ಊರ್ವಶಿ ಹಿಂಬದಿಗೆ ಹೊಡೆದ ಬೋನಿ ಕಪೂರ್- ಟ್ರೋಲರ್ಸ್‌ಗೆ ಚಳಿ ಬಿಡಿಸಿದ `ಐರಾವತ’ ನಟಿ

Public TV
2 Min Read

ಮುಂಬೈ: ಬಾಲಿವುಡ್ ಬೆಡಗಿ, ‘ಐರಾವತ’ ಚಿತ್ರದ ನಾಯಕಿ ಊರ್ವಶಿ ರೌಟೆಲಾ ಹಿಂಬದಿಗೆ ನಿರ್ಮಾಪಕ, ದಿ. ನಟಿ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಹೊಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದು, ಟ್ರೋಲ್ ಮಾಡುವವರಿಗೆ ನಟಿ ಚಳಿ ಬಿಡಿಸಿದ್ದಾರೆ.

ಹೌದು. ಊರ್ವಶಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ರು. ಇದರಿಂದ ಸಿಟ್ಟಿಗೆದ್ದ ನಟಿ, ನಿಮಗೆ ಹೆಣ್ಣಮಕ್ಕಳಿಗೆ ಗೌರವ ಕೊಡಲು ಆಗುವುದಿಲ್ಲ ಎಂದರೆ ಹೆಣ್ಣು ಮಕ್ಕಳ ಪವರ್ ಬಗ್ಗೆ ಮಾತನಾಡಿಬೇಡಿ ಎಂದು ಟ್ವೀಟ್ ಮಾಡುವ ಮೂಲಕ ಖಡಕ್ ಉತ್ತರ ನೀಡಿದ್ದಾರೆ.

https://twitter.com/UrvashiRautela/status/1112750029444284416

ಅಲ್ಲದೆ ಮತ್ತೊಂದು ಟ್ವೀಟ್‍ನಲ್ಲಿ, ನಾನು ಬೆಳಗ್ಗೆ ಎದ್ದು ಸಾಮಾಜಿಕ ಜಾಲತಾಣದಲ್ಲಿ ನೋಡಿದಾಗ ನನ್ನ ಹಾಗೂ ಬೋನಿ ಕಪೂರ್ ಸರ್ ಅವರ ವಿಡಿಯೋ ಟ್ರೋಲ್ ಮಾಡುತ್ತಿರುವುದನ್ನು ನೋಡಿ ನನಗೆ ಶಾಕ್ ಆಯಿತು. ಬೋನಿ ಕಪೂರ್ ಅವರು ಜೆಂಟಲ್‍ಮೆನ್. ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ವಿಡಿಯೋ ಹಾಕುವ ಮೊದಲು ಅಥವಾ ಇನ್ನೊಬ್ಬರ ಹೆಸರು ಹಾಳು ಮಾಡುವ ಮೊದಲು ಯಾರು ಎರಡು ಬಾರಿ ಯೋಚಿಸುವುದಿಲ್ಲ. ಇದರಿಂದ ನನಗೆ ಬೇಸರವಾಗಿದೆ. ದಯವಿಟ್ಟು ಟ್ರೋಲ್ ಮಾಡುವುದನ್ನು ನಿಲ್ಲಿಸಿ. ನಾನು ಬೋನಿ ಕಪೂರ್ ಅವರನ್ನು ಗೌರವಿಸುತ್ತೇನೆ ಹಾಗೂ ಅವರ ಪರವಾಗಿ ನಿಲ್ಲುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ವೈರಲ್ ವಿಡಿಯೋದಲ್ಲೇನಿದೆ?:
ವಿಡಿಯೋದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಬೋನಿ ಕಪೂರ್ ಹಾಗೂ ಊರ್ವಶಿ ಫೋಟೋಗೆ ಪೋಸ್ ನೀಡಿದ್ದಾರೆ. ಪೋಸ್ ಕೊಡುತ್ತಿದ್ದ ಸಂದರ್ಭದಲ್ಲಿ ಬೋನಿ ಕಪೂರ್ ಅವರು ಊರ್ವಶಿ ಅವರ ಹಿಂಬದಿಗೆ ಹೊಡೆದಿದ್ದಾರೆ. ಈ ವಿಡಿಯೋವನ್ನು ಜನರು ಟ್ರೋಲ್ ಮಾಡಲು ಶುರು ಮಾಡಿದ್ದು, ಟ್ರೋಲರ್ಸ್‍ಗೆ ಊರ್ವಶಿ ಖಡಕ್ಕಾಗಿ ಪ್ರತಿಕ್ರಿಯಿಸಿದ್ದಾರೆ.

ಕಾರ್ಯಕ್ರಮವೇನು?
ಇತ್ತೀಚೆಗೆ ನಿರ್ಮಾಪಕ ಜಯಂತಿಲಾಲ್ ಗಾಡಾ ಅವರ ಮಗ ಅಕ್ಸಯ್ ಗಾಡಾ ಅವರ ಮದುವೆ ಮುಂಬೈನಲ್ಲಿ ನಡೆಯಿತು. ಈ ಮದುವೆ ಕಾರ್ಯಕ್ರಮಕ್ಕೆ ನಟಿ ಊರ್ವಶಿ ರೌಟೆಲಾ ಹಾಗೂ ನಿರ್ಮಾಪಕ ಬೋನಿ ಕಪೂರ್ ಕೂಡ ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಊರ್ವಶಿ ಹಾಗೂ ಬೋನಿ ಕಪೂರ್ ಅವರ ಈ ವಿಡಿಯೋವೊಂದು ವೈರಲ್ ಆಗಿತ್ತು.

Share This Article
Leave a Comment

Leave a Reply

Your email address will not be published. Required fields are marked *