ಪ್ರೇಯಸಿ ಜೊತೆ ವೀಲ್ಹಿಂಗ್ ಮಾಡಿದ್ದ ಯುವಕನ ಬಂಧನ

Public TV
1 Min Read

ಬೆಂಗಳೂರು: ಪ್ರೇಯಸಿ ಜೊತೆ ವೀಲ್ಹಿಂಗ್ ಮಾಡಿದ್ದ ಯುವಕನನ್ನು ಹೆಬ್ಬಾಳ ಟ್ರಾಫಿಕ್ ಪೊಲೀಸರು ಬಂಧಿಸಿದ್ದಾರೆ.

ನೂರ್ ಅಹಮ್ಮದ್(21) ಬಂಧನಕ್ಕೊಳಗಾದ ಯುವಕ. ನೂರ್ ಅಹಮ್ಮದ್ ಯಲಹಂಕದ ಸರ್ಕಾರಿ ಕಾಲೇಜಿನಲ್ಲಿ ಬಿ.ಕಾಂ ಪದವಿ ಪೂರ್ಣಗೊಳಿಸಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದನು. ಇತ್ತೀಚೆಗೆ ನೂರ್ ತನ್ನ ಸ್ನೇಹಿತ ಇಮ್ರಾನ್ ಬಳಿ ಸ್ಕೂಟಿ ಪಡೆದು ಕಳೆದ ಗುರುವಾರ ಅಂದರೆ ಜೂನ್ 6ರಂದು ತನ್ನ ಪ್ರೇಯಸಿ ಜೊತೆ ನಂದಿಬೆಟ್ಟಕ್ಕೆ ತೆರಳಿದ್ದನು.

ಈ ವೇಳೆ ನೂರ್ ಅಹಮ್ಮದ್ ದೇವನಹಳ್ಳಿ ಮುಖ್ಯ ರಸ್ತೆಯಲ್ಲಿ ವೀಲ್ಹಿಂಗ್ ಮಾಡಿದ್ದಾನೆ. ಇವರಿಬ್ಬರು ವೀಲ್ಹಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು. ಈ ವೈರಲ್ ವಿಡಿಯೋ ನೋಡಿದ ಹೆಬ್ಬಾಳ ಪೊಲೀಸರು ಯುವಕನನ್ನು ಬಂಧಿಸಿ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.

ಹೆಬ್ಬಾಳ ಸಂಚಾರ ಪೊಲೀಸರು ಭಾನುವಾರ ಕಾರ್ಯಚರಣೆ ನಡೆಸುತ್ತಿದ್ದಾಗ ಅಹ್ಮದ್ ಸ್ನೇಹಿತ ಇಮ್ರಾನ್ ಪೊಲೀಸರನ್ನು ಕಂಡು ಪರಾರಿಯಾಗಿದ್ದನು. ಈ ವೇಳೆ ಪೊಲೀಸರು ಆತನ ಸ್ಕೂಟಿ ನಂಬರ್ ಬರೆದುಕೊಂಡು ತನಿಖೆ ನಡೆಸಿದ್ದಾಗ ಸ್ಕೂಟಿ ಇಮ್ರಾನ್ ಅವರ ತಾಯಿಯ ಹೆಸರಿನಲ್ಲಿ ಇತ್ತು.

ವೈರಲ್ ಆಗಿರುವ ವಿಡಿಯೋದಲ್ಲಿ ಹಾಗೂ ಇಮ್ರಾನ್ ಅವರ ತಾಯಿಯ ಸ್ಕೂಟಿ ಒಂದೇ ರೀತಿ ಕಂಡ ಬಂತು. ಆಗ ಪೊಲೀಸರು ಇಮ್ರಾನ್‍ನನ್ನು ವಿಚಾರಣೆ ನಡೆಸಿದರು. ಆಗ ಇಮ್ರಾನ್ ಸತ್ಯವನ್ನು ಪೊಲೀಸರ ಮುಂದೆ ಹೇಳಿದ್ದಾನೆ. ಬಳಿಕ ಪೊಲೀಸರು ನೂರ್ ಅಹಮ್ಮದ್‍ನನ್ನು ಬಂಧಿಸಿ ಸ್ಕೂಟಿಯನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಏನಿದು ಪ್ರಕರಣ?
ನೂರ್ ಅಹಮ್ಮದ್ ಸ್ಕೂಟಿ ಹಿಂದೆ ತನ್ನ ಪ್ರೇಯಸಿಯನ್ನು ಕೂರಿಸಿಕೊಂಡು ದೇವನಹಳ್ಳಿ ರಸ್ತೆಯಲ್ಲಿ ವೀಲ್ಹಿಂಗ್ ಮಾಡಿದ್ದನು. ಇದನ್ನು ಹಿಂದೆ ಬರುತಿದ್ದವರು ವಿಡಿಯೋ ಮಾಡಿದ್ದರು. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣ `ಹಲೋ’ ಆ್ಯಪ್‍ನಲ್ಲಿ ಈ ವಿಡಿಯೋವನ್ನು ಯುವತಿಯೊಬ್ಬಳು ಪೋಸ್ಟ್ ಮಾಡಿದ್ದಳು. ಸೋನು ಎಂಬ ಅಕೌಂಟ್‍ನಿಂದ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಲ್ಹಿಂಗ್ ದೃಶ್ಯ ವೈರಲ್ ಆಗಿತ್ತು.

https://www.youtube.com/watch?v=6DX7fyJxZt8

Share This Article
Leave a Comment

Leave a Reply

Your email address will not be published. Required fields are marked *