ನಡುರಸ್ತೆಯಲ್ಲೇ ಖಾರದ ಪುಡಿ ಎರಚಿ ಸೊಸೆಯಿಂದ ಮಾವನ ಮೇಲೆ ಹಲ್ಲೆ

Public TV
1 Min Read

ಹೈದರಾಬಾದ್: ಆಸ್ತಿಗಾಗಿ ತನ್ನ ಪತಿಯ ಜೊತೆ ಸೇರಿ ಮಾವನ ಮೇಲೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ ಘಟನೆ ಮಂಗಳವಾರ ಆಂಧ್ರ ಪ್ರದೇಶದ ತಿರುಪತಿಯಲ್ಲಿ ನಡೆದಿದೆ.

ಆಸ್ತಿ ವಿಚಾರಕ್ಕಾಗಿ ಮಗ ನಡುರಸ್ತೆಯಲ್ಲೇ ತನ್ನ ತಂದೆಯ ಮೇಲೆ ಕಬಿಣ್ಣದಿಂದ ಹೊಡೆದು ಹಲ್ಲೆ ಮಾಡುತ್ತಿದ್ದನು. ಈ ವೇಳೆ ಮಹಿಳೆ ಮನೆಯಲ್ಲಿದ್ದ ಖಾರದ ಪುಡಿಯನ್ನು ಮಾವನ ಮೇಲೆ ಎರಚಿ ಹಲ್ಲೆ ಮಾಡಿದ್ದಾಳೆ.

ಪತಿಯ ಜೊತೆ ಸೇರಿ ಆಕೆ ಕೂಡ ತನ್ನ ಮಾವನ ಮೇಲೆ ಹಲ್ಲೆ ಮಾಡಿದ್ದಾಳೆ. ಮಹಿಳೆಯ ಸಹೋದರ ಕೂಡ ವೃದ್ಧನ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧನನ್ನು ತಿರುಪತಿಯಲ್ಲಿ ಇರುವ ರೂಯಿಯಾ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು.

ಸದ್ಯ ವೃದ್ಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ವೃದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಪತಿ- ಪತ್ನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *