ಬೈಕ್ ಸವಾರನ ಕಿವಿ ಕತ್ತರಿಸಿದ ದರೋಡೆಕೋರರು!

Public TV
1 Min Read

ಬೆಂಗಳೂರು: ದರೋಡೆಕೋರರು ಬೈಕ್ ಸವಾರ ಕಿವಿ ಕತ್ತರಿಸಿದ ಘಟನೆ ಬೆಂಗಳೂರಿನ ಹಲಸೂರು ಬಳಿಯ ಜೋಗುಪಾಳ್ಯದಲ್ಲಿ ನಡೆದಿದೆ.

ವಿನೋದ್ ಕುಮಾರ್ ಎಂಬ ಯುವಕ ತಡರಾತ್ರಿ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ರಾಬರ್ಸ್ ಗ್ಯಾಂಗ್ ವಿನೋದ್ ಅವರನ್ನು ರಸ್ತೆಯಲ್ಲಿ ಅಡ್ಡಗಟ್ಟಿದೆ. ಬಳಿಕ ವಿನೋದ್ ಬಳಿಯಿದ್ದ ಚಿನ್ನದ ಚೈನ್, ಉಂಗುರ ಕಿತ್ತುಕೊಂಡು, ಮೊಬೈಲ್ ಕೊಡುವಂತೆ ಒತ್ತಾಯ ಮಾಡಿದೆ.

ಈ ವೇಳೆ ವಿನೋದ್ ಮೊಬೈಲ್ ಕೊಡಲು ನಿರಾಕರಿಸಿದರು. ಇದರಿಂದ ಸಿಟ್ಟಿಗೆದ್ದ ದರೋಡೆಕೋರರು ಮುಖ ಹಾಗೂ ಕಿವಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ಘಟನೆಯಿಂದ ಕಿವಿ ಕಟ್ ಆಗಿ ಗಂಭೀರ ಗಾಯಗೊಂಡಿರುವ ವಿನೋದ್‍ಗೆ ಕಿವಿ ಕೇಳಿಸದ ಹಾಗೇ ಆಗಿದೆ.

ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *