ಬೆಂಗ್ಳೂರಿನಲ್ಲಿ ಲವರ್ಸ್ ಡೇಂಜರಸ್ ವೀಲ್ಹಿಂಗ್- ವಿಡಿಯೋ ವೈರಲ್

Public TV
1 Min Read

ಬೆಂಗಳೂರು: ಲವರ್ ಬೈಕ್‍ನಲ್ಲಿ ತಬ್ಬಿಕೊಂಡು ಜಾಲಿ ರೈಡ್ ಮಾಡೋದು ಕಾಮನ್. ಆದ್ರೆ ಬೆಂಗಳೂರು ಹೊರವಲಯದಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಸ್ಕೂಟಿ ಹಿಂದೆ ಕೂರಿಸಿಕೊಂಡು ಅಪಾಯಕಾರಿ ವಿಲ್ಹಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹೌದು. ಏನೋ ಸಿನಿಮಾಗಳಲ್ಲಿ ತೋರಿಸುವ ಹಾಗೇ ಬೈಕ್‍ನಲ್ಲಿ ಸ್ಟಂಟ್ಸ್ ಗಳನ್ನು ಮಾಡಲು ಹೋಗಿ ಆಸ್ಪತ್ರೆ ಸೇರಿದವರ ಸಂಖ್ಯೆಯೇ ಹೆಚ್ಚು. ಅಲ್ಲದೆ ವಿಲ್ಹಿಂಗ್, ಸ್ಟಂಟ್ಸ್ ಗಳನ್ನು ಮಾಡಿ ಬಹಳಷ್ಟು ಮಂದಿ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಈ ವಿಲ್ಹಿಂಗ್, ಸ್ಟಂಟ್ಸ್ ಗಳನ್ನು ರೋಡ್‍ಗಳಲ್ಲಿ ಮಾಡಬೇಡಿ ಎಂದು ಎಷ್ಟು ಸಾರಿ ಸಂಚಾರಿ ಪೊಲೀಸರು ಹೇಳಿದರೂ ಯುವಕರು ಕ್ಯಾರೆ ಅಂತಿಲ್ಲ. ಇದಕ್ಕೆ ದೇವನಹಳ್ಳಿ ರಸ್ತೆಯಲ್ಲಿ ವಿಲ್ಹಿಂಗ್ ಮಾಡಿದ್ದ ಲವರ್ಸ್ ವಿಡಿಯೋ ತಾಜಾ ಉದಾಹರಣೆಯಾಗಿದೆ.

ಓರ್ವ ಯುವಕ ಸ್ಕೂಟಿ ಹಿಂದೆ ಪ್ರೇಯಸಿಯನ್ನು ಕೂರಿಸಿಕೊಂಡು ದೇವನಹಳ್ಳಿ ರಸ್ತೆಯಲ್ಲಿ ವಿಲ್ಹಿಂಗ್ ಮಾಡಿದ್ದಾನೆ. ಇದನ್ನು ಹಿಂದೆ ಬರುತಿದ್ದವರು ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣ ‘ಹಲೋ’ ಆ್ಯಪ್‍ನಲ್ಲಿ ಈ ವಿಡಿಯೋವನ್ನು ಯುವತಿಯೊಬ್ಬಳು ಪೋಸ್ಟ್ ಮಾಡಿದ್ದಾಳೆ. ಸೋನು ಎಂಬ ಅಕೌಂಟ್‍ನಿಂದ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಲ್ಹಿಂಗ್ ದೃಶ್ಯ ವೈರಲ್ ಆಗುತ್ತಿದೆ.

ಟ್ರಾಫಿಕ್ ಪೊಲೀಸರು ಎಷ್ಟೇ ಈ ರೀತಿ ಅಪಾಯಕಾರಿ ವಿಲ್ಹಿಂಗ್‍ಗಳನ್ನ ಮಾಡಬೇಡಿ, ಅದು ನಿಮ್ಮ ಜೀವಕ್ಕೆ ಕುತ್ತು ಎಂದು ಜಾಗೃತಿ ಮೂಡಿಸಿದರು ಪುಂಡರು ಮಾತ್ರ ನಮ್ಮ ಬೈಕ್, ನಮ್ಮ ಜೀವ ನಿಮಗೇನು ಎಂದು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡುತ್ತಲೇ ಇದ್ದಾರೆ.

https://www.youtube.com/watch?v=6DX7fyJxZt8

Share This Article
Leave a Comment

Leave a Reply

Your email address will not be published. Required fields are marked *