ಅಂತರರಾಷ್ಟ್ರೀಯ ಮಟ್ಟದಲ್ಲಿ ಅರುಣ್ ಸಾಗರ್ ಪುತ್ರನ ಸಾಧನೆ

Public TV
1 Min Read

ಬೆಂಗಳೂರು: ಸಾಮಾನ್ಯವಾಗಿ ನಟರ ಮಕ್ಕಳು ತಂದೆಯಂತೆಯೇ ಸಿನಿಮಾ ಕ್ಷೇತ್ರದ ಮೇಲೆ ಹೆಚ್ಚಿನ ಆಶಕ್ತಿ ಹೊಂದಿರುತ್ತಾರೆ. ಆದರೆ ನಟ ಅರುಣ್ ಸಾಗರ್ ಪುತ್ರ ಸಿನಿಮಾ ಬಿಟ್ಟು ಕ್ರೀಡಾ ವಿಭಾಗದಲ್ಲಿ ಆಶಕ್ತಿ ಹೊಂದಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

ಅರುಣ್ ಸಾಗರ್ ಪುತ್ರ ಸೂರ್ಯ ಸಾಗರ್ ವಿದೇಶಿ ಕ್ರೀಡೆ ಮಾಕ್ಸ್ ಮೌಥಾಯ್‍ಯಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಹೌದು, ಅಂತರಾಷ್ಟ್ರೀಯ ಮಟ್ಟದ ಮಾಕ್ಸ್ ಮೌಥಾಯ್ ಸ್ಪರ್ಧೆ ಥಾಯ್ಲಂಡ್‍ನ ಪಟಾಯಲ್ಲಿ ನಡೆದಿತ್ತು. ಇದರಲ್ಲಿ ವಿವಿಧ ದೇಶಗಳು ಭಾಗಿಯಾಗಿದ್ದವು. ಇದೇ ರೀತಿ ಈ ಸ್ಪರ್ಧೆಯಲ್ಲಿ ಅರುಣ್ ಪುತ್ರ ಸೂರ್ಯ ಭಾರತದಿಂದ ಸ್ಪರ್ಧೆ ಮಾಡಿದ್ದರು.

ಸ್ಪರ್ಧೆಯಲ್ಲಿ ಥಾಯ್ ಫೈಟರ್ ಅರ್ಪಿಂಗ್ ಚಿತಾಂಗ್ ವಿರುದ್ಧ ಸೂರ್ಯ ಗೆಲುವು ಸಾಧಿಸಿದ್ದರು. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಮಾಕ್ಸ್ ಮೌಥಾಯ್ ಸ್ಪರ್ಧೆಯಲ್ಲಿ ಭಾರತಕ್ಕೆ ಗೆಲುವು ಸಿಕ್ಕಿದೆ.

ಸೂರ್ಯ ಮೌಥಾಯ್ ನಲ್ಲಿ ಮೂರು ವರ್ಷಗಳಿಂದ ಮೈಸೂರಿನ ವಿಕ್ರಮ್ ನಾಗರಾಜ್ ಬಳಿ ತರಬೇತಿ ಪಡೆಯುತ್ತಿದ್ದಾರೆ. ಈಗ ಥಾಯ್ಲಂಡ್ ನಲ್ಲಿ ನಡೆದ ಸ್ಪರ್ಧೆ ಗೆದ್ದಿರುವ ಸೂರ್ಯನಿಗೆ ಒಲಂಪಿಕ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆಯಿದೆಯಂತೆ. ಹೀಗಾಗಿ ಸೂರ್ಯ ಈಗಿನಿಂದಲೇ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ತಂದೆ ಅರುಣ್ ಅವರು ಮಾತನಾಡಿ, “ಮಕ್ಕಳು ಯಾವುದರಲ್ಲಿ ಆಶಕ್ತಿ ಹೊಂದಿರುತ್ತಾರೋ ಅದಕ್ಕೆ ನಾವು ಸಪೋರ್ಟ್ ಮಾಡಬೇಕು. ಅದೇ ರೀತಿ ನನ್ನ ಮಗ ಸೂರ್ಯ ಮೌಥಾಯ್ ನಲ್ಲಿ ತರಬೇತಿ ಪಡೆಯುತ್ತೇನೆ ಎಂದಾಗ ತುಂಬಾ ಖುಷಿಯಾಗಿತ್ತು. ಇದೀಗ ಈಗ ಅವನು ಭಾರತವೇ ಹೆಮ್ಮೆ ಪಡುವಂಥ ಕೆಲಸ ಮಾಡಿದ್ದಾನೆ” ಎಂದು ಪುತ್ರನ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಟ ಅರುಣ್ ಸಾಗರ್ ಅವರ ಮಗನ ಸಾಧನೆಗೆ ಸ್ಟಾರ್ ನಟರೂ ಕೂಡ ವಿಶ್ ಮಾಡಿದ್ದಾರೆ. ಸುದೀಪ್ ಅವರು ಟ್ವೀಟ್ ಮಾಡುವ ಮೂಲಕ ಸೂರ್ಯಗೆ ಶುಭಾ ಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *