ಕರ್ನಾಟಕದಲ್ಲಿ 68.52% ಮತದಾನ – ಫೈನಲ್ ಶೇಕಡಾವಾರು ಮತದಾನ ಎಷ್ಟು?

Public TV
1 Min Read

ಬೆಂಗಳೂರು: ಭವಿಷ್ಯದ ಬಲಿಷ್ಠ ಭಾರತಕ್ಕಾಗಿ ಕರ್ನಾಟಕದ ಮೊದಲ ಹಂತದಲ್ಲಿ ದಕ್ಷಿಣಾರ್ಧ ಭಾಗದ 14 ಕ್ಷೇತ್ರಗಳಲ್ಲಿ ನಡೆದ ಚುನಾವಣೆ ಮುಗಿದಿದೆ. ಕಾಂಗ್ರೆಸ್-ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳ ಭವಿಷ್ಯ ಈಗ ಇವಿಎಂ-ವಿವಿಪ್ಯಾಟ್‍ಗಳಲ್ಲಿ ಭದ್ರವಾಗಿದ್ದು, ಸ್ಟ್ರಾಂಗ್‍ರೂಂ ಸೇರಿವೆ.

ಇದೇ 23ಕ್ಕೆ ಉತ್ತರ ಕರ್ನಾಟಕದ 14 ಕ್ಷೇತ್ರಗಳ ಚುನಾವಣೆ ನಡೆದು, ಮೇ 19ರವೆರೆಗೆ ದೇಶಾದ್ಯಂತ ಏಳೂ ಹಂತಗಳ ಚುನಾವಣೆ ಮುಗಿದ ಬಳಿಕ ಮೇ 23ರಂದು ಕರ್ನಾಟಕದ 28 ಲೋಕಸಭೆ, ಕುಂದಗೋಳ-ಚಿಂಚೋಳಿ ವಿಧಾನಸಭೆ ಉಪಚುನಾವಣೆಯ ಫಲಿತಾಂಶ ಸೇರಿದಂತೆ 543 ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ.

ಮೊದಲ ಹಂತದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಟ್ಟು 68.52% ಮತದಾನ ನಡೆದಿದೆ. ಮಂಡ್ಯದಲ್ಲಿ ಅತಿ ಹೆಚ್ಚು 80.23% ದಾಖಲಾದರೆ ಬೆಂಗಳೂರು ದಕ್ಷಿಣದಲ್ಲಿ 53.47% ರಷ್ಟು ಅತಿ ಕಡಿಮೆ ಮತದಾನ ನಡೆದಿದೆ.

 

Share This Article
Leave a Comment

Leave a Reply

Your email address will not be published. Required fields are marked *