾನಗೊಂಡಿದ್ದ. ಅಲ್ಲದೆ ಈ ಕಾರಣಕ್ಕಾಗಿ ಆರೋಪಿ ತನ್ನ ಪತ್ನಿಯೊಡನೆ ಜಗಳವಾಡಿದ್ದಾನೆ. ದೂರಿನ ಪ್ರಕಾರ,  ರಾಜು ಹೆಣ್ಣು ಮಗುವನ್ನು ಹಲವು ಬಾರಿ ನೆಲಕ್ಕೆ ಎಸೆದಿದ್ದು ಮಾತ್ರವಲ್ಲದೆ ಕೈಗಳನ್ನು ತಿರುಚಿ ಮುಖಕ್ಕೆ ಗಾಯ ಮಾಡಿದ್ದಾನೆ. ಈ ವೇಳೆ ಅಲ್ಲೇ ಇದ್ದ ಪತ್ನಿ ಬೇಗಂ ವಿರೋಧ ವ್ಯಕ್ತಪಡಿಸಿದ್ದರೂ ಆರೋಪಿ ಮಗುವನ್ನು ಕೊಂದಿದ್ದಾನೆ.

ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *