ಇಂದು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ- ಲೋಕಲ್ ಫೈಟಲ್ಲೂ ಮಂಡ್ಯದ್ದೇ ಕುತೂಹಲ

Public TV
2 Min Read

ಬೆಂಗಳೂರು: ಲೋಕಸಭೆ ಫಲಿತಾಂಶದ ಬೆನ್ನಲ್ಲೇ ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ.

8 ನಗರಸಭೆ, 33 ಪುರಸಭೆ ಹಾಗೂ 22 ಪಟ್ಟಣ ಪಂಚಾಯ್ತಿಗಳ 1,296 ವಾರ್ಡ್ ಗಳಲ್ಲಿ 4,360 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಲೋಕಸಭೆಯಲ್ಲಿ ಮೈತ್ರಿ ಮಾಡಿಕೊಂಡು ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್-ಜೆಡಿಎಸ್ ಈ ಬಾರಿ ಪ್ರತ್ಯೇಕವಾಗಿ ಸ್ಪರ್ಧಿಸಿವೆ. ಹೀಗಾಗಿ ಈ ಚುನಾವಣೆಯಲ್ಲಿ ಮೋದಿ ಹವಾ ವರ್ಕೌಟ್ ಆಗುತ್ತಾ ಅಥವಾ ಕಾಂಗ್ರೆಸ್-ಜೆಡಿಎಸ್ ಮೇಲುಗೈ ಸಾಧಿಸುತ್ತಾವಾ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

ಮತದಾನ ನಡೆದ ಸ್ಥಳೀಯ ಸಂಸ್ಥೆಗಳು:
8 ನಗರಸಭೆ, 33 ಪುರಸಭೆ, 22 ಪಟ್ಟಣ ಪಂಚಾಯ್ತಿ ಹೀಗೆ ಒಟ್ಟು 63 ಸಂಸ್ಥೆಗಳಿಗೆ ಚುನಾವಣೆ ನಡೆದಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ನಗರಸಭೆಗಳು ಯಾವುವು?
ಚಿತ್ರದುರ್ಗ – ಹಿರಿಯೂರು
ದಾವಣಗೆರೆ – ಹರಿಹರ
ಚಿಕ್ಕಬಳ್ಳಾಪುರ – ಶಿಡ್ಲಘಟ್ಟ
ಶಿವಮೊಗ್ಗ – ಸಾಗರ
ತುಮಕೂರು – ತಿಪಟೂರು
ಮೈಸೂರು – ನಂಜನಗೂಡು
ಬೀದರ್ – ಬಸವಕಲ್ಯಾಣ
ಯಾದಗಿರಿ – ಶಹಾಪುರ

ಪುರಸಭೆಗಳು ಯಾವುವು?:
> ಬೆಂಗಳೂರು ನಗರ (1)- ಆನೇಕಲ್
> ಬೆಂಗಳೂರು ಗ್ರಾಮಾಂತರ (2)-ದೇವನಹಳ್ಳಿ, ನೆಲಮಂಗಲ
> ತುಮಕೂರು – 2- ಕುಣಿಗಲ್, ಪಾವಗಡ
> ಉತ್ತರ ಕನ್ನಡ (1)- ಭಟ್ಕಳ
> ಮಂಡ್ಯ (3)- ಕೆಆರ್ ಪೇಟೆ, ಶ್ರೀರಂಗಪಟ್ಟಣ, ಮಳವಳ್ಳಿ
> ವಿಜಯಪುರ (3)- ಇಂಡಿ, ತಾಳಿಕೋಟೆ, ಬಸವನಬಾಗೇವಾಡಿ
> ಧಾರವಾಡ (1)- ನವಲಗುಂದ
> ಹಾವೇರಿ (2)- ಬ್ಯಾಡಗಿ, ಶಿಗ್ಗಾಂವ್
> ಬೀದರ್ (3)- ಭಾಲ್ಕಿ, ಹುಮ್ನಾಬಾದ್, ಚಿಟಗುಪ್ಪ
> ಶಿವಮೊಗ್ಗ (1)- ಶಿಕಾರಿಪುರ
> ಚಿಕ್ಕಮಗಳೂರು (1)- ಕಡೂರು

> ಕೋಲಾರ (3)- ಬಂಗಾರಪೇಟೆ, ಶ್ರೀನಿವಾಸಪುರ, ಮಾಲೂರು
> ಚಿಕ್ಕಬಳ್ಳಾಪುರ (1)- ಬಾಗೇಪಲ್ಲಿ
> ಚಾಮರಾಜನಗರ (1)- ಗುಂಡ್ಲಪೇಟೆ
> ಮೈಸೂರು (2)- ಕೆ.ಆರ್.ನಗರ, ಬನ್ನೂರು
> ಬಳ್ಳಾರಿ (3)- ಸಂಡೂರು, ಹೂವಿನಹಡಗಲಿ, ಹರಪನಹಳ್ಳಿ
> ಗದಗ (1)- ನರಗುಂದ, ಮುಂಡರಗಿ
> ದಕ್ಷಿಣ ಕನ್ನಡ (1)- ಮೂಡಬಿದಿರೆ

ಪಟ್ಟಣ ಪಂಚಾಯ್ತಿಗಳು:
> ತುಮಕೂರು (1)- ತುರುವೇಕೆರೆ
> ಉತ್ತರ ಕನ್ನಡ (2)- ಹೊನ್ನಾವರ, ಸಿದ್ದಾಪುರ
> ಹಾಸನ (2)- ಅರಕಲಗೂಡು, ಆಲೂರು
> ಧಾರವಾಡ (2)- ಅಳ್ನಾವರ, ಕಲಘಟಗಿ
> ಚಿತ್ರದುರ್ಗ (2)- ಮೊಳಕಾಲ್ಮೂರು, ಹೊಳಲ್ಕೆರೆ
> ಬೀದರ್ (1)- ಔರಾದ್
> ಶಿವಮೊಗ್ಗ (3)- ಶಿರಾಳಕೊಪ್ಪ, ಸೊರಬ, ಹೊಸನಗರ
> ಚಿಕ್ಕಮಗಳೂರು (4)- ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ
> ಚಾಮರಾಜನಗರ (2)- ಹನೂರು, ಯಳಂದೂರು
> ಬಳ್ಳಾರಿ (1)- ಕಮಲಾಪುರ
> ದಕ್ಷಿಣ ಕನ್ನಡ (2)- ಮೂಲ್ಕಿ, ಸುಳ್ಯ

ಲೋಕಸಭೆಯಂತೆ ಲೋಕಲ್ ಫೈಟ್‍ನಲ್ಲೂ ಮಂಡ್ಯ ಜಿಲ್ಲೆಯೇ ಸೆಂಟರ್ ಅಟ್ರ್ಯಾಕ್ಷನ್ ಆಗಿದೆ. ಇಲ್ಲಿನ ಶ್ರೀರಂಗಪಟ್ಟಣ, ಕೆಆರ್ ಪೇಟೆ, ಮಳವಳ್ಳಿ ಪುರಸಭೆಗಳಿಗೆ ಚುನಾವಣೆ ನಡೆದಿದೆ. ಮಳವಳ್ಳಿ ಕ್ಷೇತ್ರದ ನರೇಂದ್ರಸ್ವಾಮಿ, ಶ್ರೀರಂಗಪಟ್ಟಣ ಕ್ಷೇತ್ರದ ರಮೇಶ್ ಬಾಬು, ಕೆಆರ್ ಪೇಟೆ ಕ್ಷೇತ್ರದ ಕೆಬಿ.ಚಂದ್ರಶೇಖರ್ ಲೋಕಸಭೆ ಚುನಾವಣೆಯಲ್ಲಿ ಪರೋಕ್ಷವಾಗಿ ಸುಮಲತಾಗೆ ಬೆಂಬಲ ನೀಡಿ ಗೆಲ್ಲಿಸಿದ್ರು. ಈ ಮೂಲಕ ಜೆಡಿಎಸ್ ವಿರುದ್ಧ ವಿಧಾನಸಭೆ ಚುನಾವಣೆಯ ಸೋಲಿನ ಸೇಡು ತೀರಿಸಿಕೊಂಡಿದ್ರು. ಹೀಗಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಡಲು ಜೆಡಿಎಸ್ ನಾಯಕರು ಹಗಲಿರುಳು ಪ್ರಚಾರ ಮಾಡಿದ್ರು. ಹೀಗಾಗಿ ಈ ಮೂರು ಪುರಸಭೆಗಳಲ್ಲಿ ಯಾರು ಗೆಲ್ತಾರೆ ಅನ್ನೋದು ಕುತೂಹಲ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *