ಚಾಮರಾಜನಗರ ಅಖಾಡದ ವಿಶೇಷತೆ ಏನು?

Public TV
3 Min Read

– ಧ್ರುವನಾರಾಯಣ, ಶ್ರೀನಿವಾಸ್ ಪ್ರಸಾದ್ ಪ್ಲಸ್, ಮೈನಸ್ ಏನು?

ಚಾಮರಾಜನಗರ: ಗುರು-ಶಿಷ್ಯರ ಯುದ್ಧ ನೆಲ ಚಾಮರಾಜನಗರ. ಗುರು ಅಲ್ಲ ಎಂದು ಧ್ರುವನಾರಾಯಣ್ ಅಖಾಡಕ್ಕೆ ಇಳಿದಿದ್ದಾರೆ. ಆದ್ರೆ ಶ್ರೀನಿವಾಸ್ ಪ್ರಸಾದ್ ಹಳೆಯ ರಾಜಕೀಯ ನೆಲ. 5 ಬಾರಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ನಾಲ್ಕು ಮೀಸಲು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿರುವುದು ಈ ಕ್ಷೇತ್ರದ ವಿಶೇಷ.

ಕಾಂಗ್ರೆಸ್ ನ ಆರ್.ಧ್ರುವನಾರಾಯಣ್ ಅವರು 2004ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಂತೇಮರಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ ಒಂದು ಮತದ ಅಂತರದಿಂದ ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಅಂದು ಸೋತಿದ್ದ ಬಿಜೆಪಿಯ ಎ.ಆರ್.ಕೃಷ್ಣಮೂರ್ತಿ 2009 ಹಾಗು 2014ರ ಲೋಕಸಭಾ ಚುನಾವಣೆಗಳಲ್ಲೂ ಪರಸ್ಪರ ಎದುರಾಳಿಗಳಾಗಿದ್ರು. ಧ್ರುವನಾರಾಯಣ್ ಗೆಲುವು ಸಾಧಿಸಿದ್ರು. ಆದ್ರೆ ಅದೇ ಎ.ಆರ್.ಕೃಷ್ಣಮೂರ್ತಿ ಬಿಜೆಪಿ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ.

ಚಾಮರಾಜನಗರ ಕ್ಷೇತ್ರದಲ್ಲಿ ಒಟ್ಟು 16,67,044 ಮತದಾರರಿದ್ದಾರೆ. ಇದರಲ್ಲಿ 8,34,392 ಮಂದಿ ಪುರುಷರಿದ್ದು, 8,32,541 ಮಹಿಳಾ ಮತದಾರರಿದ್ದಾರೆ.

ಜಾತಿವಾರು ಪ್ರಾಬಲ್ಯ:
ಜಾತಿವಾರು ಪ್ರಾಬಲ್ಯ ನೋಡೋದಾದ್ರೆ ಸುಮಾರು 4 ಲಕ್ಷದಷ್ಟು ಎಸ್ ಸಿ ಸಮುದಾಯದವರು ಈ ಕ್ಷೇತ್ರದಲ್ಲಿದ್ದಾರೆ. 3.75 ಲಕ್ಷ ಮಂದಿ ಲಿಂಗಾಯಿತರು, 2 ಲಕ್ಷದಷ್ಟು ಎಸ್‍ಟಿ, 1.50 ಲಕ್ಷ ಮಂದಿ ಉಪ್ಪಾರ, 1.25 ಲಕ್ಷ ಒಕ್ಕಲಿಗ, 90 ಸಾವಿರ ಕುರುಬರು, 70 ಸಾವಿರ ಮುಸ್ಲಿಮರು ಹಾಗೂ ಇತರೆ ಸಮುದಾಯದವರು ಸುಮಾರು 2.5 ಲಕ್ಷ ಮಂದಿ ಮತದಾರರು ಇದ್ದಾರೆ.

