ಮಡಿಕೇರಿ: ಕಳೆದ ವರ್ಷ ಉಂಟಾದ ಜಲಪ್ರವಾಹದ ಛಾಯೆ ಇನ್ನೂ ಕೊಡಗಿನ ಜನರ ಮನಸ್ಸಿಂದ ಮಾಯವಾಗಿಲ್ಲ.. ಅದಾಗಲೇ ಮತ್ತೊಂದು ಮಳೆಗಾಲ ಬಂದಿದೆ. ಈ ಬಾರಿ ವರುಣದೇವ ಅದೇನು ಅನಾಹುತ ಮಾಡುತ್ತಾನೋ ಗೊತ್ತಿಲ್ಲ. ಆದರೆ ಜಿಲ್ಲಾಡಳಿತ ಮಾತ್ರ ಮುನ್ನೆಚ್ಚರಿಕಾ ಕ್ರಮವಾಗಿ ಡೇಂಜರಸ್ ಸ್ಪಾಟ್‍ಗಳನ್ನು ಗುರುತಿಸಿದೆ.
ಕಳೆದ ವರ್ಷದ ಮಳೆಗಾಲದಲ್ಲಿ ಕೊಡಗಿನ ಜನ ಅಕ್ಷರಶಃ ತತ್ತರಿಸಿ ಹೋಗಿದ್ದರು. ಭೂ ಕುಸಿತಕ್ಕೆ ಸಿಲುಕಿದ್ದ ಜನರು ದಿಕ್ಕಾಪಾಲಾಗಿ ಹೋಗಿದ್ದರು. ಆ ಸಂತ್ರಸ್ತರೆಲ್ಲ ಈಗ ಸಿಕ್ಕ ಸಿಕ್ಕ ಕಡೆ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಆ ಕರಾಳ ಛಾಯೆ ಇನ್ನೂ ಮಾಸೇ ಇಲ್ಲ ಅದಾಗಲೇ ಮತ್ತೊಂದು ಮಳೆಗಾಲ ಬಂದಿದೆ. ಆದರೆ ಈ ಸಲ ಜಿಲ್ಲೆಯಲ್ಲಿ ಮಳೆ ಹೆಚ್ಚಾದರೆ ಕೆಲವೊಂದು ಸೂಕ್ಷ್ಮ ಪ್ರದೇಶಗಳು ನೆಲಕಚ್ಚಲಿವೆ. ಹಾಗಾಗಿ ಜಿಲ್ಲಾಡಳಿತ 13 ಸೂಕ್ಮ ಪ್ರದೇಶಗಳನ್ನು ಡೇಂಜರಸ್ ಸ್ಪಾಟ್ ಎಂದು ಗುರುತಿಸಿದ್ದು, ಜನ ಶಾಕ್ ಆಗಿದ್ದಾರೆ.
ಡೇಂಜರಸ್ ಸ್ಪಾಟ್‍ಗಳು:
1. ಮದೆ (ಜೋಡುಪಾಲ)
2. 2ನೇ ಮೊಣ್ಣಂಗೇರಿ, ಮಡಿಕೇರಿ ತಾಲೂಕು
3. ಹೆಬ್ಬೆಟ್ಟಗೇರಿ, ಮಡಿಕೇರಿ ತಾಲೂಕು
4. ತಂತಿಪಾಲ, ಮಡಿಕೇರಿ ತಾಲೂಕು
5. ಮುಕ್ಕೋಡ್ಲು, ಮಡಿಕೇರಿ ತಾಲೂಕು
6. ಮೇಘತ್ತಾಳು, ಮಡಿಕೇರಿ ತಾಲೂಕು
7. ಮಕ್ಕಂದೂರು, ಮಡಿಕೇರಿ ತಾಲೂಕು
8. ನಿಡುವಟ್ಟು, ಸೋಮವಾರಪೇಟೆ ತಾಲೂಕು
9. ಬಾರಿಬೆಳ್ಳಚ್ಚು, ಸೋಮವಾರಪೇಟೆ ತಾಲೂಕು
10. ದೇವಸ್ತೂರು, ಮಡಿಕೇರಿ ತಾಲೂಕು
11. ಬಾಡಿಗೇರಿ, ಮಡಿಕೇರಿ ತಾಲೂಕು
12. ಉದಯಗಿರಿ, ಮಡಿಕೇರಿ ತಾಲೂಕು
13. ಕಾಟಕೇರಿ, ಮಡಿಕೇರಿ ತಾಲೂಕು
ಇದೇ 20 ರಂದು ಮುಂಗಾರು ಎಂಟ್ರಿಯಾಗುತ್ತಿದ್ದು, ಈ ಡೇಂಜರಸ್ ಸ್ಪಾಟ್‍ನಲ್ಲಿರೋ ಜನರ ಸ್ಥಳಾಂತರಕ್ಕೆ ಕೊಡಗು ಜಿಲ್ಲಾಡಳಿತ ಮುಂದಾಗಿರೋದು ಜನರ ಆತಂಕಕ್ಕೆ ಕಾರಣವಾಗಿದೆ. ಸದ್ಯ ಡೇಂಜರಸ್ ಸ್ಥಳದಲ್ಲಿರುವ ಜನ ತಾವು ಎಲ್ಲಿಗೆ ಶಿಫ್ಟ್ ಆಗ್ಬೇಕು, ಮನೆ ಮಠ ಬಿಟ್ಟು ಎಲ್ಲಿ ಬಾಡಿಗೆ ಮನೆ ಹುಡ್ಕೋದು, ಮನೆ ಬಾಡಿಗೆ ನಿಜವಾಗಲೂ ನಮಗೆ ಸಿಗುತ್ತಾ ಎಂಬ ಆತಂಕದಲ್ಲಿದ್ದಾರೆ.
ಒಟ್ಟಿನಲ್ಲಿ ಕಳೆದ ಬಾರಿಯ ಮಳೆ ಕೊಡಗಲ್ಲಿ ಅವಾಂತರ ಸೃಷ್ಟಿ ಮಾಡಿ ವರ್ಷ ಕಳೆದರೂ ಅಲ್ಲಿನವರ ಬದುಕು ಇನ್ನೂ ಹಸನಾಗಿಲ್ಲ. ಹೀಗಿರುವಾಗಲೇ ಡೇಂಜರಸ್ ಸ್ಪಾಟ್ ಗುರುತಿಸಲಾಗಿದ್ದು, ಇಲ್ಲಿನ ಜನರನ್ನು ಶಿಫ್ಟ್ ಮಾಡೋಕೆ ಜಿಲ್ಲಾಡಳಿತ ಮುಂದಾಗಿರೋದು ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.