2014ರ ಫಲಿತಾಂಶ:
2014ರ ಚುನಾವಣೆಯಲ್ಲಿ 11,33,029 (72.83%) ಒಟ್ಟು ಮತಗಳು ಚಲಾವಣೆಯಾಗಿವೆ. ಇದರಲ್ಲಿ ಕಾಂಗ್ರೆಸ್‍ನ ಆರ್.ಧ್ರುವನಾರಾಯಣ್ 5,67,782(50.10%) ರಷ್ಟು ಮತಗಳು ಬಿದ್ದರೆ, ಬಿಜೆಪಿಯ ಎ.ಆರ್.ಕೃಷ್ಣಮೂರ್ತಿಯವರಿಗೆ 4,26,600 (37.64%) ರಷ್ಟು ಮತಗಳು ಬಿದ್ದಿತ್ತು. ಹಾಗೂ ಜೆಡಿಎಸ್ ನ ಎಂ.ಶಿವಣ್ಣ ಅವರಿಗೆ 58,760 (05.18%) ಮತಗಳು ಬಿದ್ದಿತ್ತು. ಒಟ್ಟಿನಲ್ಲಿ 2014 ರ ಚುನಾವಣೆಯಲ್ಲಿ ಧ್ರುವನಾರಾಯಣ್ ಅವರು 1,41,182 (12.30%) ಅಂತರದಲ್ಲಿ ಜಯದ ಮಾಲೆ ತಮ್ಮದಾಗಿಸಿಕೊಂಡಿದ್ದರು.

ಲೋಕಸಭಾ ಕ್ಷೇತ್ರ ವ್ಯಾಪ್ತಿ:
8 ವಿಧಾನಸಭಾ ಕ್ಷೇತ್ರಗಳಲ್ಲಿ 4 ಕಾಂಗ್ರೆಸ್, 2 ಬಿಜೆಪಿ, 1 ಜೆಡಿಎಸ್, 1 ಬಿಎಸ್‍ಪಿ ಶಾಸಕರನ್ನು ಹೊಂದಿದ್ದು, ಚಾಮರಾಜನಗರ – ಪುಟ್ಟರಂಗಶೆಟ್ಟಿ(ಕಾಂಗ್ರೆಸ್), ಹೆಚ್.ಡಿ.ಕೋಟೆ – ಅನಿಲ್ ಚಿಕ್ಕಮಾದು(ಕಾಂಗ್ರೆಸ್), ವರುಣಾ-ಡಾ.ಯತೀಂದ್ರ(ಕಾಂಗ್ರೆಸ್), ಹನೂರು – ನರೇಂದ್ರ(ಕಾಂಗ್ರೆಸ್), ಗುಂಡ್ಲುಪೇಟೆ – ನಿರಂಜನ್ (ಬಿಜೆಪಿ), ನಂಜನಗೂಡು – ಹರ್ಷವರ್ಧನ್(ಬಿಜೆಪಿ), ಟಿ. ನರಸೀಪುರ – ಅಶ್ವಿನ್ ಕುಮಾರ್(ಜೆಡಿಎಸ್), ಕೊಳ್ಳೇಗಾಲ- ಎನ್.ಮಹೇಶ್ (ಬಿಎಸ್‍ಪಿ).

ಪ್ರಮುಖ ಅಭ್ಯರ್ಥಿಗಳು:
ಧ್ರುವನಾರಾಯಣ- ಕಾಂಗ್ರೆಸ್
ಶ್ರೀನಿವಾಸಪ್ರಸಾದ್- ಬಿಜೆಪಿ

> ಧ್ರುವನಾರಾಯಣ
ಪ್ಲಸ್ ಪಾಯಿಂಟ್:
ಕ್ಷೇತ್ರದ ಹೆದ್ದಾರಿಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ತಂದಿರೋದು ಹಾಗೂ 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರ ಬಲ ಇರುವುದರಿಂದ ಈ ಬಾರಿ ಧ್ರುವನಾರಾಯಣ ಗೆಲುವಿನ ಪತಾಕೆ ಹಾರಿಸುವ ಸಾಧ್ಯಗಳಿವೆ. ಅಲ್ಲದೆ 5 ವರ್ಷದಲ್ಲಿ ಕ್ಷೇತ್ರದ ಜತೆ ನಿರಂತರ ಸಂಪರ್ಕ ಸಾಧಿಸಿರೋದು ಕೂಡ ಇವರಿಗೆ ಪ್ಲಸ್ ಆಗೋ ಸಾಧ್ಯತೆ ಹೆಚ್ಚಿದೆ. ಇಷ್ಟು ಮಾತ್ರವಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸಿನ ಮೇಲೆ ಅಹಿಂದ ವೋಟು ಬೀಳುವ ಸಾದ್ಯತೆಗಳು ಕೂಡ ದಟ್ಟವಾಗಿದೆ.

ಮೈನಸ್ ಪಾಯಿಂಟ್:
ಕ್ಷೇತ್ರದ ಕೆಲವು ಕಡೆ ಆಡಳಿತ ವಿರೋಧಿ ಅಲೆ ಇರುವುದು. ಸ್ಥಳೀಯ ಮಟ್ಟದಲ್ಲಿ ಬಿಜೆಪಿ-ಕಾಂಗ್ರೆಸ್ ಸಮಬಲ ಫೈಟ್ ಇರುವುದು ಹಾಗೂ ಕೊಳ್ಳೇಗಾಲದಲ್ಲಿ ಬಿಎಸ್‍ಪಿ ಹೆಚ್ಚು ಪ್ರಬಲ ಆಗಿರೋದರಿಂದ ಧ್ರುವನಾರಾಯಣ ಅವರಿಗೆ ಕೆಲವೊಂದು ಅಹಿಂದ ಮತ ಸಿಗದೇ ಇರಬಹುದಾದ ಸಾಧ್ಯಗಳು ಕೂಡ ಇವೆ.

> ಶ್ರೀನಿವಾಸ್ ಪ್ರಸಾದ್
ಪ್ಲಸ್ ಪಾಯಿಂಟ್:
ಕ್ಷೇತ್ರದ ಬಗ್ಗೆ ಇಂಚಿಂಚೂ ಸೋಲು-ಗೆಲುವಿನ ಜಾಡು ಗೊತ್ತಿರುವುದು. ಪ್ರಧಾನಿ ನರೇಂದ್ರ ಮೋದಿ ಅಲೆ ಈ ಕ್ಷೇತ್ರದಲ್ಲೂ ವ್ಯಾಪಿಸಿರೋದು. ಹಾಗೂ ಈ ಬಾರಿ ಹಲವು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಲ ಹೆಚ್ಚಿಸಿಕೊಂಡಿರೋದು ಶ್ರೀನಿವಾಸ್ ಪ್ರಸಾದ್ ಅವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ಲಸ್ ಆಗುವ ಸಾಧ್ಯತೆಗಳಿವೆ.

ಮೈನಸ್ ಪಾಯಿಂಟ್:
ವಯಸ್ಸಿನ ಕಾರಣದಿಂದಾಗಿ ಹೆಚ್ಚು ಕಡೆ ಪ್ರಚಾರ ಸಾಧ್ಯವಾಗದಿರೋದು. ಕಡೇ ಕ್ಷಣದಲ್ಲಿ ಸ್ಪರ್ಧೆ ಮಾಡಲು ಒಪ್ಪಿಗೆ ಸೂಚಿಸಿದ್ದು ಮತ್ತು ಮೈತ್ರಿ ಪಕ್ಷಗಳ ಶಾಸಕರ ಬಲ ಹೆಚ್ಚಾಗಿರೋದು ಮೈನಸ್ ಅಂಶಗಳಾಗಿದೆ.

Share This Article
Leave a Comment

Leave a Reply

Your email address will not be published. Required fields are marked *